Porn Video Shoot ಆರೋಪದ ಮೇಲೆ 'ಗಂಧಿ ಬಾತ್' ನಟಿ ಗಹನಾ ವಸಿಷ್ಠ ಬಂಧನ

'Ganchi Baat' Actress Gehana Vasisht Arrested - ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಅದನ್ನು ವೆಬ್ ಸೈಟ್ ಗೆ ಅಪ್ಲೋಡ್ ಮಾಡಿದ ಆರೋಪದ ಮೇಲೆ 'ಗಂಧಿ ಬಾತ್' ನಟಿ ಗಹನಾ ವಸಿಷ್ಠಳನ್ನು ಬಂಧಿಸಲಾಗಿದೆ.

Written by - Nitin Tabib | Last Updated : Feb 7, 2021, 11:58 AM IST
  • 'ಗಂಧಿ ಬಾತ್' ಚಿತ್ರ ನಟಿ ಗೆಹನಾ ವಸಿಷ್ಠ ಬಂಧಿಸಿದ ಮುಂಬೈ ಪೊಲೀಸರು.
  • ಪಾರ್ನ್ ವಿಡಿಯೋ ಚಿತ್ರೀಕರಿಸಿರುವ ಆರೋಪದ ಮೇಲೆ ಬಂಧನ.
  • ಪ್ರಕರಣದಲ್ಲಿ ಒಟ್ಟು ಐವರನ್ನು ವಶಕ್ಕೆ ಪಡೆದ ಮುಂಬೈ ಕ್ರೈಂ ಬ್ರಾಂಚ್ ಪ್ರಾಪರ್ಟಿ ಸೆಲ್ ಪೊಲೀಸರು.
Porn Video Shoot ಆರೋಪದ ಮೇಲೆ 'ಗಂಧಿ ಬಾತ್' ನಟಿ ಗಹನಾ ವಸಿಷ್ಠ ಬಂಧನ  title=
'Ganchi Baat' Actress Gehana Vasisht Arrested(File Photo)

ನವದೆಹಲಿ: 'Ganchi Baat' Actress Gehana Vasisht Arrested - ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಅದನ್ನು ವೆಬ್ ಸೈಟ್ ಗೆ ಅಪ್ಲೋಡ್ ಮಾಡಿದ ಆರೋಪದ ಮೇಲೆ 'ಗಂಧಿ ಬಾತ್' ನಟಿ ಗಹನಾ ವಸಿಷ್ಠಳನ್ನು ಬಂಧಿಸಲಾಗಿದೆ. ಅವರನ್ನು ಇಂದು ಮುಂಬೈನ ನ್ಯಾಯಾಲಯವೊಂದರಲ್ಲಿ ಹಾಜರುಪಡಿಸಲಾಗುತ್ತಿದೆ. ಈ ಕುರಿತು ಮಾಹಿತಿ ನೀಡಿರುವ ಮುಂಬೈ ಪೊಲೀಸರು ಗಹನಾ ಸುಮಾರು 85 ಕ್ಕೂ ಹೆಚ್ಚು ಪಾರ್ನ್ ಚಿತ್ರಗಳನ್ನು ಶೂಟ್ ಮಾಡಿ ಅದನ್ನು ವೆಬ್ಸೈಟ್ ವೊಂದರ ಮೇಲೆ ಅಪ್ಲೋಡ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇದಲ್ಲದೆ ಪೊಲೀಸರು (Mumbai Crime Branch Property Cell) ಇತರೆ ಮಾಡೆಲ್ಗಳು, ಸೈಡ್ ಆರ್ಟಿಸ್ಟ್ ಹಾಗೂ ಕೆಲ ಪ್ರೊಡಕ್ಷನ್ ಹೌಸ್ ಗಳ ಪಾಲುದಾರಿಕೆಯ ಮೇಲೂ ಕೂಡ ನಿಗಾವಹಿಸಿದ್ದಾರೆ. ಈ ಪ್ರೊಡಕ್ಷನ್ ಹೌಸ್ ಗಳ ಮೇಲೆ ಅಡಲ್ಟ್ ಚಿತ್ರಗಳನ್ನು ಶೂಟ್ ಮಾಡಿ ಮೊಬೈಲ್ ಆಪ್ ಹಾಗೂ ವೆಬ್ ಸೈಟ್ ಗಳ ಮೇಲೆ ಎಡಿಟ್ ಮಾಡಿ ಅಪ್ಲೋಡ್ ಮಾಡಿದ ಆರೋಪವಿದೆ.

ಒಂದು ಕಾಲದಲ್ಲಿ ಮಿಸ್ ಏಷ್ಯಾ ಬಿಕಿನಿ ಪಟ್ಟ ಅಲಂಕರಿಸಿರುವ ಗಹನಾ (Gehana Vasisth) ಜಾಹೀರಾತುಗಳು, ಹಿಂದಿ ಹಾಗೂ ತೆಲುಗು ಸಿಮಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ವರದಿಗಳ ಪ್ರಕಾರ ಗಹನಾ ಸುಮಾರು 87 ಪಾರ್ನ್ ಸಿನಿಮಾಗಳನ್ನು ಚಿತ್ರೀಕರಿಸಿ ಅವುಗಳನ್ನು ವೆಬ್ ಸೈಟ್ ಗೆ ಅಪ್ಲೋಡ್ ಮಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಈ ಚಿತ್ರಗಳನ್ನು ವಿಕ್ಷೀಸಲು ಸದಸ್ಯತ್ವ ಪಡೆಯಬೇಕು. ಗಹನಾ ಅವರ ಚಾನಲ್ ಗೆ ಚಂದಾದಾರರಾಗಲು ವೀಕ್ಷಕರು ರೂ.2000 ಸದಸ್ಯತ್ವ ಶುಲ್ಕ ನೀಡಬೇಕು.

ಇದನ್ನು ಓದಿ-Republic TV ಎಡಿಟರ್ ಇನ್ ಚೀಫ್ Arnab Goswami ಬಂಧನ, ಇಲ್ಲಿದೆ ಸಂಪೂರ್ಣ ವಿವರ

ಮುಂಬೈನಲ್ಲಿ ಪಾರ್ನ್ ಚಿತ್ರಗಳ (Porn Video) ನಿರ್ಮಾಣದಲ್ಲಿ ತೊಡಗಿರುವ ಒಂದು ಗುಂಪಿನ ಮುಖವಾದ ಬಯಲು ಮಾಡಿರುವ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಬಾಲಿವುಡ್ ನಲ್ಲಿ ಕೆಲಸ ಆರಿಸಿ ಬರುವ ಉದಯೋನ್ಮುಖ ಕಲಾವಿದರನ್ನು ಹಾಗೂ ಮಾಡೆಲ್ ಗಳನ್ನೂ ವೆಬ್ ಸೀರಿಜ್ ನಲ್ಲಿ ಕೆಲಸ ಕೊಡಿಸುವ ಆಮೀಷವೊಡ್ಡಿ ಪಾರ್ನ್ ಚಿತ್ರರಂಗಕ್ಕೆ ದೂಕಲಾಗುತ್ತಿದೆ. ಬಳಿಕ ಅವರ ವಿಡಿಯೋಗಳನ್ನು ಮೊಬೈಲ್ ಆಪ್ ಹಾಗೂ ವೆಬ್ ಸೈಟ್ ಮೂಲಕ ಪ್ರಕಟಿಸಲಾಗುತ್ತಿದೆ. ಮುಂಬೈ ಪೋಲೀಸ್ (Mumbai Police) ನ ಕ್ರೈಂ ಬ್ರಾಂಚ್ ನ ಪ್ರಾಪರ್ಟಿ ಸೆಲ್ ಅಧಿಕಾರಿಯೊಬ್ಬರು ಶುಕ್ರವಾರ ಈ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ- ಸಂಜಯ್ ರೌತ್ ಗೆ ಬೆದರಿಕೆ ಹಾಕಿದ ವ್ಯಕ್ತಿಯೇ ಉದ್ಧವ್ ಠಾಕ್ರೆ, ಶರದ್ ಪವಾರ್ ಗೆ ಕರೆ ಮಾಡಿದ್ದು...!

ಬಂಧಿಸಲಾಗಿರುವ ಆರೋಪಿಗಳಲ್ಲಿ ಓರ್ವ ಪುರುಷ ಕಲಾವಿನ, ಓರ್ವ ಲೈಟ್ ಮ್ಯಾನ್ ಹಾಗೂ ಓರ್ವ ಮಹಿಳಾ ಫೋಟೋಗ್ರಾಫರ್ ಹಾಗೂ ಗ್ರಾಫಿಕ್ ಕಲಾವಿದೆ ಶಾಮೀಲಾಗಿದ್ದಾರೆ. ಮಲಾಡ್ ನ ಮಾಧ ಪ್ರದೇಶದಲ್ಲಿರುವ ಬಂಗಲೆಯೊಂದರ ಮೇಲೆ ನಡೆದ ದಾಳಿಯ ವೇಳೆ ಇವರನ್ನು ಬಂಧಿಸಲಾಗಿದೆ. ಇಲ್ಲಿ ಮೊಬೈಲ್ ಹಾಗೂ ಕ್ಯಾಮೆರಾಗಳ ಸಹಾಯದಿಂದ ಪಾರ್ನ್ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿತ್ತು. ಈ ದಾಳಿಯ ವೇಳೆ ಮಹಿಳೆಯೋರ್ವಳನ್ನು ಪೊಲೀಸರು ರಕ್ಷಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಮಹಿಳೆ ಪಾರ್ನ್ ದೃಶ್ಯ ಚಿತ್ರೀಕರಿಸಿದ (Porn Video Shoot) ಬಳಿಕ ಅವಳಿಗೆ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಹಾಗೂ ಇಂಟರ್ನೆಟ್ ಮೇಲೆ ಅಪ್ಲೋಡ್ ಮಾಡಲು ಹೇಳಲಾಗುತ್ತಿತ್ತು ಎಂದಿದ್ದಾಳೆ. ಬಳಿಕ ಜನರಿಗೆ ಚಂದಾದಾರಿಕೆ ಪಡೆಯಲು ಉತ್ತೇಜಿಸಿ ಅವರಿಂದ ಹಣ ಗಳಿಕೆ ಮಾಡಲಾಗುತ್ತಿತ್ತು.

ಇದನ್ನು ಓದಿ-ಟಿಆರ್‌ಪಿ ರೇಟಿಂಗ್ ತಿರುಚುವ ದಂಧೆ ಭೇದಿಸಿದ ಮುಂಬೈ ಪೋಲಿಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News