ಮದುವೆಯಾದ 7 ತಿಂಗಳಿಗೆ ಗರ್ಭಿಣಿಯಾದ್ರಾ ಖ್ಯಾತ ನಟಿ! ದೀಪಿಕಾ ಬಳಿಕ ಗುಡ್ ನ್ಯೂಸ್ ಕೊಡ್ತಿದ್ದಾರೆ ಈ ಬಾಲಿವುಡ್ ಬ್ಯೂಟಿ

Parineeti Chopra Pregnancy Rumours: ಇತ್ತೀಚೆಗೆ ಮದುವೆಯಾದ ನಟಿ ಪರಿಣಿತಿ ಚೋಪ್ರಾ ಗರ್ಭಿಣಿ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ. ಪರಿಣಿತಿ ಅವರ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇದನ್ನು ನೋಡಿದ ಅಭಿಮಾನಿಗಳು ಆಕೆ ಗರ್ಭಿಣಿ ಎಂದು ಹೇಳುತ್ತಿದ್ದಾರೆ.

Written by - Bhavishya Shetty | Last Updated : Mar 4, 2024, 07:44 PM IST
    • ನಟಿ ಪರಿಣಿತಿ ಚೋಪ್ರಾ ಗರ್ಭಿಣಿ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ
    • ಕೆಲವು ಸಮಯದ ಹಿಂದೆ ಪರಿಣಿತಿ ಚೋಪ್ರಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು
    • ಪರಿಣಿತಿ ತೂಕ ಹೆಚ್ಚಾಗಿದ್ದು, ಮದುವೆಯ ನಂತರ ಮಗುವಿನ ನಿರೀಕ್ಷೆಯಲ್ಲಿದ್ದಾರೆ!
ಮದುವೆಯಾದ 7 ತಿಂಗಳಿಗೆ ಗರ್ಭಿಣಿಯಾದ್ರಾ ಖ್ಯಾತ ನಟಿ! ದೀಪಿಕಾ ಬಳಿಕ ಗುಡ್ ನ್ಯೂಸ್ ಕೊಡ್ತಿದ್ದಾರೆ ಈ ಬಾಲಿವುಡ್ ಬ್ಯೂಟಿ  title=
Bollywood News

Parineeti Chopra Pregnancy Rumours: ಬಿ-ಟೌನ್‌’ನಿಂದ ಬ್ಯಾಕ್ ಟು ಬ್ಯಾಕ್ ಸಿಹಿ ಸುದ್ದಿಗಳು ಕೇಳಿ ಬರುತ್ತಿವೆ. ಮೊದಲಿಗೆ ನಟಿ ಯಾಮಿ ಗೌತಮ್ ಗರ್ಭಿಣಿ ಎಂಬ ಸುದ್ದಿ ಬಂದಿತ್ತು. ಇದಾದ ಬಳಿಕ ರಿಚಾ ಚಡ್ಡಾ ಕೂಡ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದರು. ಅದಾದ ನಂತರ ದೀಪಿಕಾ ಪಡುಕೋಣೆ ಗರ್ಭಿಣಿ ಎಂಬ ಸುದ್ದಿಯೂ ಕನ್ಫರ್ಮ್ ಆಗಿ ಅಭಿಮಾನಿಗಳಿಗೆ ಖುಷಿ ನೀಡಿದ್ದರು. ಇದೀಗ ಮತ್ತೊಂದು ಸುದ್ದಿ ಹೊರಬೀಳುತ್ತಿದೆ.

ಇದನ್ನೂ ಓದಿ: ಕಡಬ ಆ್ಯಸಿಡ್ ದಾಳಿ: ಸೂಕ್ತ ಕ್ರಮಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೂಚನೆ

ಇತ್ತೀಚೆಗೆ ಮದುವೆಯಾದ ನಟಿ ಪರಿಣಿತಿ ಚೋಪ್ರಾ ಗರ್ಭಿಣಿ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ. ಪರಿಣಿತಿ ಅವರ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇದನ್ನು ನೋಡಿದ ಅಭಿಮಾನಿಗಳು ಆಕೆ ಗರ್ಭಿಣಿ ಎಂದು ಹೇಳುತ್ತಿದ್ದಾರೆ.

ಕೆಲವು ಸಮಯದ ಹಿಂದೆ ಪರಿಣಿತಿ ಚೋಪ್ರಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಕೂಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದ ಅವರು, ಡೀಪ್ ನೆಕ್ ಲೂಸ್ ಬ್ಲ್ಯಾಕ್ ಮ್ಯಾಕ್ಸಿ ಡ್ರೆಸ್ ಧರಿಸಿದ್ದರು. ಇದರ ಮೇಲೆ ಅವರು ಡೆನಿಮ್ ಜಾಕೆಟ್ ಧರಿಸಿದ್ದರು. ಆದರೆ ಆಕೆಯ ಡ್ರೆಸ್ ನೋಡಿದ ಜನ ಪರಿಣಿತಿ ತನ್ನ ಬೇಬಿ ಬಂಪ್ ಅನ್ನು ಮರೆಮಾಚಲು ಇಷ್ಟೊಂದು ಲೂಸ್ ಡ್ರೆಸ್ ಧರಿಸಿದ್ದಾಳೆ ಎಂದು ಹೇಳುತ್ತಿದ್ದಾರೆ. ಅಷ್ಟೇ ಅಲ್ಲದೆ, ಪರಿಣಿತಿ ತೂಕ ಹೆಚ್ಚಾಗಿದ್ದು, ಮದುವೆಯ ನಂತರ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಕೆಲವು ಮೂಲಗಳು ಹೇಳುತ್ತಿವೆ.

ಇದನ್ನೂ ಓದಿ:  94 ವರ್ಷ ಹಳೆಯ ದಾಖಲೆ ಮೇಲೆ ಯಶಸ್ವಿ ಚಿತ್ತ… ಡಾನ್ ಬ್ರಾಡ್ಮನ್ ರೆಕಾರ್ಡ್ ಸರಿಗಟ್ಟುವರೇ ಜೈಸ್ವಾಲ್?

ಉಡುಗೆಯೊಂದಿಗೆ ಅವರ ನಿಧಾನ ನಡಿಗೆ ಕೂಡ ಜನರ ಗಮನ ಸೆಳೆದಿದೆ. ವಿಮಾನ ನಿಲ್ದಾಣದಲ್ಲಿ ನಿಧಾನವಾಗಿ ಹೆಜ್ಜೆ ಹಾಕುತ್ತಾ ಬಂದ ಪರಿಣಿತಿ ಮೊಗದಲ್ಲಿ ನಗು ಕಾಣಿಸಿಕೊಂಡಿತ್ತು. ಇದೀಗ ಅವರ ಈ ವಿಡಿಯೋ ಭಾರೀ ಚರ್ಚೆಗೆ ಗ್ರಾಸವಾಗಿದೆ.  ಆದರೆ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News