ನೀನು ನನ್ನ ಸ್ವೀಟೆಸ್ಟ್‌ ಜೀವದ ಗೆಳೆಯ : ರಮ್ಯಾ-ಸುದೀಪ್‌ ವಿಡಿಯೋ ವೈರಲ್‌..!

ಮೋಹಕ ತಾರೆ, ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಮತ್ತು ಕಿಚ್ಚ ಸುದೀಪ್‌ ಜೋಡಿಯ ಸಿನಿಮಾಗಳು ಕನ್ನಡ ಸಿನಿ ಪ್ರೇಕ್ಷಕರಿಗೆ ಅಚ್ಚು ಮೆಚ್ಚು. ಅಲ್ಲದೆ, ಸುದೀಪ್‌ ಮತ್ತು ರಮ್ಯಾ ಕೂಡ ಒಳ್ಳೆಯ ಸ್ನೇಹಿತರು. ಬಹಳ ದಿನಗಳ ನಂತರ ದಿವ್ಯಾ ಸ್ಪಂದನ ಕಿಚ್ಚನ ಜೊತೆ ಕ್ಯೂಟ್‌ ಆಗಿ ಜಗಳವಾಡಿರುವ ವಿಡಿಯೋ ಒಂದನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ದೀಪು ಅಭಿಮಾನಿಗಳು ಸಖತ್‌ ಖುಷಿಯಾಗಿದ್ದಾರೆ.

Written by - Krishna N K | Last Updated : Nov 16, 2022, 10:59 AM IST
  • ಸುದೀಪ್‌ ಮತ್ತು ರಮ್ಯಾ ವಿಡಿಯೋ ವೈರಲ್‌
  • ಹಳೆ ವಿಡಿಯೋ ಹಂಚಿಕೊಂಡು ಸುದೀಪ್‌ಗೆ ಟ್ಯಾಗ್‌ ಮಾಡಿದ ದಿವ್ಯಾ ಸ್ಪಂದನ
  • ಮೋಹಕತಾರೆ ಮತ್ತು ಕಿಚ್ಚನ ಕ್ಯೂಟ್‌ ಜಗಳಕ್ಕೆ ಫ್ಯಾನ್ಸ್‌ ಫಿದಾ
ನೀನು ನನ್ನ ಸ್ವೀಟೆಸ್ಟ್‌ ಜೀವದ ಗೆಳೆಯ : ರಮ್ಯಾ-ಸುದೀಪ್‌ ವಿಡಿಯೋ ವೈರಲ್‌..! title=

ಬೆಂಗಳೂರು : ಮೋಹಕ ತಾರೆ, ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಮತ್ತು ಕಿಚ್ಚ ಸುದೀಪ್‌ ಜೋಡಿಯ ಸಿನಿಮಾಗಳು ಕನ್ನಡ ಸಿನಿ ಪ್ರೇಕ್ಷಕರಿಗೆ ಅಚ್ಚು ಮೆಚ್ಚು. ಅಲ್ಲದೆ, ಸುದೀಪ್‌ ಮತ್ತು ರಮ್ಯಾ ಕೂಡ ಒಳ್ಳೆಯ ಸ್ನೇಹಿತರು. ಬಹಳ ದಿನಗಳ ನಂತರ ದಿವ್ಯಾ ಸ್ಪಂದನ ಕಿಚ್ಚನ ಜೊತೆ ಕ್ಯೂಟ್‌ ಆಗಿ ಜಗಳವಾಡಿರುವ ವಿಡಿಯೋ ಒಂದನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ದೀಪು ಅಭಿಮಾನಿಗಳು ಸಖತ್‌ ಖುಷಿಯಾಗಿದ್ದಾರೆ.

ದಿವ್ಯಾ ಸ್ಪಂದನ ಮತ್ತು ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದ ತೆರೆಯ ಮೇಲೆ ಮೋಡಿ ಮಾಡಿರುವ ಜೋಡಿಗಳಲ್ಲಿ ಒಬ್ಬರು. ʼಕಿಚ್ಚ ಹುಚ್ಚʼ, ʼಮುಸ್ಸಂಜೆ ಮಾತುʼ ಮತ್ತು ʼರಂಗ ಎಸ್‌ಎಸ್‌ಎಲ್‌ಸಿʼ ಚಿತ್ರಗಳಲ್ಲಿ ಇಬ್ಬರ ಕಾಂಬಿನೇಷನ್‌ ಸೂಪರ್‌ ಆಗಿ ವರ್ಕೌಟ್‌ ಆಗಿತ್ತು. ಅಭಿಮಾನಿಗಳಿಗೂ ಈ ಜೊಡಿ ಸಖತ್‌ ಇಷ್ಟವಾಗಿತ್ತು. ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿ ʼಜಸ್ಟ್ ಮಾತ್‌ ಮಾತಲ್ಲಿʼ ಸಿನಿಮಾದಲ್ಲಿ ಪ್ರೇಕ್ಷಕರನ್ನು ಮೆಚ್ಚುಗೆ ಗಳಿಸಿತ್ತು.

ಇದನ್ನೂ ಓದಿ: ನಟಿ ಮೇಲೆ ಕ್ಯಾಬ್‌ ಡ್ರೈವರ್‌ನಿಂದ ಲೈಂಗಿಕ ದೌರ್ಜನ್ಯ : ದೂರು ದಾಖಲು

ಈ ಜನಪ್ರಿಯ ಜೋಡಿಯ ಹಳೆಯ ಸಂದರ್ಶನವನ್ನು ಸುದೀಪ್ ಅವರ ಅಭಿಮಾನಿ ಪುಟವೊಂದು ಇತ್ತೀಚೆಗೆ ಟ್ವಿಟರ್‌ನಲ್ಲಿ ಹಂಚಿಕೊಂಡಿತ್ತು. ಇಬ್ಬರೂ ತಾರೆಗಳು ಪರಸ್ಪರರ ಮಕ್ಕಳ ಹಾಗೆ ಜಗಳವಾಡಿದ್ದಾರೆ. ಕೆಲವು ಹಳೆಯ ವಿವಾದಗಳನ್ನು ನೆನಪಿಸಿಕೊಂಡರು. ಈ ವೈರಲ್‌ ಕ್ಲಿಪ್ ಅನ್ನು ರಮ್ಯಾ ಅವರು ʼನೀನು ನನ್ನ ಸ್ವೀಟೆಸ್ಟ್‌ ಜೀವದ ಗೆಳೆಯʼ  ಎಂದು ಲೈನ್ಸ್‌ ಬರೆದು ರಿ ಟ್ಟೀಟ್‌ ಮಾಡಿ ಕಿಚ್ಚನಿಗೆ ಟ್ಯಾಗ್‌ ಮಾಡಿದ್ದಾರೆ. ಇನ್ನು ವಿಡಿಯೋ ನೋಡಿದ ಅಭಿಮಾನಿಗಳಿಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಸದ್ಯ ರಮ್ಯಾ ರಾಜಕೀಯದ ಜೊತೆ ಸಿನಿಮಾರಂಗದಲ್ಲಿಯೂ ಸಕ್ರಿಯರಾಗಿದ್ದಾರೆ. ಇನ್ನು ದಿವ್ಯಾಸ್ಪಂದನ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ಶೂಟಿಂಗ್‌ ಮುಗಿದಿದೆ. ಆಪಲ್‌ ಬಾಕ್ಸ್‌ ಸ್ಟುಡಿಯೋಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾವನ್ನು ರಾಜ್‌ ಬಿ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಸಿರಿ ರವಿಕುಮಾರ್‌ ಮತ್ತು ರಾಜ್‌ ಶೆಟ್ಟಿ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News