ʼಎಲ್ಲಾ ಸಿನಿಮಾಗಳ ದಾಖಲೆ ಹಿಂದಿಕ್ಕುವ ʼಕ್ರಾಂತಿʼ ಮಾಡಿದ್ದೇವೆ ಎಂದು ಹೇಳಲ್ಲʼ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೋಸ್ಟ್‌ ಎಕ್ಸ್ಪೆಕ್ಟೆಡ್ ಸಿನಿಮಾ ʼಕ್ರಾಂತಿʼ ಜನವರಿ 26ಕ್ಕೆ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದೆ. ಸುದ್ದಿಗೋಷ್ಠಿಯಲ್ಲಿ, ನಾವು ದೊಡ್ಡ ಸಿನಿಮಾ ಮಾಡಿಬಿಟ್ಟಿದ್ದೇವೆ, ಎಲ್ಲಾ ಸಿನಿಮಾಗಳನ್ನು ಹಿಂದಿಕ್ಕುವಂತ ಚಿತ್ರ ಮಾಡಿದ್ದೇವೆ ಎಂದು ಹೇಳುವುದಿಲ್ಲ. ಆದ್ರೆ, ಒಂದೊಳ್ಳೆ ಸಿನಿಮಾ ಮಾಡಿದ್ದೇವೆ ಎಂದು ಹೇಳೋಕೆ ಇಷ್ಟ ಪಡ್ತೀನಿ ಎಂದು ದರ್ಶನ್‌ ಹೇಳಿದರು.

Written by - Krishna N K | Last Updated : Nov 4, 2022, 12:48 PM IST
  • ಎಲ್ಲಾ ಸಿನಿಮಾಗಳ ದಾಖಲೆ ಹಿಂದಿಕ್ಕುವ ʼಕ್ರಾಂತಿʼ ಮಾಡಿದ್ದೇವೆ ಎಂದು ಹೇಳಲ್ಲ
  • ಕ್ರಾಂತ್ರಿ ಸುದ್ದಿಗೋಷ್ಠಿಯಲ್ಲಿ ಕ್ರಾಂತಿ ಕುರಿತು ದಚ್ಚು ಮಾತು
  • ಸಿನಿಮಾಗಳನ್ನು ಹಿಂದಿಕ್ಕುವಂತ ಚಿತ್ರ ಮಾಡಿದ್ದೇವೆ ಎನ್ನಲ್ಲ, ಒಂದೊಳ್ಳೆ ಸಿನಿಮಾ ಕ್ರಾಂತಿ
ʼಎಲ್ಲಾ ಸಿನಿಮಾಗಳ ದಾಖಲೆ ಹಿಂದಿಕ್ಕುವ ʼಕ್ರಾಂತಿʼ ಮಾಡಿದ್ದೇವೆ ಎಂದು ಹೇಳಲ್ಲʼ title=

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೋಸ್ಟ್‌ ಎಕ್ಸ್ಪೆಕ್ಟೆಡ್ ಸಿನಿಮಾ ʼಕ್ರಾಂತಿʼ ಜನವರಿ 26ಕ್ಕೆ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದೆ. ಸುದ್ದಿಗೋಷ್ಠಿಯಲ್ಲಿ, ನಾವು ದೊಡ್ಡ ಸಿನಿಮಾ ಮಾಡಿಬಿಟ್ಟಿದ್ದೇವೆ, ಎಲ್ಲಾ ಸಿನಿಮಾಗಳನ್ನು ಹಿಂದಿಕ್ಕುವಂತ ಚಿತ್ರ ಮಾಡಿದ್ದೇವೆ ಎಂದು ಹೇಳುವುದಿಲ್ಲ. ಆದ್ರೆ, ಒಂದೊಳ್ಳೆ ಸಿನಿಮಾ ಮಾಡಿದ್ದೇವೆ ಎಂದು ಹೇಳೋಕೆ ಇಷ್ಟ ಪಡ್ತೀನಿ ಎಂದು ದರ್ಶನ್‌ ಹೇಳಿದರು.

ಮಾಹಿತಿ ಪ್ರಕಾರ ನವೆಂಬರ್‌ 1 ರಂದು ಕ್ರಾಂತಿ ಸಿನಿಮಾ ಬಿಡುಗಡೆಯಾಗಬೇಕಿತ್ತು. ಸದ್ಯ ಜನವರಿ 26 ರಂದು ತೆರೆಗೆ ಬರಲು ಬಾಕ್ಸ್‌ ಆಫೀಸ್ ಸುಲ್ತಾನ ದರ್ಶನ್‌ ಸಿನಿಮಾ ಸಿದ್ಧವಾಗಿದೆ. ಈ ಕುರಿತು ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಅಧಿಕೃತ ಮಾಹಿತಿ ಹೊರಹಾಕಿದೆ. ಸದ್ಯ ಕ್ರಾಂತಿ ಕುರಿತು ಮಾತನಾಡಿರುವ ದರ್ಶನ್‌ ಅವರು, ನಾವು ಯಾವುದೇ ದೊಡ್ಡ ಸಿನಿಮಾ ಮಾಡಿದ್ದೇವೆ ಎಂದು ಹೇಳುವುದಿಲ್ಲ. ಯಾವ ದಾಖಲೆಯನ್ನು ಹಿಂದಿಕ್ಕುವ ಸಿನಿಮಾ ನಮ್ಮದು ಎನ್ನುವುದಿಲ್ಲ. ಬದಲಿಗೆ ಕ್ರಾಂತಿ ಒಂದು ಒಳ್ಳೆಯ ಸಿನಿಮಾ ಅಂತ ಹೇಳೋಕೆ ಇಷ್ಟ ಪಡ್ತೀನಿ ಎಂದಿದ್ದಾರೆ.

ಇದನ್ನೂ ಓದಿ: ಪವನ್ ಕಲ್ಯಾಣ್ ಹತ್ಯೆಗೆ ಸ್ಕೆಚ್ : 250 ಕೋಟಿ ರೂ. ಸುಪಾರಿ..!

ಇನ್ನು ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಇದ್ದು, ಗಣರಾಜ್ಯೋತ್ಸವ ದಿನದಂದು ಕ್ರಾಂತಿ ತೆರೆಗೆ ಅಪ್ಪಳಿಸಲಿದೆ. ಮೀಡಿಯಾ ಹೌಸ್ ಸ್ಟೂಡಿಯೋ ಬ್ಯಾನರ್ ನಡಿಯಲ್ಲಿ ಶೈಲಜಾ ನಾಗ್ ಕ್ರಾಂತಿ ಸಿನಿಮಾದ ನಿರ್ಮಾಪಕಿಯಾಗಿದ್ದು, ಬಿ ಸುರೇಶ ಸಹ ನಿರ್ಮಾಪಕರಾಗಿದ್ದಾರೆ. ರಚಿತಾ ರಾಮ್ ಕ್ರಾಂತಿ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜೊತೆಯಾಗಿದ್ದಾರೆ. ವಿ ಹರಿಕೃಷ್ಣ ನಿರ್ದೇಶನ ʼಕ್ರಾಂತಿʼಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News