Born to shine : ಜೀ ಎಂಟರ್‌ಟೈನ್‌ಮೆಂಟ್ ಮತ್ತು ಗಿವ್ ಇಂಡಿಯಾ ಸಹಭಾಗಿತ್ವದಲ್ಲಿ ಬೋರ್ನ್ ಟು ಶೈನ್ ವಿಶೇಷ ಕಾರ್ಯಕ್ರಮದ ಅಡಿಯಲ್ಲಿ 30 ವಿಜೇತರನ್ನು ಸನ್ಮಾನಿಸಲಾಯಿತು. ದೇಶದ 8 ನಗರಗಳಿಂದ ಆಯ್ಕೆಯಾದ 5 ರಿಂದ 15 ವರ್ಷದೊಳಗಿನ ಬಾಲಕಿಯರಿಗೆ 4 ಲಕ್ಷ ರೂ.ಗಳ ವಿದ್ಯಾರ್ಥಿ ವೇತನ ಮತ್ತು ಮೂವತ್ತು ತಿಂಗಳ ಮೆಂಟರಿಂಗ್ ಮೂಲಕ ಪುರಸ್ಕರಿಸಲಾಯಿತು.
ಕಳೆದ ಒಂದು ವರ್ಷದ ಅವಧಿಯಲ್ಲಿ, ದೇಶದಾದ್ಯಂತ ಕಲಾ ಕ್ಷೇತ್ರಕ್ಕೆ ಸಂಬಂಧಿಸಿದ 5000 ಕ್ಕೂ ಹೆಚ್ಚು ಹೆಣ್ಣು ಮಕ್ಕಳು, ಈ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ್ದರು. 5 ಮಂದಿ ಅನುಭವಿಗಳ ತೀರ್ಪುಗಾರ ತೀರ್ಪಿನ ಅನ್ವಯ, ಮೂವತ್ತು ಪ್ರತಿಭಾವಂತ ಹುಡುಗಿಯರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಯಿತು. ವಿಶೇಷ ತೀರ್ಪುಗಾರರಾಗಿ ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾದ ಪುನಿತ್ ಗೋಯೆಂಕಾ, ಸ್ವದೇಶ್ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ಮತ್ತು ನಿರ್ದೇಶಕರಾದ ಜರೀನಾ ಸ್ಕ್ರೂವಾಲಾ, ಸುಬ್ರಮಣ್ಯಮ್ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ (ಸಾಪಾ)ನ ಸಹ ಸಂಸ್ಥಾಪಕ ಸಿ ಇಒ ಡಾ. ಬಿಂದು ಸುಬ್ರಮಣ್ಯಂ, ಸಮರ ಮಹೀಂದ್ರಾ ,ಬ್ರಹ್ಮನಾದ್ ಕಲ್ಚರಲ್ ಸೊಸೈಟಿ ಸ್ಥಾಪಕರಾದ ರೂಪಕ್ ಮೆಹ್ತಾ, ಪಾಲ್ಗೊಂಡಿದ್ದರು.
ಇದನ್ನೂ ಓದಿ : RRR Part 2 : ʼಕಾಂತಾರʼ ಸೇರಿ ಎಲ್ಲಾ ದಾಖಲೆ ಉಡೀಸ್ ಮಾಡೋಕೆ ರಾಜಮೌಳಿ ಪ್ಲಾನ್...!
ವಿಜ್ಞಾನ, ಗಣಿತ ಮತ್ತು ಕ್ರೀಡಾ ಕ್ಷೇತ್ರದಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹಿಸಲು ದೇಶದಲ್ಲಿ ಹಲವಾರು ವಿದ್ಯಾರ್ಥಿವೇತನ ಕಾರ್ಯಕ್ರಮಗಳಿವೆ. ಆದರೆ ಕಲಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯಕ್ರಮ ಇದೇ ಮೊದಲು ಎನ್ನಬಹುದು.
ಇಂದಿಗೂ, ನಮ್ಮ ದೇಶದ ಹೆಚ್ಚಿನ ಭಾಗಗಳಲ್ಲಿ, ಹೆಣ್ಣುಮಕ್ಕಳ ಆಸೆ, ಮಹತ್ವಾಕಾಂಕ್ಷೆಗಳನ್ನು, ಅದರಲ್ಲೂ ವಿಶೇಷವಾಗಿ ಕಲಾ ಕ್ಷೇತ್ರದಲ್ಲಿನ ಅವರ ಆಸಕ್ತಿಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಈ ರೀತಿಯ ಪ್ರತಿಭಾವಂತ ಹೆಣ್ಣು ಮಕ್ಕಳನ್ನು ಹುಡುಕುವ ಕಾರ್ಯಕ್ರಮವೇ ಬಾರ್ನ್ ಟು ಶೈನ್. ಇಂಥಹ ಪ್ರತಿಭೆಗಳನ್ನು ಹುಡುಕಿ, ಪ್ರೋತ್ಸಾಹಿಸಿ ಅವರ ಕನಸುಗಳಿಗೆ ರೆಕ್ಕೆ ನೀಡುವ ಈ ಪ್ರಯತ್ನ ಮುಂದೊಂದು ದಿನ ದೊಡ್ಡ ಮಟ್ಟದ ಪರಿಣಾಮ ಬೀರುವುದರಲ್ಲಿ ಎರಡು ಮಾತಿಲ್ಲ. ಈ ಯುವತಿಯರು ನಾಳೆ ದೇಶದ ಇತಿಹಾಸದಲ್ಲಿ ಸುವರ್ಣ ಯುಗವನ್ನು ತೆರೆದಿಡುತ್ತಾರೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ತಮ್ಮ ಪ್ರತಿಭೆಯ ಮೂಲಕ ಬಾನೆತ್ತರಕ್ಕೆ ಹಾರಿ ಹೊಸ ಛಾಪು ಮೂಡಿಸುವ ದಿನಗಳು ಕೂಡಾ ದೂರವಿಲ್ಲ.
ಇದನ್ನೂ ಓದಿ : ʼಗಾನಬಜಾನ ಸೀಸನ್ 3ʼ ಶುರು : ಗ್ರ್ಯಾಂಡ್ ಓಪನಿಂಗ್‌ನಲ್ಲಿ ʼಕಾಂತಾರʼ ಚಿತ್ರತಂಡ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.