/kannada/photo-gallery/englands-legendary-test-batsman-joe-root-will-break-sachin-tendulkar-4-world-records-249475 ಒಂದಲ್ಲ ಎರಡಲ್ಲ ಸಚಿನ್ ಅವರ 4 ವಿಶ್ವ ದಾಖಲೆಗಳನ್ನು ಬ್ರೇಕ್‌ ಮಾಡಲಿದ್ದಾರೆ ಈ 33 ವರ್ಷದ ಬ್ಯಾಟ್ಸ್‌ಮನ್‌!  ಒಂದಲ್ಲ ಎರಡಲ್ಲ ಸಚಿನ್ ಅವರ 4 ವಿಶ್ವ ದಾಖಲೆಗಳನ್ನು ಬ್ರೇಕ್‌ ಮಾಡಲಿದ್ದಾರೆ ಈ 33 ವರ್ಷದ ಬ್ಯಾಟ್ಸ್‌ಮನ್‌! 249475

ವಿಷ್ಣುವರ್ಧನ್‌-ಭಾರತಿ ಮದುವೆ ದಿನವೇ ತಪ್ಪಿತು ದೊಡ್ಡ ಅನಾಹುತ! ಮದುವೆ ದಿನ ಏನು ನಡೆಯಿತು ಗೊತ್ತಾ?

Vishnuvardhan-Bharti's wedding: ಗೆಳೆಯನ ಮಾತಿನಂತೆ ವಿಷ್ಣು-ಭಾರತಿ ಅವರು ಕಲ್ಯಾಣ ಮಟಪದ ಬಾಲ್ಕನಿ ಹತ್ತಿರ ಬಂದು ನಿಂತರು. ಅಭಿಮಾನಿಗಳು "ರಾಮಾಚಾರಿ"ಗೆ ಜೈ ಎಂದು ಜೈಕಾರ ಹಾಕುತ್ತಿದ್ದರೆ, ಮತ್ತೊಂದು ಕಡೆ ಜನರ ಮಧ್ಯದಿಂದ ಎರಡು ದೊಡ್ಡ ಕಲ್ಲುಗಳು "ವಿಷ್ಣು-ಭಾರತಿ" ಅವರ ಮೇಲೆ ತೂರಿ ಬಂದವು.

Written by - Puttaraj K Alur | Last Updated : Sep 16, 2024, 06:13 PM IST
  • ವಿಷ್ಣುವರ್ಧನ್‌-ಭಾರತಿ ಮದುವೆ ದಿನ ತಪ್ಪಿತು ದೊಡ್ಡ ಅನಾಹುತ!
  • ಸಾಹಸಸಿಂಹನ ಮದುವೆ ದಿನ ಏನು ನಡೆಯಿತು ಗೊತ್ತಾ?
  • ಆ ಎರಡು ಕಲ್ಲುಗಳು ತೂರಿಬರಲು ಕಾರಣವೇನು..?
ವಿಷ್ಣುವರ್ಧನ್‌-ಭಾರತಿ ಮದುವೆ ದಿನವೇ ತಪ್ಪಿತು ದೊಡ್ಡ ಅನಾಹುತ! ಮದುವೆ ದಿನ ಏನು ನಡೆಯಿತು ಗೊತ್ತಾ? title=
ವಿಷ್ಣು-ಭಾರತಿ ಮದುವೆಯಲ್ಲಿ ಏನಾಯ್ತು?

Vishnuvardhan-Bharti's wedding: ಅಂದು 27 ಫೆಬ್ರವರಿ 1975... ಅದೊಂದು ತಾರಾದಂಪತಿಗಳ ಮದುವೆ ಸಮಾರಂಭ... 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಚಂದನವನದ ತಾರೆ ಭಾರತಿ ಹಾಗೂ "ನಾಗರಹಾವು" ಚಿತ್ರದ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಸಾಹಸಿಂಹ ಖ್ಯಾತಿಯ ಡಾ. "ವಿಷ್ಣುವರ್ಧನ್" ಜೋಡಿ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಡುವ ಶುಭದಿನ. ತಾರೆಯರ ಮದುವೆ ಅಂದ್ರೇ ಗೊತ್ತಲ್ಲ, ಅಲ್ಲಿ ಅದ್ದೂರಿ ಸಂಭ್ರಮ, ಜನಜಂಗೂಳಿ, ಎಲ್ಲಿ ನೋಡಿದರಲ್ಲಿ ಹಬ್ಬದ ವಾತಾವರಣ. 

ವಿಷ್ಣುವರ್ಧನ್ ಅವರ ಕುಟುಂಬದವರು ಕಲ್ಯಾಣ ಮಂಟಪದ ಒಳಗೆ ಬರದಿರುವಷ್ಟು ಹೊರಗಡೆ ಜನರು ತುಂಬಿದ್ದರು. 200ಕ್ಕೂ ಪೊಲೀಸ್ ಸಿಬ್ಬಂದಿಗಳ ಸರ್ಪಗಾವಲು. ಒಳಗಡೆ ಮದುವೆ ಶಾಸ್ತ್ರ ಜೋರಾಗಿ ನಡೆದಿದ್ದರೆ ಹೊರಗಡೆ ಸಾವಿರಾರು ಅಭಿಮಾನಿಗಳು ತಾರಾ ನವಜೋಡಿಯನ್ನು ಮದುವೆ ಡ್ರೆಸ್‌ನಲ್ಲಿ ನೋಡಬೇಕು ಅಂತಾ ಕಾಯುತ್ತಿದ್ದರು. ಹೊರಗಡೆ ಅಭಿಮಾನಿಗಳು ಕಾಯುತ್ತಿರುವದನ್ನು ಮನಗಂಡ ಕುಚುಕು ಗೆಳೆಯ ರೆಬೆಲ್‌ ಸ್ಟಾರ್‌ ಅಂಬರೀಷ್ ಅವರು ವಿಷ್ಣುವರ್ಧನ್ ಹತ್ತಿರ ಬಂದು "ಒಂದು ಸಲ ಹೊರಗಡೆ ಬಂದು ಅಭಿಮಾನಿಗಳಿಗೆ ಮುಖ ತೋರಿಸಿ ಹಾಯ್ ಹೇಳ್ಬಿಡಪ ಅಂದ್ರು".

ಇದನ್ನೂ ಓದಿ: Ramachari Kannada Serial: ರಾಮಾಚಾರಿ ಸೀರಿಯಲ್ ನಟ ರಿತ್ವಿಕ್ ನಿಜವಾದ ಪ್ರೇಯಸಿ ಯಾರು ಗೊತ್ತಾ? ಚಾರುಗಿಂತ ಸಖತ್‌ ಕ್ಯೂಟ್‌ ಈಕೆ!

ಗೆಳೆಯನ ಮಾತಿನಂತೆ ವಿಷ್ಣು-ಭಾರತಿ ಅವರು ಕಲ್ಯಾಣ ಮಟಪದ ಬಾಲ್ಕನಿ ಹತ್ತಿರ ಬಂದು ನಿಂತರು. ಅಭಿಮಾನಿಗಳು "ರಾಮಾಚಾರಿ"ಗೆ ಜೈ ಎಂದು ಜೈಕಾರ ಹಾಕುತ್ತಿದ್ದರೆ, ಮತ್ತೊಂದು ಕಡೆ ಜನರ ಮಧ್ಯದಿಂದ ಎರಡು ದೊಡ್ಡ ಕಲ್ಲುಗಳು "ವಿಷ್ಣು-ಭಾರತಿ" ಅವರ ಮೇಲೆ ತೂರಿ ಬಂದವು. ಕಲ್ಲುಗಳು ಬರುವದನ್ನು ಕಂಡ ವಿಷ್ಣುವರ್ಧನ್ ಅವರು ಭಾರತಿ ಅವರ ತಲೆ ಹಿಡಿದು ಕೆಳಗೆ ಬಗ್ಗಿಸಿದರು. ಸ್ವಲ್ಪ ಅಂತರದಲ್ಲೇ ಅವೆರಡು ಕಲ್ಲುಗಳು ಇವರ ತಲೆಯ ಮೇಲಿಂದ ತೂರಿ ಹೋದವು. ಭಾರತಿ ಅವರನ್ನು ಬಗ್ಗಿಸದಿದ್ರೆ ಅವತ್ತು ದೊಡ್ಡ ಅನಾಹುತ ಆಗಿರುತ್ತಿತ್ತು. ಅಷ್ಟರಲ್ಲಿ ಪೊಲೀಸರು ಜಾಗೃತಗೊಂಡರು. ಅಲ್ಲಿದ್ದವರು ಕಲ್ಲು ಎಸೆದವರನ್ನು ಹುಡುಕಿದರೂ ಸಿಗಲಿಲ್ಲ. ಅಲ್ಲಿದ್ದ ವಾತಾವರಣ ಗಲಿಬಿಲಿಯಾಗಿ ಅಸ್ತವ್ಯಸ್ತವಾಯಿತು. ಪಕ್ಕದಲ್ಲೇ ಇದ್ದ ಕುಚುಕು ಗೆಳೆಯ ಅಂಬರೀಷ್ ಕೋಟೆಯಂತೆ ವಿಷ್ಣು-ಭಾರತಿ ಅವರಿಗೆ ರಕ್ಷಣೆ ನೀಡಿ ಒಳಗೆ ಕರೆದುಕೊಂಡು ಹೋದರು.

ಆ ಎರಡು ಕಲ್ಲುಗಳು ತೂರಿಬರಲು ಕಾರಣವೇನು..? ವಿಷ್ಣುವರ್ಧನ್ ಅಥವಾ ಭಾರತಿ ಯಾರಿಗಾದ್ರೂ ಮೋಸ, ವಂಚನೆ, ತೊಂದರೆ ಮಾಡಿದ್ರಾ.! ವಿಷ್ಣುವರ್ಧನ್ ಭಾರತಿ ಅವರನ್ನು ಮದುವೆ ಆಗಿದ್ದಕ್ಕಾ..!! ಮತ್ಯಾಕೆ ನವ ದಂಪತಿಗೆ ತೊಂದರೆ ಕೊಡಲಾಯಿತು? ವಿಷ್ಣುವರ್ಧನ್ ʼಗಂಧದ ಗುಡಿʼ ಸಿನೆಮಾ ಮಾಡಬಾರದಾಗಿತ್ತು. ಆ ಸಿನಿಮಾದಲ್ಲಿ ನಡೆದ ಘಟನೆಯ ನಂತರ ನಿಜಕ್ಕೂ ವಿಷ್ಣುವರ್ಧನ್ ನರಕಯಾತನೆ ಪಟ್ಟರು. ಶತ್ರುಗಳಿಗೂ ಇಂತಹ ತೊಂದರೆ ಆಗಬಾರದು ಅಂತಾ ಯೋಚಿಸುವಂತ ಗುಣವಿರುವ ಸಹನಾಮೂರ್ತಿ ವಿಷ್ಣುವರ್ಧನ್. ಅಂತವರಿಗೆ ತೊಂದರೆ ಕೊಡಲು ನಿಮಗೆ ಮನಸ್ಸಾದರೂ ಹೇಗೆ ಬಂತು? ಅವರ ಬೆಳವಣಿಗೆ ತಡೆಯಲು ಯಾರಿಗೂ ಆಗಲಿಲ್ಲ, ಅಭಿಮಾನಿಗಳ ಮನದಲ್ಲಿ ಸಾಹಸಸಿಂಹ ಶಾಶ್ವತ ಸ್ಥಾನ ಗಳಿಸಿದ್ದಾರೆ. ಹಿರಿಯರ ಆಶೀರ್ವಾದ ಹಾಗೂ ಅಭಿಮಾನಿಗಳ ಹಾರೈಕೆ ಇದ್ದರೆ ಯಾರು ಹೇಗ್ ಬೇಕಾದ್ರೂ ಬೆಳೆಯಬಹುದು ಅನ್ನೋದಕ್ಕೆ ಡಾ.ವಿಷ್ಣುವರ್ಧನ್ ನಿದರ್ಶನ.

ಇದನ್ನೂ ಓದಿ: Anchor Anushree: ಕೂಡಿ ಬಂತು ಕಂಕಣಭಾಗ್ಯ.. ಶೀಘ್ರದಲ್ಲೇ ಆಂಕರ್‌ ಅನುಶ್ರೀ ಮದ್ವೆ!? ಹುಡ್ಗ ಇವ್ರೇ!

✍️ ಸುಪ್ರೀಮ್ ಸೂರಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.