Adipurush : ಆದಿಪುರುಷ ಸಿನಿಮಾ ಪ್ರಿ ಬುಕಿಂಗ್ ಈ ದಿನದಿಂದ ಪ್ರಾರಂಭ!?

Adipurush Advance Booking : ಬಹುನಿರೀಕ್ಷಿತ ಸಿನಿಮಾ ಆದಿಪುರುಷ ಮುಂದಿನ ವಾರ ತೆರೆ ಕಾಣಲಿದೆ. ಸಿನಿಮಾದ ಮುಂಗಡ ಟಿಕೆಟ್‌ ಬುಕಿಂಗ್‌ಗಾಗಿ ಜನರು ಕಾದು ಕುಳಿತಿದ್ದಾರೆ. ದೇಶಾದ್ಯಂತ 6200 ಕ್ಕೂ ಹೆಚ್ಚು ಪರದೆಗಳಲ್ಲಿ ಸಿನಿಮಾ ತೆರೆ ಕಾಣುವ ಗುರಿಯನ್ನು ಚಿತ್ರತಂಡ ಹೊಂದಿದೆ.   

Written by - Chetana Devarmani | Last Updated : Jun 10, 2023, 01:49 PM IST
  • ಬಹುನಿರೀಕ್ಷಿತ ಸಿನಿಮಾ ಆದಿಪುರುಷ
  • ಜೂನ್ 16 ರಂದು ಆದಿಪುರುಷ ರಿಲೀಸ್‌
  • ಪ್ರಿ ಬುಕಿಂಗ್ ಈ ದಿನದಿಂದ ಪ್ರಾರಂಭ!?
Adipurush : ಆದಿಪುರುಷ ಸಿನಿಮಾ ಪ್ರಿ ಬುಕಿಂಗ್ ಈ ದಿನದಿಂದ ಪ್ರಾರಂಭ!? title=
Adipurush

Adipurush Advance Booking : ಸೌತ್ ಸೂಪರ್ ಸ್ಟಾರ್ ಪ್ರಭಾಸ್ ನಟನೆಯ ಚಿತ್ರ ಆದಿಪುರುಷ ಸಿನಿಮಾ ಜೂನ್ 16 ರಂದು ಬಿಡುಗಡೆಯಾಗಲಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಚಿತ್ರದ ಟ್ರೇಲರ್ ಸಾಕಷ್ಟು ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಚಿತ್ರದ ರಿಲೀಸ್‌ ಹತ್ತಿರವಾಗುತ್ತಿದ್ದಂತೆ ಜನರು ಸಿನಿಮಾ ಟಿಕೆಟ್‌ನ್ನು ಮುಂಗಡವಾಗಿ ಬುಕ್‌ ಮಾಡಲು ಕಾಯುತ್ತಿದ್ದಾರೆ.

ವರದಿಯ ಪ್ರಕಾರ, ಆದಿಪುರುಷ ತಂಡವು ಮುಂಗಡ ಬುಕಿಂಗ್  ಜೂನ್‌ 11 ರಿಂದ ಆರಂಭಿಸುವ ನಿರೀಕ್ಷೆಯಿದೆ. ಹಿಂದಿ ಆವೃತ್ತಿ ಮಾತ್ರ 4000 ಕ್ಕೂ ಹೆಚ್ಚು ಪರದೆಗಳಲ್ಲಿ ರಿಲೀಸ್‌ ಆಗಲಿದೆ. ಆದಿಪುರುಷ ತಂಡವು ಭಾನುವಾರದಿಂದ ಟಿಕೆಟ್‌ಗಳನ್ನು ಕಾಯ್ದಿರಿಸಲು ತಮ್ಮ ಪ್ರೇಕ್ಷಕರಿಗೆ ಅವಕಾಶ ನೀಡಲು ಸಿದ್ಧವಾಗಿದೆ. ದೇಶಾದ್ಯಂತ 6200 ಕ್ಕೂ ಹೆಚ್ಚು ಪರದೆಗಳಲ್ಲಿ ಸಿನಿಮಾ ತೆರೆ ಕಾಣುವ ಗುರಿಯನ್ನು ಚಿತ್ರತಂಡ ಹೊಂದಿದೆ. ಇದು ವರ್ಷದ ಅತ್ಯಂತ ನಿರೀಕ್ಷಿತ ಸಿನಿಮಾಗಳಲ್ಲಿ ಒಂದು.  

ಇದನ್ನೂ ಓದಿ: ಕೊನೆಗೂ ತನ್ನ ಮಗುವಿನ ಅಪ್ಪ ಯಾರೆಂದು ಹೇಳಿದ ಇಲಿಯಾನಾ.!

ಬಾಲಿವುಡ್ ನಟ ರಣಬೀರ್ ಕಪೂರ್ ಮೊದಲ ದಿನಕ್ಕೆ 10,000 ಟಿಕೆಟ್‌ಗಳನ್ನು ಖರೀದಿಸುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ‌ಹಿಂದುಳಿದ ಮಕ್ಕಳಿಗೆ ಆದಿಪುರುಷ ಸಿನಿಮಾ ತೋರಿಸುವ ಉದ್ದೇಶದಿಂದ ರಣಬೀರ್‌ ಕಪೂರ್‌ ಇಷ್ಟೊಂದು ಟಿಕೆಟ್‌ ಖರೀದಿಸಿದ್ದಾರೆ.  

ಜೂನ್ 16 ರಂದು ಆದಿಪುರುಷ ಸಿನಿಮಾ ರಿಲೀಸ್‌ ಆಗಲಿದೆ. ಆರಂಭಿಕ ದಿನದಂದು ಜಾಗತಿಕ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳಲ್ಲಿ 100 ಕೋಟಿ ರೂಪಾಯಿಗಳನ್ನು ಸಾಧಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ. ಆದಿಪುರುಷ ಸಿನಿಮಾದಲ್ಲಿ ಪ್ರಭಾಸ್‌ ರಾಮನಾಗಿ, ಕೃತಿ ಸನೋನ್‌ ಸೀತೆಯಾಗಿ, ಸೈಫ್‌ ಅಲಿ ಖಾನ್‌ ರಾವಣನಾಗಿ ನಟಿಸಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಪ್ರತಿದಿನ ವಿಪರೀತ ಮದ್ಯಪಾನ ಮಾಡ್ತಾರಾ? ಸತ್ಯ ಬಿಚ್ಚಿಟ್ಟ ಖ್ಯಾತ ನಿರ್ದೇಶಕ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News