‘ಹುಚ್ಚ’ ಸಿನಿಮಾಗೆ 21, ‘ಈಗ’ ಚಿತ್ರಕ್ಕೆ 10 ವರ್ಷ: ನೆನಪು ಹಂಚಿಕೊಂಡ ಕಿಚ್ಚ ಹೇಳಿದ್ದೇನು..?

ನಟ ಕಿಚ್ಚ ಸುದೀಪ್ ನಟನೆಯ ‘ಹುಚ್ಚ’ ಸಿನಿಮಾಗೆ ಭರ್ತಿ 21 ವರ್ಷ, ‘ಈಗ’ ಚಿತ್ರಕ್ಕೆ 10 ವರ್ಷ ಕಂಪ್ಲೀಟ್ ಆಗಿದೆ.

Written by - YASHODHA POOJARI | Last Updated : Jul 6, 2022, 10:55 AM IST
  • ‘ಹುಚ್ಚ’ ಸಿನಿಮಾಗೆ 21 ಮತ್ತು ‘ಈಗ’ ಚಿತ್ರಕ್ಕೆ ಭರ್ತಿ 10 ವರ್ಷ
  • ‘Unforgettable Moments’ ಎಂದ ನಟ ಕಿಚ್ಚ ಸುದೀಪ್
  • ಹಳೆಯ ದಿನಗಳನ್ನು ನೆನಪು ಮಾಡಿಕೊಂಡು ಖುಷಿ ಹಂಚಿಕೊಂಡ ಕಿಚ್ಚ
‘ಹುಚ್ಚ’ ಸಿನಿಮಾಗೆ 21, ‘ಈಗ’ ಚಿತ್ರಕ್ಕೆ 10 ವರ್ಷ: ನೆನಪು ಹಂಚಿಕೊಂಡ ಕಿಚ್ಚ ಹೇಳಿದ್ದೇನು..? title=
ನೆನಪು ಹಂಚಿಕೊಂಡ ಕಿಚ್ಚ ಸುದೀಪ್ ಹೇಳಿದ್ದೇನು..?

ಬೆಂಗಳೂರು: ಕಿಚ್ಚ ಸುದೀಪ್… ಕರುನಾಡಿನ ಆಸ್ತಿ. ಕಿಚ್ಚ ಅಂದ್ರೆ ಸಾಕು ಜೀವಕ್ಕೆ ಜೀವ ಕೊಡೊ ಅಭಿಮಾನಿ ಬಳಗವಿದೆ. ಕಿಚ್ಚ ಒಂದು ಸಿನಿಮಾದಲ್ಲಿ ನಟನೆ ಮಾಡ್ತಾ ಇದ್ದಾರೆ ಅಂದ್ರೆ ಸಾಕು ಆ ಸಿನಿಮಾ ರಿಲೀಸ್ ಆಗಿ ನೋಡೋ ತನಕವೂ ನಿದ್ದೆ ಬಿಟ್ಟು ಕಾದು ನೋಡೋ ಫ್ಯಾನ್ಸ್ ಫಾಲೋವಿಂಗ್ ಕಿಚ್ಚನಿಗಿದೆ..

ಈಗ ವಿಶ್ವದಲ್ಲಿ ಚಾಲ್ತಿಯಲ್ಲಿರೋ ಒಂದೇ ಒಂದು ಹೆಸ್ರು ಅಂದ್ರೆ ಅದು ‘ವಿಕ್ರಾಂತ್ ರೋಣ’. ಜೂಲೈ 28ಕ್ಕೆ ತೆರೆಗೆ ಅಪ್ಪಳಿಸೋಕೆ ಈ ಫ್ಯಾಂಟಸಿ ಸಿನಿಮಾ ಸಿದ್ಧವಾಗಿದೆ. ಈ ಸಿನಿಮಾ ಬಗ್ಗೆ ದಿನಕ್ಕೊಂದು ರೀತಿಯ ಮ್ಯಾಟರ್ ರಿವಿಲ್ ಆಗೋ ಮೂಲಕ ನೀರಿಕ್ಷೆಯಂತೂ ಅಗಸದೆತ್ತರಕ್ಕೆ ಏರಿದೆ ಅಂದ್ರೆ ತಪ್ಪಾಗಲ್ಲ. ‘ವಿಕ್ರಾಂತ್ ರೋಣ’ ಸಿನಿಮಾದ ‘ರಾರಾ ರಕ್ಕಮ್ಮ’ ಹಾಡು ಕೊಟ್ಟಿರೋ ಕಿಕ್ಕು ಮಾತ್ರ ಯಾವತ್ತಿಗೂ ಕಡಿಮೆಯಾಗಲ್ಲ.

ಇದನ್ನೂಓದಿ: 777 Charlie: ಫ್ರಾಕ್ ತೊಟ್ಟು ಮಿರ ಮಿರ ಮಿಂಚುತ್ತಾ ಬಂದಳು ನಮ್ಮ ‘ಚಾರ್ಲಿ’..!

ಈಗ ಮ್ಯಾಟರ್ ಏನಪ್ಪಾ ಅಂದ್ರೆ… ಕಿಚ್ಚನ ‘ಹುಚ್ಚ’ ಸಿನಿಮಾಗೆ ಭರ್ತಿ 21 ವರ್ಷ. ಇದಲ್ಲದೆ ಕಿಚ್ಚನ ನಟನಾ ಕೌಶಲ್ಯವನ್ನು ಇಡೀ ಪ್ರಪಂಚಕ್ಕೆ ಪರಿಯಿಸಿ, ಸಿಕ್ಕಾಪಟ್ಟೆ ಸದ್ದು ಮಾಡಿದ್ದ ‘ಈಗ’ ಚಿತ್ರಕ್ಕೆ ಇಂದಿಗೆ 10 ವರ್ಷ ಕಂಪ್ಲೀಟ್ ಆಗಿದೆ. ಈ ಖುಷಿಯನ್ನು ಸ್ವತಃ ಕಿಚ್ಚ ಸುದೀಪ್ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘A beautiful day in my life. A big thanks to each one from the team of #huccha and #Eega for giving me those unforgettable moments’ ಅಂತಾ ಕಿಚ್ಚ ಬರೆದುಕೊಂಡಿದ್ದಾರೆ. ಇದರ ಜೊತೆಗೆ ‘one made me, one elevated me’ ಅಂತಾ ತಮ್ಮ ಹಳೆಯ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಇದನ್ನು ನೋಡಿ ಕಿಚ್ಚನ ಸಹಸ್ರಾರು ಅಭಿಮಾನಿಗಳಿಗೆ ದಿಲ್ ಖುಷ್ ಆಗಿದೆ. ಅರೇ ಇಷ್ಟು ಬೇಗ ‘ಹುಚ್ಚ’ ಸಿನಿಮಾಗೆ 21 ವರ್ಷನಾ? ಅಂತಾ ಫ್ಯಾನ್ಸ್ ಪ್ರಶ್ನೆ ಮಾಡುತ್ತಿದ್ದಾರೆ. ಅಭಿಮಾನಿಗಳು ಇದೀಗ ಕಿಚ್ಚನ ಪೋಸ್ಟ್ ನೋಡಿ ಶೇರ್ ಮಾಡೋದ್ರ ಮೂಲಕ ವಿಶೇಷವಾಗಿ ವಿಶ್ ಕೂಡ ಮಾಡುತ್ತಿದ್ದಾರೆ.

ಇದನ್ನೂಓದಿ: 150 ಕೋಟಿ ಕ್ಲಬ್‌ ಸೇರಿದ '777 ಚಾರ್ಲಿ'..! 15 ಕೋಟಿ ಹಂಚಿದ ರಕ್ಷಿತ್‌ ಶೆಟ್ಟಿ

ಕಿಚ್ಚ ಕನ್ನಡ ಇಂಡಸಸ್ಟ್ರಿಯಲ್ಲಿ ಮಾತ್ರ ಅಲ್ಲ ಭಾರತೀಯ ಚಿತ್ರರಂಗದಲ್ಲೇ ಒಂದು ಮಿಂಚು. ಬಾಲಿವುಡ್ ಜೊತೆಗೂ ಒಳ್ಳೆ ನಂಟು ಹೊಂದಿದ್ದಾರೆ. ಇದೀಗ ಎಲ್ಲರ  ಕಣ್ಣು ‘ವಿಕ್ರಾಂತ್ ರೋಣ’ನತ್ತ ನೆಟ್ಟಿದೆ. ಜೂಲೈ 28ರವರೆಗೆ ಕಾದು ‘ವಿಕ್ರಾಂತ್ ರೋಣ’ನ ಹವಾ ಹೆಂಗಿರುತ್ತೆ ಅಂತಾ ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News