Actress Aarathi life : 90 ದಶದ ನಟಿ ಆರತಿ ಕನ್ನಡ ಸಿನಿ ಇತಿಹಾಸದಲ್ಲಿ ತಮ್ಮದೇಯಾದ ವಿಶಿಷ್ಟ ಗುರುತು ಹೊಂದಿದ್ದಾರೆ. ಸಹಜ ಸುಂದರಿ ನಟಿ ಇದೀಗ ಸ್ಯಾಂಡಲ್‌ವುಡ್ ತೊರೆದು ವಿದೇಶದಲ್ಲಿ ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ.. ಆದ್ರೆ ಆಗಾಗ ಯಾರಿಗೂ ತಿಳಿಯದಂತೆ ಕೋಲಾರಕ್ಕೆ ಬಂದು ಹೋಗ್ತಾರೆ... ಈ ಕುರಿತ ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ ನೋಡಿ..
ಹೌದು.. ಆರತಿ ಕನ್ನಡ ಸಿನಿ ರಂಗದ ಖ್ಯಾತ ಹಿರಿಯ ನಟಿಯರಲ್ಲಿ ಒಬ್ಬರು. ʼಗೆಜ್ಜೆ ಪೂಜೆʼ ಎಂಬ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ನಟಿ, ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಕನ್ನಡ ಸಿನಿ ಪ್ರೇಕ್ಷಕರ ಮನಗೆದ್ದರು. ನಾಲ್ಕು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ, ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿರುವ ನಟಿ ವಿಧಾನ ಪರಿಷತ್ತಿಗೂ ನಾಮನಿರ್ದೇಶನಗೊಂಡಿದ್ದರು.
ಇದನ್ನೂ ಓದಿ:ಶಿವಣ್ಣನ ಆರೋಗ್ಯದಲ್ಲಿ ಯಾವುದೇ ರೀತಿಯ ಏರುಪೇರು ಇಲ್ಲ
ಡಾ ರಾಜ್‌ಕುಮಾರ್, ವಿಷ್ಣುವರ್ಧನ್, ಅನಂತ್ ನಾಗ್, ಶಂಕರ್ ನಾಗ್, ಅಂಬರೀಷ್, ರಾಮಕೃಷ್ಣ ಸೇರಿದಂತೆ ಹಲವು ದಿಗ್ಗಜ ನಟರ ಜೊತೆ ನಟಿಸಿ ಆರತಿ ಸೈ ಎನಿಸಿಕೊಂಡಿದ್ದರು. ರಂಗನಾಯಕಿ, ನಾಗರಹಾವು, ಗೆಜ್ಜೆ ಪೂಜೆ, ಸತಿ ಸಕ್ಕೂಬಾಯಿ, ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನೀಡಿರಿವ ನಟಿ ಆರತಿಯನ್ನು ಕನ್ನಡ ಚಿತ್ರರಂಗ ಎಂದೂ ಮರೆಯದು.
ನಿರ್ದೇಶಕ ಪುಟ್ಟಣ್ಣ ಕಣಗಾಲ್ ಮತ್ತು ಆರತಿಯವರು ಮದುವೆಯಾಗಿತ್ತು. ಆದರೆ ಕಾರಣಾಂತರದಿಂದ ಈ ಜೊಡಿ ದೂರವಾಗಿತ್ತು. ನಂತರ, ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಪ್ರವಾಸೋದ್ಯಮ ಹಾಗೂ ಶಿಕ್ಷಣ ಮಂತ್ರಿಯಾಗಿದ್ದ ಎಂ ರಘುಪತಿ ಜತೆ ಆರತಿಯವರು ಸ್ನೇಹ ಹೊಂದಿದ್ದರು. ಆದರೆ ಈ ಸಂಬಂಧವೂ ಬಹುಕಾಲ ಉಳಿಯಲಿಲ್ಲ ಎಂಬ ಮಾತಿದೆ..
ಇದನ್ನೂ ಓದಿ:ಮಹಿಳೆ ಜೊತೆ ಅನುಚಿತ ವರ್ತನೆ: ಶಿವರಾಜ್ ಕೆಆರ್ ಪೇಟೆ ವಿರುದ್ಧ ದೂರು!
ಇನ್ನು ಪುಟ್ಟಣ್ಣ ಕಣಗಾಲ್ ಅವರು ತೀರಿಕೊಂಡ ಬಳಿಕ ಆರತಿ ಚಂದ್ರಶೇಖರ್ ದೇಸಾಯ್‌ಗೌಡರ್ ಎಂಬವರನ್ನು ಮದುವೆಯಾಗಿ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಇವರಿಗೆ ಯಶಸ್ವನಿ ಎಂಬ ಮಗಳಿದ್ದಾಳೆ ಎನ್ನಲಾಗಿದ್ದು ಅವರೆಲ್ಲರೂ ಅಮೆರಿಕಾದಲ್ಲೇ ಇದ್ದಾರೆ ಎಂದು ಹೇಳಲಾಗುತ್ತದೆ.
ಇನ್ನು ಆರತಿಯವರು ಕೋಲಾರದಲ್ಲಿ ಕೆಲವು ಹಳ್ಳಿಗಳನ್ನು ಅವರು ದತ್ತು ತೆಗೆದುಕೊಂಡಿದ್ದಾರೆ. ಈ ಮೂಲಕ ನಟಿ ಹಲವರ ಬದುಕಿಗೆ ಆಧಾರವಾಗಿದ್ದಾರೆ. ಸಾಮಾಜಿಕ ಸೇವೆ, ದಾನ ಧರ್ಮದಲ್ಲಿ ನಿರತರಾಗಿರುವ ಆರತಿಯವರು ಮಾಧ್ಯಮ, ಸಾಮಾಜಿಕ ಜಾಲತಾಣದಿಂದ ಬಹುದೂರ ಉಳಿದಿದ್ದಾರೆ. ಹೀಗಾಗಿ ಆಗಾಗ ಕೋಲಾರಕ್ಕೆ ಬಂದು ಹೋಗುತ್ತಾರೆ ಎನ್ನುವ ಮಾತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.