"KMH CUP" ಗೆ ನಟಿ ಭಾವನ ರಾಮಣ್ಣ ರಾಯಭಾರಿ

Actress Bhavan Ramanna: ಕರ್ನಾಟಕ ರಾಜ್ಯ ಚಲನಚಿತ್ರ ವರ್ಣಾಲಂಕಾರ ಮತ್ತು ಕೇಶಾಲಂಕಾರ ಕಲಾವಿದರ ಸಂಘದಿಂದ ಕ್ರಿಕೆಟ್ ಟೂರ್ನಿ ಆಯೋಜನೆ ಮಾಡಲಾಗಿದೆ. 

Written by - YASHODHA POOJARI | Last Updated : Jun 27, 2024, 10:58 AM IST
  • ಕಲಾವಿದರ ಸಂಘದಿಂದ ಕ್ರಿಕೆಟ್ ಟೂರ್ನಿ ಆಯೋಜನೆ
  • "ಕೆ ಎಂ ಹೆಚ್ ಕಪ್" ಕ್ರಿಕೆಟ್ ಟೂರ್ನಿ ಲೋಗೋ ಬಿಡುಗಡೆ
  • "KMH CUP" ಗೆ ನಟಿ ಭಾವನ ರಾಮಣ್ಣ ರಾಯಭಾರಿ
"KMH CUP" ಗೆ ನಟಿ ಭಾವನ ರಾಮಣ್ಣ ರಾಯಭಾರಿ  title=

Actress Bhavan Ramanna : ಕರ್ನಾಟಕ ರಾಜ್ಯ ಚಲನಚಿತ್ರ ವರ್ಣಾಲಂಕಾರ ಮತ್ತು ಕೇಶಾಲಂಕಾರ ಕಲಾವಿದರ ಸಂಘದಿಂದ ಕ್ರಿಕೆಟ್ ಟೂರ್ನಿ ಆಯೋಜನೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ತಂತ್ರಜ್ಞರಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ವರ್ಣಾಲಂಕಾರ ಮತ್ತು ಕೇಶಾಲಂಕಾರ ಕಲಾವಿದರ ಸಂಘದಿಂದ ಆಯೋಜಿಸಲಾಗಿರುವ "ಕೆ ಎಂ ಹೆಚ್ ಕಪ್" ಕ್ರಿಕೆಟ್ ಟೂರ್ನಿ ಲೋಗೋ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು.  

ಈ ಟೂರ್ನಿಯ ರಾಯಭಾರಿ ಆಗಿರುವ ನಟಿ ಭಾವನ ರಾಮಣ್ಣ ಲೋಗೊ ಬಿಡುಗಡೆ ಮಾಡಿದರು. ಕಾಂಗ್ರೆಸ್ ಮುಖಂಡರಾದ ದಿನೇಶ್, ಸಂಘದ ಅಧ್ಯಕ್ಷರಾದ ಎಸ್ ಬಾಬು ಧರ್ಮೇಂದ್ರ ಹಾಗೂ ಕಾರ್ಯದರ್ಶಿ ದಿನೇಶ್ ಆಚಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ಚಲನಚಿತ್ರ ವರ್ಣಾಲಂಕಾರ ಮತ್ತು ಕೇಶಾಲಂಕಾರ ಕಲಾವಿದರ ಸಂಘಕ್ಕೆ ಮೂವತ್ತೈದು ವರ್ಷಗಳ ಇತಿಹಾಸವಿದೆ. ಅನೇಕ ಹಿರಿಯರು ಈ ಸಂಘವನ್ನು ಕಟ್ಟಿ ಬೆಳೆಸಿದ್ದಾರೆ. ಇದೇ ಮೊದಲ ಬಾರಿಗೆ ನಮ್ಮ ಸಂಘದ ವತಿಯಿಂದ "ಕೆ ಎಂ ಹೆಚ್  ಕಪ್" ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದೆ. ಸದಾ ನಮ್ಮ ಸಂಘದ ಜೊತೆಯಿರುವ ನಟಿ ಭಾವನ ರಾಮಣ್ಣ ಈ ಟೂರ್ನಿಯ ರಾಯಭಾರಿಯಾಗಿದ್ದಾರೆ. 

ಇದನ್ನೂ ಓದಿ: ರವಿಚಂದ್ರನ್‌ ಚಿತ್ರಗಳಿಗೆ ತೆರೆ ಮರೆಯಲ್ಲಿ ಧ್ವನಿಯಾಗಿದ್ದ ನಟ, ಕೊನೆಯವರೆಗೂ ಸಿಗಲೇ ಇಲ್ಲ ಕೆಲಸಕ್ಕೆ ತಕ್ಕ ಪ್ರತಿಫಲ..!

ಜುಲೈ 20 ಹಾಗೂ 21 ಶನಿವಾರ ಹಾಗೂ ಭಾನುವಾರ ವಿಜಯನಗರದ ಬಿ.ಜಿ.ಎಸ್ ಮೈದಾನದಲ್ಲಿ ಈ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ನಡೆಯಲಿದೆ. ಬೆ 8 ರಿಂದ ರಾತ್ರಿ 8 ವರೆಗೂ ಪಂದ್ಯಗಳು ನಡೆಯುತ್ತದೆ. ನಾಕೌಟ್ ಪಂದ್ಯಗಳು ಆರು ಓವರ್ ಇರುತ್ತದೆ. ಫೈನಲ್ ಪಂದ್ಯ ಎಂಟು ಓವರ್ ನದಾಗಿರುತ್ತದೆ. ಗೆದ್ದ ಮೊದಲ ತಂಡಕ್ಕೆ 49,999 ರೂಪಾಯಿ ಹಾಗೂ ರನ್ನರ್ ತಂಡಕ್ಕೆ 24, 999 ರೂಪಾಯಿ ಬಹುಮಾನ ನೀಡಲಾಗುವುದು. 

ಟೂರ್ನಿಯಲ್ಲಿ ಭಾಗವಹಿಸುವ ತಂಡಕ್ಕೆ ಹತ್ತುಸಾವಿರ ಪ್ರವೇಶದರವಿರುತ್ತದೆ. ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ ಒಳಪಡುವ ಹನ್ನೆರಡು ಸಂಘಗಳು ಹಾಗೂ ಮಾಧ್ಯಮದ ಮಿತ್ರರು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ. ಒಟ್ಟು ಹದಿನಾಲ್ಕು ತಂಡಗಳು ಟೂರ್ನಿಯಲ್ಲಿ ಭಾಗಿಯಾಗಲಿದೆ ಎಂದು ಸಂಘದ ಅಧ್ಯಕ್ಷರಾದ ಬಾಬು ಧರ್ಮೇಂದ್ರ ತಿಳಿಸಿದರು.

ತಮ್ಮ ಮೊದಲ ಚಿತ್ರಕ್ಕೆ ಮೇಕಪ್ ಮಾಡಿದ ವೆಂಕಟೇಶ್ ಅವರನ್ನು ನೆನಪಿಸಿಕೊಂಡು ಮಾತು ಆರಂಭಿಸಿದ ನಟಿ ಭಾವನ ರಾಮಣ್ಣ, ನಾನು ನಟಿಸುವ ಎಲ್ಲಾ ಚಿತ್ರಗಳ ನಿರ್ಮಾಪಕರಿಗೆ ಹೇಳುವುದು ಮೇಕಪ್ ಹಾಗೂ ಕೇಶಾಲಂಕಾರಕ್ಕೆ ಈ ಸಂಘದ ಸದಸ್ಯರೆ ಇರಲಿ ಎಂದು. ಈಗ ಸಾಕಷ್ಟು ಜನ‌ರು ಸಾಮಾಜಿಕ ಜಾಲತಾಣಗಳಲ್ಲಿ ಮೇಕಪ್ ಕುರಿತು ಪ್ರಮೋಷನ್ ಮಾಡಿಕೊಳ್ಳುತ್ತಾರೆ. ಅದರಿಂದ ಇವರಿಗೆ ಸ್ವಲ್ಪ ತೊಂದರೆಯಾಗುತ್ತಿದೆ‌.  ಇನ್ನು ಈ ಟೂರ್ನಿಯ ಬಗ್ಗೆ ಹೇಳಬೇಕೆಂದರೆ,  ಹೆಚ್ಚಾಗಿ ಕಲಾವಿದರು ಕ್ರಿಕೆಟ್ ಆಡುತ್ತೇವೆ‌. ತಂತ್ರಜ್ಞರು ಆಡುವುದು ಕಡಿಮೆ. ಕಾರ್ಮಿಕರು ಹಾಗೂ ತಂತ್ರಜ್ಞರಿಗಾಗಿ ಆಯೋಜಿಸಿರುವ ಈ ಕ್ರಿಕೆಟ್ ಟೂರ್ನಿಯ ರಾಯಭಾರಿಯಾಗಿದ್ದು ಖುಷಿಯಾಗಿದೆ. ಟೂರ್ನಿ ಯಶಸ್ವಿಯಾಗಲಿ ಎಂದರು.

ಇದನ್ನೂ ಓದಿ: ಯಶ್‌ ʻಟಾಕ್ಸಿಕ್‌ʼ ಸಿನಿಮಾಗೆ ಬಾಲಿವುಡ್‌ ಕೀನ್‌ ಎಂಟ್ರಿ, ಮುಂಬೈನಿಂದ ಸಿದಾ ಬಂದೇ ಬಿಟ್ರು ʻಬದ್ಲಾಪುರ್‌ʼ ಬೆಡಗಿ..! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News