ಬಿಹಾರ ಪ್ರವಾಹದಲ್ಲಿ ಎಮ್ಮೆ ಕಳೆದುಕೊಂಡ ಕುಟುಂಬದ ನೆರವಿಗೆ ಧಾವಿಸಿದ ನಟ ಸೋನು ಸೂದ್

ಆಂಧ್ರಪ್ರದೇಶದ ರೈತನಿಗೆ ಟ್ರ್ಯಾಕ್ಟರ್ ಉಡುಗೊರೆಯಾಗಿ ನೀಡಿದ ನಂತರ, ಸೋನು ಸೂದ್ ಈಗ ಬಿಹಾರದ ಮೋತಿಹರಿಯಲ್ಲಿ ಕುಟುಂಬವೊಂದಕ್ಕೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ.

Last Updated : Jul 28, 2020, 04:58 PM IST
ಬಿಹಾರ ಪ್ರವಾಹದಲ್ಲಿ ಎಮ್ಮೆ ಕಳೆದುಕೊಂಡ ಕುಟುಂಬದ ನೆರವಿಗೆ ಧಾವಿಸಿದ ನಟ ಸೋನು ಸೂದ್ title=
file photo

ನವದೆಹಲಿ: ಆಂಧ್ರಪ್ರದೇಶದ ರೈತನಿಗೆ ಟ್ರ್ಯಾಕ್ಟರ್ ಉಡುಗೊರೆಯಾಗಿ ನೀಡಿದ ನಂತರ, ಸೋನು ಸೂದ್ ಈಗ ಬಿಹಾರದ ಮೋತಿಹರಿಯಲ್ಲಿ ಕುಟುಂಬವೊಂದಕ್ಕೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ.

ಟ್ವೀಟ್ ಪ್ರಕಾರ ಪ್ರವಾಹದಲ್ಲಿ ಮಗ ಮತ್ತು ಎಮ್ಮೆಗಳನ್ನು ಕಳೆದುಕೊಂಡ ಹೊರತಾಗಿ, ಅವರು ಇತ್ತೀಚೆಗೆ ಇತರ ಇಬ್ಬರು ಮಕ್ಕಳನ್ನು ಮತ್ತು ಕುಟುಂಬದ ಇನ್ನೊಬ್ಬ ವಯೋವೃದ್ಧ ಸದಸ್ಯರನ್ನು ಕಳೆದುಕೊಂಡಿರುವುದನ್ನು ಉಲ್ಲೇಖಿಸಲಾಗಿದೆ.

ಮಕ್ಕಳ ಶಿಕ್ಷಣಕ್ಕಾಗಿ ಹಸು ಮಾರಿದ ತಂದೆ, 'ವಾಪಸ್ ಕೊಡಿಸುವೆ' ಎಂದ Sonu Sood

'ನಾವು ಈ ಬಗ್ಗೆ ಪರಿಶೀಲಿಸಿದಂತೆ ಈ ಪ್ರಕರಣವು ನಿಜವಾಗಿದೆ. ಭೋಲಾ ತನ್ನ ಮಗನನ್ನು ಪ್ರವಾಹದಲ್ಲಿ ಕಳೆದುಕೊಂಡರು ಮತ್ತು 2 ಎಮ್ಮೆಗಳನ್ನು ಕಳೆದುಕೊಂಡಿದ್ದಾರೆ ಅವು ಅವರ ಆಧಾಯದ ಏಕೈಕ ಮೂಲವಾಗಿದೆ. ನಾವು ಹಸುವೊಂದನ್ನು ದಾನ ಮಾಡಲು ನಿರ್ಧರಿಸಿದ್ದೇವೆ ಇದರಿಂದ ಅವರು ಹಸು ಹಾಲನ್ನು ತಮ್ಮ ಜೀವನೋಪಾಯಕ್ಕಾಗಿ ಮಾರಾಟ ಮಾಡಬಹುದು. ಒಂದು ಹಸು ಸುಮಾರು 50 ರಿಂದ 60 ಕೆ ವೆಚ್ಚವಾಗಲಿದೆ "ಎಂದು ಶೈಕ್ ತಬಿಂದಾ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಪ್ರವಾಸಿ ಕಾರ್ಮಿಕರಿಗಾಗಿ ನೌಕರಿಯ ಸಿದ್ಧತೆ ನಡೆಸಲು ಮುಂದಾದ Sonu Sood

ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿರುವ ಸೋನು ಸೂದ್ 'ನಷ್ಟಕ್ಕೆ ನಾನು ವಿಷಾದಿಸುತ್ತೇನೆ. ಎಮ್ಮೆಗಳು ಇಂದು ಸಂಜೆ ವೇಳೆಗೆ ಅವರ ಮನೆಗೆ ತಲುಪುತ್ತವೆ. ಇದರಿಂದ ಅವರ ಜೀವನೋಪಾಯಕ್ಕೆ ತೊಂದರೆಯಾಗುವುದಿಲ್ಲ. ನಮ್ಮ ರೈತರನ್ನು ಉಳಿಸಿ" ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮೊದಲು, ಇಬ್ಬರು ಹುಡುಗಿಯರು ಜಮೀನನ್ನು ಉಳುವವಿಡಿಯೋ ವೈರಲ್ ಆದ ನಂತರ, ಸೋನು ಸೂದ್ ಆ ಕುಟುಂಬಕ್ಕೆ ಟ್ರ್ಯಾಕ್ಟರ್ ಒದಗಿಸುವ ಭರವಸೆ ನೀಡಿದರು.ವೆನ್ನೆಲಾ ಮತ್ತು ಚಂದನಾ ಎನ್ನುವ ಇಬ್ಬರು ಹೆಣ್ಣು ಮಕ್ಕಳು ಭೂಮಿಯನ್ನು ಉಳುಮೆ ಮಾಡಲು ಕುಟುಂಬವು ಟ್ರಾಕ್ಟರ್ ಅಥವಾ ಎತ್ತುಗಳನ್ನು ಬಾಡಿಗೆಗೆ ತೆಗೆದುಕೊಳ್ಳಲು ಸಾಧ್ಯವಾಗದ ಕಾರಣ ಭೂಮಿಯನ್ನು ಉಳುಮೆ ಮಾಡಲು ಭುಜದ ಮೇಲೆ ನೊಗವನ್ನು ಹೊತ್ತು ಕೃಷಿ ಮಾಡುತ್ತಿರುವ ವೀಡಿಯೋ ವೈರಲ್ ಆಗಿತ್ತು.

ವಲಸೆ ಕಾರ್ಮಿಕರ ನೆರವಿಗೆ ತನ್ನ ಮೊಬೈಲ್ ನಂಬರ್ ಹಂಚಿಕೊಂಡ Sonu Sood

ಕಳೆದ 20 ವರ್ಷಗಳಿಂದ ಮದನಪಲ್ಲೆ ಮಂಡಲದಲ್ಲಿ ಚಹಾ ಅಂಗಡಿಯೊಂದನ್ನು ನಡೆಸುತ್ತಿದ್ದ ಅವರ ತಂದೆ ನಾಗೇಶ್ವರ ರಾವ್ ಅವರು ಕೃಷಿ ಮಾಡಲು ತಮ್ಮ ಸ್ಥಳೀಯ ಗ್ರಾಮ ರಾಜುವರಿಪಲ್ಲಿಗೆ ಮರಳಲು ನಿರ್ಧರಿಸಿದ ನಂತರ ಯಾವುದೇ ಆದಾಯದ ಮೂಲಗಳಿಲ್ಲ.ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದ ಸೋನು ಸೂದ್, ಹುಡುಗಿಯರಿಗೆ ಅವರ ಶಿಕ್ಷಣದತ್ತ ಗಮನಹರಿಸಲು ಅವಕಾಶ ನೀಡಬೇಕು ಮತ್ತು ಅವರ ಕುಟುಂಬಕ್ಕೆ ಟ್ರ್ಯಾಕ್ಟರ್ ನೀಡುವುದಾಗಿ ಹೇಳಿದರು.

Trending News