‘ಗತವೈಭವ’ ದಲ್ಲಿ ಆಶಿಕಾ ದೇವಕನ್ಯೆ..! ‘ಚುಟುಚುಟು’ ಬ್ಯೂಟಿ ಈಗ ದುಶ್ಯಂತ್ ಬೆಡಗಿ..!

Written by - Malathesha M | Edited by - Manjunath N | Last Updated : Aug 4, 2022, 07:31 PM IST
  • ಅಷ್ಟಕ್ಕೂ ಸ್ಯಾಂಡಲ್‌ವುಡ್‌ನ ಪ್ರತಿಭಾನ್ವಿತ ನಿರ್ದೇಶಕರಲ್ಲಿ ಸಿಂಪಲ್ ಸುನಿ ಕೂಡ ಒಬ್ಬರು.
  • ಇದೀಗ ಸಿಂಪಲ್ ಸುನಿ ಸಿನಿಮಾ ಖಜಾನೆಯಿಂದ ‘ಗತವೈಭವ’ ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದೆ.
‘ಗತವೈಭವ’ ದಲ್ಲಿ ಆಶಿಕಾ ದೇವಕನ್ಯೆ..! ‘ಚುಟುಚುಟು’ ಬ್ಯೂಟಿ ಈಗ ದುಶ್ಯಂತ್ ಬೆಡಗಿ..! title=

ಪಡ್ಡೆ ಹುಡುಗರ ನಿದ್ದೆ ಕದ್ದಿರುವ ನಟಿಯರಲ್ಲಿ ಆಶಿಕಾ ಕೂಡ ಒಬ್ಬರು. ಹೀಗೆ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ತಮ್ಮ ಪ್ರತಿಭೆಯಿಂದ ನಿರಂತರ ಹಿಟ್‌ ಚಿತ್ರ ನೀಡುತ್ತಿರುವ ಆಶಿಕಾ ದೇವಕನ್ಯೆ ಆಗಿದ್ದಾರೆ. ಅರೆರೆ ಯಾಕಪ್ಪಾ ಅಂದ್ರಾ..? ಇದರ ಹಿಂದೆ ದೊಡ್ಡ ಸ್ಟೋರಿಯೇ ಇದೆ. ಅದನ್ನ ಮುಂದೆ ವಿವರಿಸಿದ್ದೇವೆ ಓದಿ.

ಅಷ್ಟಕ್ಕೂ ಸ್ಯಾಂಡಲ್‌ವುಡ್‌ನ ಪ್ರತಿಭಾನ್ವಿತ ನಿರ್ದೇಶಕರಲ್ಲಿ ಸಿಂಪಲ್ ಸುನಿ ಕೂಡ ಒಬ್ಬರು. ಇದೀಗ ಸಿಂಪಲ್ ಸುನಿ ಸಿನಿಮಾ ಖಜಾನೆಯಿಂದ ‘ಗತವೈಭವ’ ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದೆ. ‘ಗತವೈಭವ’ದ ಮೂಲಕ ಗುಬ್ಬಿ ಕ್ಷೇತ್ರದ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಪುತ್ರ ದುಷ್ಯಂತ್‌ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ವಿಭಿನ್ನವಾಗಿ ದುಷ್ಯಂತ್ ಇಂಟ್ರುಡಕ್ಷನ್ ಟೀಸರ್ ರಿಲೀಸ್ ಮಾಡಿದ್ದ ಸುನಿ ನಾಯಕಿಯನ್ನೂ ಅದೇ ರೀತಿ ವಿಭಿನ್ನವಾಗಿ ಪರಿಚಯಿಸಿದ್ದಾರೆ.

ಇದನ್ನೂ ಓದಿ: ಕಿಚ್ಚ ಸುದೀಪ್‌ 'ವಿಕ್ರಾಂತ್‌ ರೋಣ'..! ಮೊದಲ ದಿನವೇ ಹಲವು ದಾಖಲೆ ಉಡೀಸ್..!‌

‘ಗತವೈಭವ’ ಸಂಭ್ರಮ..!
ಅಷ್ಟಕ್ಕೂ ಆಶಿಕಾ ಅವರ ಇಂಟ್ರುಡಕ್ಷನ್ ಭರ್ಜರಿಯಾಗಿದೆ. ‘ಗತವೈಭವ’ದಲ್ಲಿ ಮಿಂಚು ಹರಿಸಲು ಆಶಿಕಾ ಸಜ್ಜಾಗಿದ್ದಾರೆ. ಗತವೈಭವಕ್ಕೆ ನಾಯಕಿ ಯಾರು ಆಗ್ತಾರೆ ಎಂಬ ಕುತೂಹಲ ಕಾಡುತ್ತಿತ್ತು. ಇದೀಗ ಅಭಿಮಾನಿಗಳ ಕುತೂಹಲ ಮತ್ತು ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸುನಿ ತಮ್ಮದೇ ಸ್ಟೈಲ್‌ನಲ್ಲಿ ನಾಯಕಿಯನ್ನು ಪರಿಚಯಿಸಿದ್ದಾರೆ. ಹೊಸ ಹೀರೋಗೆ ಆಶಿಕಾ ಹೀರೋಯಿನ್ ಆಗಲು ಸುನಿ ಹೇಗೆ ಒಪ್ಪಿಸಿದ್ರೂ ಅನ್ನೋದನ್ನ ಸಣ್ಣ ಝಲಕ್ ಮೂಲಕ ತೋರಿಸಿದ್ದಾರೆ. ವಿಡಿಯೋ ಕೊನೆಯಲ್ಲಿ ಆಶಿಕಾ ಲುಕ್ ರಿವೀಲ್ ಮಾಡಿದ್ದು, ದೇವಕನ್ಯೆಯ ಗೆಟಪ್‌ನಲ್ಲಿ ಚುಟುಚುಟು ಬ್ಯೂಟಿ ಮಿಂಚಿದ್ದಾರೆ.

ಇದನ್ನೂ ಓದಿ: ಕರ್ನಾಟಕ ರತ್ನ ‘ಅಪ್ಪು’ ಅಭಿಮಾನಿಗಳಿಗೆ ಕಿಚ್ಚ ಸುದೀಪ್‌ ಸ್ಪೆಷಲ್‌ ಥ್ಯಾಂಕ್ಸ್..!‌

ಇನ್ನು ‘ಗತವೈಭವ’ ಸಿನಿಮಾ ಒಂದು ರೋಮ್ಯಾಂಟಿಕ್ ಲವ್ ಸ್ಟೋರಿ. ಅಷ್ಟೇ ಅಲ್ಲದೆ ಸೈಂಟಿಫಿಕ್ ಥ್ರಿಲ್ಲರ್ ಕಂಟೆಂಟ್ ಕೂಡ ಇರಲಿದ್ದು, ಶೇಕಡಾ 40ರಷ್ಟು ಶೂಟಿಂಗ್ ಕಂಪ್ಲೀಟ್ ಆಗಿದೆ.‌ ಇನ್ನೂ ಈ ಚಿತ್ರದಲ್ಲಿ ಆಶಿಕಾ ದುಷ್ಯಾಂತ್‌ಗೆ ಜೋಡಿಯಾಗಿ ನಟಿಸಲಿದ್ದು, ದೇವಕನ್ಯೆ ಹಾಗೂ ಪೋರ್ಚುಗೀಸ್ ಯುವತಿ ಪಾತ್ರದಲ್ಲಿ ಅಭಿನಯಿಸಲಿದ್ದಾರಂತೆ. ಹಾಗೇ ಗತವೈಭವ ಸಿನಿಮಾವನ್ನ ಸುನಿ ಸಿನಿಮಾಸ್ ಸಂಸ್ಥೆ ಅಡಿ ದೀಪಿಕ್ ಹಾಗೂ ಸುನಿ ಚಿತ್ರ ನಿರ್ಮಾಣ ಮಾಡ್ತಿದ್ದು, ವಿಲಿಯಂ ಡೇವಿಡ್ ಕ್ಯಾಮೆರಾ ವರ್ಕ್, ಜೂಡಾ ಸ್ಯಾಂಡಿ ಸಂಗೀತ ಚಿತ್ರಕ್ಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News