ತಮಿಳುನಾಡು : ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ 30 ವರ್ಷಗಳಿಗೂ ಹೆಚ್ಚು ಕಾಲ ಜೈಲುವಾಸ ಅನುಭವಿಸಿದ್ದ ನಳಿನಿ ಸೇರಿದಂತೆ ಆರು ಮಂದಿಯನ್ನು ಸುಪ್ರೀಂ ಕೋರ್ಟ್ ನಿನ್ನೆ ದೋಷಮುಕ್ತಗೊಳಿಸಿದೆ. 30 ವರ್ಷಗಳ ನಂತರ ಜೈಲಿನಿಂದ ಬಿಡುಗಡೆಯಾಗಿರುವ ನಳಿನಿ ಮತ್ತು ಅವರ ವಕೀಲರು ಚೆನ್ನೈನ ಚೆಪಾಕ್‌ನಲ್ಲಿರುವ ಪ್ರೆಸ್ ಫೋರಂನಲ್ಲಿ ಸುದ್ದಿಗಾರರನ್ನು ಭೇಟಿಯಾದರು.
ಆಗ ಮಾತನಾಡಿದ ನಳಿನಿ, 'ನಮ್ಮ ಮೇಲೆ ತೋರಿದ ಪ್ರೀತಿಗೆ ಕೇಂದ್ರ ರಾಜ್ಯ ಸರ್ಕಾರಗಳು ಹಾಗೂ ತಮಿಳುನಾಡು ಜನತೆಗೆ ಧನ್ಯವಾದಗಳು. ನಾನು ಜೈಲಿನಲ್ಲಿದ್ದರೂ ನನ್ನ ಮನೆಯವರ ನೆನಪಿನಲ್ಲಿ ಬದುಕುತ್ತಿದ್ದೆ. ಈ ಪ್ರಕರಣದಲ್ಲಿ ಬಂಧಿತನಾದ ದಿನದಿಂದಲೇ ನನ್ನ ಪತಿ ಹೊರಬರುತ್ತಾನೆ ಎಂಬ ಭರವಸೆ ಇತ್ತು. ನಾನು ಶೀಘ್ರದಲ್ಲೇ ಜೈಲಿನಿಂದ ಹೊರಬರುತ್ತೇನೆ ಭಾವಿಸಿದ್ದೆ ಆದ್ರೆ, ಗಲ್ಲು ಶಿಕ್ಷೆಯ ತೀರ್ಪು ಬಂದಾಕ್ಷಣ ನನ್ನ ಜೀವನವನ್ನು ಕೊನೆಗೊಳಿಸಲು ನಾನು ಯೋಚಿಸಿದೆ.
ಇದನ್ನೂ ಓದಿ: ಚುನಾವಣೆಯಲ್ಲಿ ಟಿಕೆಟ್ ಸಿಗದಿದ್ದಕ್ಕೆ ಟವರ್ ಏರಿ ಕುಳಿತ ಎಎಪಿ ನಾಯಕ
ಪ್ರಧಾನಿಯವರನ್ನು ಭೇಟಿ ಮಾಡುವ ಅವಕಾಶ ಸಿಕ್ಕರೆ ಖಂಡಿತಾ ಖುದ್ದು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸುತ್ತೇವೆ. ಪ್ರಿಯಾಂಕಾ ಗಾಂಧಿ ನನ್ನನ್ನು ಜೈಲಿಗೆ ಭೇಟಿ ಮಾಡಿದಾಗ ಅವರ ತಂದೆ ಸಾವಿನ ಆಘಾತದಿಂದ ಭಾವುಕರಾದರು. ಘಟನಾ ಸ್ಥಳಕ್ಕೆ ಹೋಗಿದ್ದಕ್ಕೆ ನನ್ನ ಮೇಲೆ ಕಾನೂನು ಕ್ರಮ ಜರುಗಿಸಿ ಬಂಧಿಸಲಾಗಿದೆ. ಆದರೆ ನನ್ನನ್ನು ಬಂಧಿಸಿದ ಮೊದಲ ದಿನದಿಂದ ಮರಣದಂಡನೆ ಕೈದಿಯಂತೆ ನಡೆಸಿಕೊಳ್ಳಲಾಯಿತು.
ನನಗೆ ಹೆರಿಗೆಯಾಗುವುದಿಲ್ಲ ಎಂದು ವೈದ್ಯರು ಹೇಳಿದ ನಂತರವೇ ಜೈಲಿನ ಬಾಗಿಲು ತೆರೆಯಲಾಯಿತು. ಅಲ್ಲಿಯವರೆಗೆ ನಾನು 24 ಗಂಟೆಗಳ ಕಾಲ ಜೈಲಿನ ಕೊಠಡಿಯಲ್ಲಿಯೇ ಬಂಧಿಯಾಗಿಬೇಕಾಗಿತ್ತು. ಪ್ರಧಾನಿಯವರ ಸಾವು ಸ್ವೀಕಾರಾರ್ಹವಲ್ಲದ ಘಟನೆ. ಪ್ರಧಾನಿ ಹತ್ಯೆಯಾದ ಸ್ಫೋಟದ ಸ್ಥಳದಲ್ಲಿ ನಾನು ಇರಲಿಲ್ಲ ಎಂದು ನಳಿನಿ ಅಂದಿನ ಘಟನೆಗಳನ್ನು ಮೆಲುಕು ಹಾಕಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.