16 ವರ್ಷಗಳ ಬಳಿಕ ಮತ್ತೆ ಒಂದಾಗಲಿದೆ ಮುಂಗಾರು ಮಳೆ ಜೋಡಿ...!

Mungaru Male : ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಚಲನಚಿತ್ರ ವಾದ ಮುಂಗಾರು ಮಳೆ ಸಿನಿಮಾ ತೆರೆಕಂಡು ಈಗಾಗಲೇ 16 ವರ್ಷಗಳಾಗಿದೆ ಇದೀಗ ಮತ್ತೆ ಮುಂಗಾರು ಮಳೆ ಜೋಡಿ ಇನ್ನೊಂದು ಸಿನಿಮಾದ ಮೂಲಕ ತೆರೆ ಮೇಲೆ ಬರಲಿದ್ದಾರೆ ಆ ಸಿನಿಮಾ ಯಾವುದು ಗೊತ್ತಾ? 

Written by - Zee Kannada News Desk | Last Updated : Jun 12, 2024, 03:26 PM IST
  • 16 ವರ್ಷಗಳ ಬಳಿಕ ಮತ್ತೆ ಒಂದಾಗಲಿದೆ ಮುಂಗಾರು ಮಳೆ ಜೋಡಿ
  • ಈ ಸಿನಿಮಾದ ಮೂಲಕ ಹಾಸ್ಯ ನಟ ಗಣೇಶ್ ಗೋಲ್ಡನ್ ಸ್ಟಾರ್ ಗಣೇಶ್ ಆದರು .
  • ಸದ್ಯಕ್ಕೆ ಈ ಸಿನಿಮಾ ಪ್ರಿ - ಪ್ರೊಡಕ್ಷನ್ ಹಂತದಲ್ಲಿದೆ

Trending Photos

16 ವರ್ಷಗಳ ಬಳಿಕ ಮತ್ತೆ ಒಂದಾಗಲಿದೆ ಮುಂಗಾರು ಮಳೆ ಜೋಡಿ...!  title=

After 16 years Mungaru Male couple will be reunited : ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಚಲನಚಿತ್ರ ವಾದ ಮುಂಗಾರು ಮಳೆ ಸಿನಿಮಾ ತೆರೆಕಂಡು ಈಗಾಗಲೇ 16 ವರ್ಷಗಳಾಗಿದೆ ಇದೀಗ ಮತ್ತೆ ಮುಂಗಾರು ಮಳೆ ಜೋಡಿ ಇನ್ನೊಂದು ಸಿನಿಮಾದ ಮೂಲಕ ತೆರೆ ಮೇಲೆ ಬರಲಿದ್ದಾರೆ ಆ ಸಿನಿಮಾ ಯಾವುದು ಗೊತ್ತಾ? 

ಮುಂಗಾರು ಮಳೆ ಸಿನಿಮಾ ಕನ್ನಡ ಚಿತ್ರರಂಗದಲ್ಲೇ ಸೂಪರ್ ಹಿಟ್ ಚಲನಚಿತ್ರವಾಗಿ, ಎವರ್ ಗ್ರೀನ್ ಹಾಡುಗಳ ಮೂಲಕ ತನ್ನದೇ ಆದ ಚಾಪನ್ನು ಕನ್ನಡ ಚಿತ್ರರಂಗದಲ್ಲಿ ಮೂಡಿಸಿತು. ಸಿನಿಮಾ ತನ್ನದೇ ಆದ ಒಂದು ಹೊಸ ಅಲೆಯನ್ನ ಸೃಷ್ಟಿಸಿ ಇಂದಿಗೂ ಕೂಡ ಜನರ ಮನಗಳಲ್ಲಿ ಅಚ್ಚಳಿಯದೆ ಉಳಿದಿದೆ. 

ಇದನ್ನು ಓದಿ : ಆ ಎರಡು ಸಿನಿಮಾಗಳಿಂದಾಗಿ ಅಪರೂಪದ ಕಾಯಿಲೆಗೆ ತುತ್ತಾಗಿದ್ದಾರಂತೆ ಈ ನಟಿ!

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪೂಜಾಗಾಂಧಿ ಅಭಿನಯದ ಸೂಪರ್ ಹಿಟ್ ಚಲನಚಿತ್ರ ಮುಂಗಾರು ಮಳೆ 2006ರಲ್ಲಿದ್ದರೆ ಕಂಡಿದ್ದು, ಸುಮಾರು 500 ದಿನಗಳ ಕಾಲ ಥಿಯೇಟರ್ ಗಳಲ್ಲಿ ಭರ್ಜರಿ ಪ್ರದರ್ಶನ ಕಂಡಿದೆ ಅಷ್ಟೇ ಅಲ್ಲದೆ 125 ಕೋಟಿಗಳಷ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು ಮಾಡಿದೆ. ಆ ಸಂದರ್ಭದಲ್ಲಿ ದಾಖಲೆಯ ಗಳಿಕೆಯನ್ನು ಈ ಸಿನಿಮಾ ಕಂಡಿದೆ. ಈಗಾಗಲೇ ಸಿನಿಮಾ 16 ವರ್ಷಗಳಿಗೂ ಹೆಚ್ಚು ವರ್ಷಗಳಾಗಿ ಮತ್ತೆ ಈ ಸಿನಿಮಾದ ಜೋಡಿ ಇನ್ನೊಂದು ಸಿನಿಮಾದ ಮೂಲಕ ತೆರೆ ಮೇಲೆ ಬರಲಿದ್ದಾರೆ. 

ಯೋಗರಾಜ್ ಭಟ್ ನಿರ್ದೇಶನದ ಮತ್ತು ಈ ಕೃಷ್ಣಪ್ಪ ಅವರ ನಿರ್ಮಾಣದಲ್ಲಿ ತೆರೆಕಂಡ ಈ ಸಿನಿಮಾದ ಜೋಡಿ ಮತ್ತೆ ಒಂದಾಗುತ್ತಿದ್ದಾರೆ. ದಕ್ಷಿಣ ಭಾರತದ ಇತಿಹಾಸದಲ್ಲಿ ಹೊಸ ಅಲೆಯನ್ನ ಸೃಷ್ಟಿಸಿ ಈ ಮುಂಗಾರು ಮಳೆ ಸಿನಿಮಾದ ಮೂಲಕ ಹಾಸ್ಯ ನಟನಾಗಿದ್ದ ಗಣೇಶ್ ಗೋಲ್ಡನ್ ಸ್ಟಾರ್ ಗಣೇಶ್ ಆದರು. ಇದೀಗ ಈ ಜೋಡಿಗಳು ಹೊಸ ಸಿನಿಮಾಕ್ಕೆ ಸಿದ್ದರಾಗುತ್ತಿದ್ದು, ಹೊಸಬರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿದ್ದಾರೆ. 

ಸದ್ಯಕ್ಕೆ ಸಿನಿಮಾ ತಂಡ ಪ್ರಿ - ಪ್ರೊಡಕ್ಷನ್ ಹಂತದಲ್ಲಿದ್ದು, ಸಿನಿಮಾದ ಕುರಿತಂತೆ ಅಧಿಕೃತ ಘೋಷಣೆಗಳು ಮುಂದಿನ ದಿನಗಳಲ್ಲಿ ಆಗಲಿವೆ ಎಂದು ಚಿತ್ರತಂಡ ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News