Anushka Shetty: ಗುಟ್ಟಾಗಿ ಮದುವೆಯಾಗೇ ಬಿಟ್ರಾ ನಟಿ ಅನುಷ್ಕಾ ಶೆಟ್ಟಿ!?

Anushka Shetty On Secret Marriage: ದಕ್ಷಿಣ ಚಿತ್ರರಂಗದ ಖ್ಯಾತ ನಟಿಯರಲ್ಲಿ ಅನುಷ್ಕಾ ಶೆಟ್ಟಿ ಕೂಡ ಒಬ್ಬರು. ಅನುಷ್ಕಾ ವಿನಮ್ರತೆ, ನಗುವ ಮುಖ ಈ ಸುಂದರಿಯ ನಟನೆ ಅಭಿಮಾನಿಗಳ ಮನಗೆದ್ದಿದೆ. ಬಹುಕಾಲ ಬೆಳ್ಳಿತೆರೆಯಿಂದ ದೂರ ಉಳಿದಿದ್ದ ನಟಿ ಪಿ ಮಹೇಶ್ ಬಾಬು ಅಭಿನಯದ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಚಿತ್ರದ ಮೂಲಕ ಮತ್ತೆ ತೆರೆಗೆ ಬರಲಿದ್ದಾರೆ.

Written by - Chetana Devarmani | Last Updated : Apr 22, 2023, 08:18 AM IST
  • ದಕ್ಷಿಣ ಚಿತ್ರರಂಗದ ಜನಪ್ರಿಯ ನಟಿ
  • ಗುಟ್ಟಾಗಿ ಮದುವೆಯಾದ್ರಾ ನಟಿ ಅನುಷ್ಕಾ ಶೆಟ್ಟಿ!?
  • ರಹಸ್ಯವಾಗಿ ಅನುಷ್ಕಾ ಮದುವೆ ವಿಚಾರ ಸತ್ಯವೇ!?
Anushka Shetty: ಗುಟ್ಟಾಗಿ ಮದುವೆಯಾಗೇ ಬಿಟ್ರಾ ನಟಿ ಅನುಷ್ಕಾ ಶೆಟ್ಟಿ!?  title=
Anushka Shetty

Anushka Shetty: ಅನುಷ್ಕಾ ಶೆಟ್ಟಿ ದಕ್ಷಿಣ ಚಿತ್ರರಂಗದ ಜನಪ್ರಿಯ ನಟಿಯರಲ್ಲಿ ಗುರುತಿಸಿಕೊಂಡವರು. ಈ ಹಿಂದೆ ಇವರ ಹೆಸರು ಅನೇಕ ನಟರು ಮತ್ತು ನಿರ್ದೇಶಕರ ಜೊತೆ ತಳುಕು ಹಾಕಿಕೊಂಡಿದ್ದಿದೆ. ಕಳೆದ ಕೆಲ ದಿನಗಳಿಂದ ನಟಿ ಅನುಷ್ಕಾ ಶೆಟ್ಟಿ ಮದುವೆಯ ಸುದ್ದಿ ಜೋರಾಗಿದೆ. ಸಿನಿರಂಗದಲ್ಲಿ ಈ ಸುದ್ದಿ ಮಿಂಚಿನ ಸಂಚಲನ ಸೃಷ್ಟಿಸುತ್ತಿದೆ. ಅನುಷ್ಕಾ ಶೆಟ್ಟಿ ಸೌತ್ ಇಂಡಸ್ಟ್ರಿಯಲ್ಲಿ ಟಾಪ್‌ ನಟಿಯರ ಪಟ್ಟಿಯಲ್ಲಿ ಸ್ಥಾನ ಪಡೆದವರು. ಹಲವು ವರ್ಷಗಳಿಂದ ಅನುಷ್ಕಾ - ಪ್ರಭಾಸ್ ಡೇಟಿಂಗ್ ವದಂತಿ ಹರಿದಾಡುತ್ತಿತ್ತು. ಆದರೆ ಕಳೆದ ವರ್ಷ ಇವರಿಬ್ಬರೂ ಬೇರ್ಪಟ್ಟಿದ್ದರು ಎನ್ನಲಾಗಿದೆ. 

ತೆಲುಗು ಚಿತ್ರರಂಗದ ಜನಪ್ರಿಯ ತಾರೆ ಅನುಷ್ಕಾ ಶೆಟ್ಟಿ ಬಗ್ಗೆ ಇಂತಹ ಗಾಸಿಪ್‌ಗಳು ಆಗಾಗೆ ಕೇಳಿಬರುವುದು ಸಾಮಾನ್ಯ. ಆದರೆ ಇದೀಗ ರಹಸ್ಯವಾಗಿ ಅನುಷ್ಕಾ ಮದುವೆಯಾಗಿದ್ದಾರೆ ಎಂಬ ವಿಚಾರ ಎಲ್ಲೆಡೆ ಹರಿದಾಡುತ್ತಿದೆ. ಅನುಷ್ಕಾ ಶೆಟ್ಟಿ ಗುಟ್ಟಾಗಿ ಮದುವೆಯಾಗಿದ್ದಾರೆ ಎನ್ನಲಾಗಿದೆ. 

ಇದನ್ನೂ ಓದಿ: ಸಿಲ್ವರ್‌ ಸ್ಕರ್ಟ್‌ನಲ್ಲಿ ಅದ್ಭುತವಾಗಿ ಕಂಗೊಳಿಸಿತು ʼಮೊನಾಲಿಸಾʼ ಅಂದ..! ಫೋಟೋ ನೋಡಿ

ಸಂದರ್ಶನವೊಂದರಲ್ಲಿ, ಅನುಷ್ಕಾ ತನ್ನ ಬಗ್ಗೆ ಹರಡಿರುವ ವದಂತಿಗಳ ಬಗ್ಗೆ ಮಾತನಾಡಿದ್ದಾರೆ. ಅನುಷ್ಕಾ ಶೆಟ್ಟಿ ತಮ್ಮ ಮದುವೆಯ ಬಗ್ಗೆ ತುಂಬಾ ಓಪನ್‌ಅಪ್‌ ಆಗಿ ಮಾತನಾಡಿದ್ದರು. ಈ ಸಂದರ್ಶನ ಈಗ ವೈರಲ್‌ ಆಗುತ್ತಿದೆ. ತುಂಬಾ ಶಾಂತ ಚಿತ್ತ ಹೊಂದಿರುವ ನಟಿ, ಉದ್ಯಮದಲ್ಲಿನ ವದಂತಿಗಳು ತನ್ನ ಮೇಲೆ ಪರಿಣಾಮ ಬೀರುವುದಿಲ್ಲ. ಪೋಷಕರು ಕಲಿಸಿದ ಹಾದಿಯಲ್ಲಿ ನಡೆಯುವುದಾಗಿ ಹೇಳಿದ್ದಾರೆ. 

ಗುಟ್ಟಾಗಿ ಮದುವೆಯಾಗುವ ಸುದ್ದಿಯ ಕುರಿತು ಅನುಷ್ಕಾ ಮಾತನಾಡಿದ್ದಾರೆ. ಇಂತಹ ಸುದ್ದಿಗಳನ್ನು ನಾನು ಆಗಾಗ ಓದುತ್ತೇನೆ. ಇದನ್ನು ಓದಿ ನನಗೇ ನಗು ಬರುತ್ತದೆ. ಈ ವದಂತಿಗಳು ನನಗೆ ಫನ್ನಿ ಎನಿಸುತ್ತವೆ ಎಂದಿದ್ದಾರೆ. ರಹಸ್ಯವಾಗಿ ಮದುವೆಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅದರಲ್ಲಿ ಐದು ನಿದರ್ಶನಗಳಿವೆ. ನನಗೆ ಇದು ತಮಾಷೆಯಾಗಿ ಕಾಣುತ್ತೆ. ಸುದ್ದಿಯನ್ನು ಓದುವಾಗ ನನ್ನಷ್ಟಕ್ಕೆ ನಾನೇ ನಗುವೆ ಎಂದಿದ್ದಾರೆ.

ಇದನ್ನೂ ಓದಿ:  ಪ್ಯಾನ್ ಇಂಡಿಯಾ ಸ್ಟಾರ್‌ಡಮ್ ಗಳಿಸಿದ ಕನ್ನಡ ನಟಿಯರು ಇವರು

ಆರಂಭದ ದಿನಗಳಲ್ಲಿ ಇಂತಹ ವದಂತಿಗಳಿಂದ ತೊಂದರೆಯಾಗಿದ್ದಂತು ನಿಜ. ಇಂತಹ ಸಮಯದಲ್ಲಿ ನಾನು ನನ್ನ ಅಪ್ಪ - ಅಮ್ಮನ ಜೊತೆ ಈ ಬಗ್ಗೆ ಮಾತನಾಡುವೆ. ಅವರ ಸಲಹೆಯನ್ನು ತೆಗೆದುಕೊಳ್ಳುತ್ತೇನೆ. ಅವರು ಹೇಳಿದ ಹಾದಿಯಲ್ಲಿ ನಡೆಯುತ್ತೇನೆ ಎಂದು ಹೇಳಿದ್ದಾರೆ. 

ವಯಸ್ಸು 41.. ಆದರೂ ಅನುಷ್ಕಾ ಇನ್ನೂ ಬ್ಯಾಚುಲರ್‌ ಆಗಿ ಉಳಿದಿದ್ದಾರೆ. ಇವರ ಅಭಿಮಾನಿಗಳು ಸಹ ಅನುಷ್ಕಾ ಶೆಟ್ಟಿ ಮದುವೆಯ ಬಗ್ಗೆ ಗುಡ್ ನ್ಯೂಸ್ ಕೇಳಲು ಕಾದು ಕುಳಿತಿದ್ದಾರೆ. ಅನುಷ್ಕಾ ಶೆಟ್ಟಿ ಅವರ 48 ನೇ ಚಿತ್ರಕ್ಕೆ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಎಂದು ಹೆಸರಿಡಲಾಗಿದೆ. ಕೆಲವು ದಿನಗಳ ಹಿಂದೆ ನಿರ್ಮಾಪಕರು ಪೋಸ್ಟರ್ ಅನ್ನು ಅನಾವರಣಗೊಳಿಸಿದ್ದಾರೆ. ಪಿ ಮಹೇಶ್ ಬಾಬು ನಿರ್ದೇಶನದ ಈ ಚಿತ್ರದ ಮೂಲಕ 4 ವರ್ಷಗಳ ನಂತರ ಮತ್ತೆ ಹಿರಿತೆರೆಗೆ ಅನುಷ್ಕಾ ಮರಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News