ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ "ದ ಸೂಟ್" ಚಿತ್ರಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಮೇ 17 ಚಿತ್ರ ಬಿಡುಗಡೆಯಾಗುತ್ತಿದೆ. ಮಾಲತಿ ಗೌಡ ಹಾಗೂ ರಾಮಸ್ವಾಮಿ ಅವರು ನಿರ್ಮಿಸಿರುವ, ಎಸ್ ಭಗತ್ ರಾಜ್ ನಿರ್ದೇಶಿಸಿರುವ ಹಾಗೂ ಬಾಲಿವುಡ್ ನಿಂದ ಬಂದಿರುವ ಕಮಲ್ ಪ್ರಮುಖಪಾತ್ರದಲ್ಲಿ ನಟಿಸಿರುವ "ದ ಸೂಟ್" ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಶಾಸಕ ಗೋಪಾಲಯ್ಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್, ಪ್ರಶಾಂತ್ ಚಕ್ರವರ್ತಿ ಮುಂತಾದ ಗಣ್ಯರು "ದ ಸೂಟ್" ಆಗಮಿಸಿ ಶುಭ ಕೋರಿದರು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಈ ಚಿತ್ರದ ಟ್ರೇಲರ್ ನೋಡಿ ಖುಷಿಪಟ್ಟಿದ್ದಾರೆ. ಚಿತ್ರ ಯಶಸ್ವಿಯಾಗಲಿ ಎಂದು ವಿಡಿಯೋ ಮೂಲಕ ಶುಭ ಹಾರೈಸಿದ್ದಾರೆ. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನಿರ್ಮಾಪಕಿ ಮಾಲತಿ ಗೌಡ ಸಮಾರಂಭಕ್ಕೆ ಆಗಮಿಸಿದ ಗಣ್ಯರನ್ನು ಸ್ವಾಗತಿಸಿ, ನಮ್ಮ ಚಿತ್ರಕ್ಕೆ ಎಲ್ಲರೂ ಪ್ರೋತ್ಸಾಹ ನೀಡಿ ಎಂದರು. ಮಾಲತಿ ಗೌಡ ಅವರ ಪತಿ ರಾಮಸ್ವಾಮಿ ಈ ಚಿತ್ರದ ನಿರ್ಮಾಪಕರು.
ಇದನ್ನೂ ಓದಿ-Allu Arjun: ಸೌತ್ ಸ್ಟಾರ್ ಅಲ್ಲು ಅರ್ಜುನ್ ಜೀವನವನ್ನೇ ಬದಲಿಸಿದ ಸಿನಿಮಾ ಯಾವುದು ಗೊತ್ತಾ?
ನಿರ್ದೇಶಕ ಎಸ್. ಭಗತ್ ರಾಜ್ ಮಾತನಾಡಿ, ನಾನು ಖ್ಯಾತ ನಟ, ನಿರ್ದೇಶಕ ಕಾಶಿನಾಥ್ ಅವರ ಬಳಿ ನಿರ್ದೇಶನ ಕಲಿತಿದ್ದೀನಿ. ಅವರು ನನ್ನ ಗುರುಗಳು ." ದ ಸೂಟ್" ನನ್ನ ಮೊದಲ ನಿರ್ದೇಶನದ ಚಿತ್ರ. "ಸೂಟ್", ಬದುಕು ಹಾಗೂ ಭಾವನೆಗಳ ಸಂಗಮ. ನಮ್ಮ ಚಿತ್ರಕ್ಕೆ ಸೂಟೇ ಕಥಾನಾಯಕ. ಕಥೆ ಕೇಳಿದ ಕೆಲವರು ಈ ವಿಷಯ ಕೇಳಿ ಆಶ್ಚರ್ಯಪಟ್ಟಿದ್ದು ಉಂಟು. ಆದರೆ ನಮ್ಮ ಚಿತ್ರದಲ್ಲಿ " ಸೂಟ್" ನ ಪಾತ್ರವೇನು? ಎಂಬುದು ಮೇ 17 ರಂದು ತಿಳಿಯಲಿದೆ. "ಸೂಟ್" ಅನ್ನು ಬರೀ ಬಟ್ಟೆಯಂತೆ ತೋರಿಸಿಲ್ಲ. ಮನುಷ್ಯನ ಹೊರಗಿನ ಮನಸ್ಸನ್ನು "ಸೂಟ್" ನ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದೇನೆ. ಚಿತ್ರಕ್ಕೆ ಅತಿಥಿದೇವೋಭವ ಎಂಬ ಅಡಿಬರಹವಿದೆ. "ಸೂಟ್" ಚಿತ್ರದ ಪ್ರಚಾರವನ್ನು ವಿನೂತನವಾಗಿ ಮಾಡಿದ್ದೇವೆ. "ಸೂಟ್" ನ ಬಗ್ಗೆ ಅನೇಕ ಗಣ್ಯರು ತಮ್ನಗನಿಸಿದನ್ನು ಕವನಗಳ ಮೂಲಕ ಬರೆದಿದ್ದಾರೆ. ಅದನ್ನು ಸಂಕಲನವಾಗಿ ಹೊರ ತಂದಿದ್ದೇವೆ. ನಮ್ಮ ಚಿತ್ರದಲ್ಲಿ ಮೂರು ಕಿರಣಗಳಿದೆ. ಸಂಗೀತ ನಿರ್ದೇಶಕ ಕಿರಣ್ ಶಂಕರ್, ಛಾಯಾಗ್ರಾಹಕ ಕಿರಣ್ ಹಂಪಾಪುರ ಹಾಗೂ ರೇಖಾಚಿತ್ರಗಳ ಮೂಲಕ ನಮ್ಮ ಚಿತ್ರಕ್ಕೆ ಜೀವ ತುಂಬಿರುವ ಕಿರಣ್ ಅವರು. ಈ ಚಿತ್ರದಲ್ಲಿ ಕಮಲ್, ಉಮೇಶ್ ಬಣಕಾರ್, ವಿ.ನಾಗೇಂದ್ರ ಪ್ರಸಾದ್, ಜೋಸೆಫ್, ಸುಜಯ್, ಭೀಷ್ಮ ರಾಮಯ್ಯ, ಗಡ್ಡ ವಿಜಿ. ಪ್ರಣಯ ಮೂರ್ತಿ ಸೇರಿದಂತೆ ಐವತ್ತಕ್ಕೂ ಅಧಿಕ ಕಲಾವಿದರು ನಟಿಸಿದ್ದಾರೆ ಎಂದರು.
ದುಬೈನಿಂದ ಬಂದು ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ಅವರಿಗೆ ಮ್ಯಾನೇಜರ್ ಆಗಿದ್ದ ನಟ ಕಮಲ್ ಅವರು "ದ ಸೂಟ್" ಚಿತ್ರದ ತಮ್ಮ ಜರ್ನಿಯ ಬಗ್ಗೆ ವಿವರಣೆ ನೀಡಿದರು. ಪ್ರೊಡಕ್ಷನ್ ಎಕ್ಸಿಕ್ಯುಟಿವ್ ರವಿಶಂಕರ್, ಕಲಾವಿದರಾದ ಮಂಜು ಪಾಟೀಲ್. ಸುಜಯ್, ಭೀಷ್ಮ ರಾಮಯ್ಯ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.
ಇದನ್ನೂ ಓದಿ-ಹೆಣ್ಣಿನೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುವ ಪಾತ್ರ ಮಾಡಲು ನಟ ಭಯಂಕರ ವಜ್ರಮುನಿ ʼಈʼ ಕಂಡಿಷನ್ ಹಾಕುತ್ತಿದ್ದರಂತೆ!!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.