ಮಗುವಿಗೆ ಅಪ್ಪು ಹೆಸರಿಡಲು ದೊಡ್ಮನೆಗೆ ಕೋರಿದ ಅಭಿಮಾನಿ

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ನಮ್ಮನ್ನಗಲಿ ವರ್ಷ ಕಳೆದರೂ ಅವರ ಮೇಲಿನ ಅಭಿಮಾನ ಮಾತ್ರ ಕಡಿಮೆಯಾಗಿಲ್ಲ.ಇಂದಿಗೂ ಸಾವಿರಾರು ಅಭಿಮಾನಿಗಳು ದಿನನಿತ್ಯ ಅವರನ್ನ ಸ್ಮರಿಸ್ತಾರೆ. ಗುಣಗಾಣ ಮಾಡ್ತಾರೆ. 

Written by - Zee Kannada News Desk | Last Updated : Aug 18, 2022, 11:52 PM IST
  • ಅವರಿಗೆ ಹುಟ್ಟಿದ ಗಂಡು ಮಗುವಿಗೆ ಅಪ್ಪು ಅಂತ ನಾಮಕರಣ ಮಾಡಬೇಕು.
  • ಅದೂ ಅಪ್ಪು ಅವರ ಮನೆಯಲ್ಲಿಯೇ ಅಪ್ಪು ಸಂಬಂಧಿಗಳು ಯಾರಾದರೂ ಒಬ್ರು ಅಪ್ಪು ಅಂತ ಹೆಸರಿಡಬೇಕು ಅಂತ ಮನವಿ ಮಾಡಿಕೊಂಡಿದ್ದಾರೆ.
ಮಗುವಿಗೆ ಅಪ್ಪು ಹೆಸರಿಡಲು ದೊಡ್ಮನೆಗೆ ಕೋರಿದ ಅಭಿಮಾನಿ  title=
screengrab

ಗದಗ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ನಮ್ಮನ್ನಗಲಿ ವರ್ಷ ಕಳೆದರೂ ಅವರ ಮೇಲಿನ ಅಭಿಮಾನ ಮಾತ್ರ ಕಡಿಮೆಯಾಗಿಲ್ಲ.ಇಂದಿಗೂ ಸಾವಿರಾರು ಅಭಿಮಾನಿಗಳು ದಿನನಿತ್ಯ ಅವರನ್ನ ಸ್ಮರಿಸ್ತಾರೆ. ಗುಣಗಾಣ ಮಾಡ್ತಾರೆ. ಜಾತ್ರೆ ನಿಬ್ಬಣಗಳಲ್ಲಿ ಅವರ ಪೋಟೋ ಪ್ರದರ್ಶನ ಮಾಡಿ ಹುಚ್ಚೆದ್ದು ಕುಣಿತಾರೆ. ಇಂದಿಗೂ ಅವರನ್ನ ನೆನೆದು ಕಣ್ಣೀರು ಹಾಕ್ತಿದ್ದಾರೆ. ಇಲ್ಲೊಬ್ಬ ಅಭಿಮಾನಿ ಇದ್ದಾರೆ. ಅವರಿಗೆ ಹುಟ್ಟಿದ ಗಂಡು ಮಗುವಿಗೆ ಅಪ್ಪು ಅಂತ ನಾಮಕರಣ ಮಾಡಬೇಕು. ಅದೂ ಅಪ್ಪು ಅವರ ಮನೆಯಲ್ಲಿಯೇ ಅಪ್ಪು ಸಂಬಂಧಿಗಳು ಯಾರಾದರೂ ಒಬ್ರು ಅಪ್ಪು ಅಂತ ಹೆಸರಿಡಬೇಕು ಅಂತ ಮನವಿ ಮಾಡಿಕೊಂಡಿದ್ದಾರೆ. 

ಇದನ್ನೂ ಓದಿ : Yuzvendra Chahal-Dhanashree : ಧನಶ್ರೀ, ಯುಜ್ವೇಂದ್ರ ಚಹಾಲ್ ದಾಂಪತ್ಯದಲ್ಲಿ ಬಿರುಕು..!

ಅಂದಹಾಗೆ ಗದಗ ಜಿಲ್ಲೆಯ ನರಗುಂದ ಪಟ್ಟಣದ ಕಸಬಾ ಓಣಿಯ ನಿವಾಸಿ ಮಾರುತಿ ಬೆಳವಣಿಕಿ ಮತ್ತು ಸಂಗೀತ ದಂಪತಿಗೆ ಗಂಡು ಮಗು ಜನನವಾಗಿದೆ. ಹೆರಿಗೆಯಾಗಿ ಸುಮಾರು 10 ದಿನಗಳಾಗಿವೆ . ಆದ್ರೆ ದಂಪತಿ ಮಾತ್ರ ಮಗುವಿಗೆ ಇನ್ನೂ ನಾಮಕರಣ ಮಾಡಿಲ್ಲ. ಕಾರಣ ಅವರಿಗೆ ತುಂಬು ಅಭಿಮಾನವೊಂದಿದೆ. ಅದು ತಮ್ಮ ಮಗುವಿಗೆ ಅಪ್ಪು ಅಂತ ನಾಮಕರಣ ಮಾಡಬೇಕು. ಅದರಲ್ಲೂ ಬೆಂಗಳೂರಿನಲ್ಲಿ ಅಪ್ಪು ಅವರ ಮನೆಯಲ್ಲಿಯೇ ನಾಮಕರಣ ಮಾಡಬೇಕು. ಶಿವರಾಜ್ ಕುಮಾರ್ ಆಗಲಿ ಅಥವಾ ರಾಘಣ್ಣ ಅವರಾಗಲಿ ಯಾರಾದರೂ ಒಬ್ರು ನಮ್ಮ ಮಗುವಿಗೆ ಅಪ್ಪು ಅಂತ ಹೆಸರಿಡಲಿ ಅನ್ನೋ ಹಂಬಲ ಅವರದ್ದಾಗಿದೆ. 

ಇದನ್ನೂ ಓದಿ : IND vs ZIM ಪಂದ್ಯದ Playing 11 ನಿಂದ ಶಾರ್ದುಲ್ ಠಾಕೂರ್ ಔಟ್!

ಅಂದಹಾಗೆ ಮಾರೂತಿ ಬೆಳವಣಿಗೆ ನರಗುಂದಲ್ಲಿ ಅಪ್ಪು ಅಂತಾನೆ ಫೇಮಸ್. ಯಾಕೆಂದರೆ ಮಾರುತಿಗೆ ಅಪ್ಪು ಅಂದ್ರೆ ಪ್ರಾಣ. ಚಿಕ್ಕಂದಿನಿಂದಲೂ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ  ಅಪ್ಪಟ ಅಭಿಮಾನಿ. ಪುನೀತ್ ಅವರ ಚಿತ್ರಗಳು ಬಿಡುಗಡೆಯಾದರೆ ಹಬ್ಬದ ರೀತಿಯಲ್ಲಿ ಆಚರಣೆ ಮಾಡ್ತಿದ್ರು. ಅಪ್ಪು ಅವರ ಪ್ರತಿಯೊಂದು ಚಿತ್ರ ನೋಡಿ ಖುಷಿಯಿಂದ ಸಂಭ್ರಮಿಸ್ತಿದ್ರು. ಚಿತ್ರಬಿಡುಗಡೆಯ ದಿನ ಅಪ್ಪು ಅವರ ಕಟೌಟ್ ಗೆ ಹಾಲಿನ ಅಭಿಷೇಕ ಮಾಡೋದು ರೂಢಿಯಾಗಿತ್ತು. ಪ್ರತಿ ಸಿನಿಮಾ ಬಿಡುಗಡೆಯಾದಾಗ ಇವರಷ್ಟು ಖುಷಿ ಪಡೋ ವ್ಯಕ್ತಿನೇ ಇರ್ತಿರಲಿಲ್ಲ. ಅಪ್ಪು ಅವರ ಅಪ್ಪಟ ಅಭಿಮಾನಿಯಾಗಿದ್ದ ಮಾರೂತಿಯವರನ್ನ ಕಸಬಾ ಓಣಿಯಲ್ಲಿ ಅಪ್ಪು ಅಂತಾನೇ ಕರೆಯುತ್ತಿದ್ದಾರೆ. 

ಆದ್ರೆ ಅಪ್ಪು ಅವರ ಅಗಲಿಕೆಯಿಂದ ಮಾರುತಿ ಬಹಳಷ್ಟು ನೊಂದುಕೊಂಡಿದ್ರು.  ಅಪ್ಪು ತೀರಿಕೊಂಡಾಗ ಮಾರುತಿ ಅವರ ಹೆಂಡತಿ ಸಂಗೀತ ಗರ್ಭಿಯಾಗಿದ್ರಂತೆ. ಹೀಗಾಗಿ ಗಂಡು ಮಗುವಾದರೆ ಅಪ್ಪು ಮತ್ತೆ ಹುಟ್ಟಿ ಬಂದಿದ್ದಾನೆ ಅಂತ ಮಾರುತಿ ಭಾವಿಸಿಕೊಂಡಿದ್ದಾರೆ. ಹೀಗಾಗಿ ಈ ತಮ್ಮ ಮಗುವಿಗೆ ಅಪ್ಪು ಅವರ ಮನೆಯಲ್ಲಿ ಅವರ ಸಂಬಂಧಿಕರಿಂದಲೇ ನಾಮಕರಣ ಮಾಡಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹೀಗಾಗಿ ದೊಡ್ಮನೆಯ ಕಡೆಯಿಂದ ಪ್ರತಿಕ್ರಿಯೆಗಾಗಿ ಕಾಯ್ದು ನೋಡ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News