ಇವತ್ತು ಅಥವಾ ನಾಳೆ ಡಿಸ್ಚಾರ್ಜ್: ನಟ ದಿಗಂತ್ ಆರೋಗ್ಯದ ಬಗ್ಗೆ ಭಾವುಕರಾದ ಪತ್ನಿ ಐಂದ್ರಿತಾ

Diganth Health Condition: ನಿನ್ನೆ ನಟ ದಿಗಂತ್‌ ಅವರಿಗೆ ಮೂರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ನಟ ದಿಗಂತ್ ಆರೋಗ್ಯದ ಬಗ್ಗೆ ಪತ್ನಿ, ನಟಿ ಐಂದ್ರಿತಾ ಮಾತನಾಡಿದ್ದಾರೆ.

Written by - Zee Kannada News Desk | Last Updated : Jun 22, 2022, 05:25 PM IST
  • ಚಂದನವನದ ದೂದ್‌ಪೇಡಾ ನಟ ದಿಗಂತ್
  • ಸಮ್ಮರ್‌ ಸಾಲ್ಟ್‌ ಜಂಪ್‌ ಮಾಡುವಾಗ ಕುತ್ತಿಗೆಗೆ ಬಲವಾದ ಪೆಟ್ಟು
  • ನಟ ದಿಗಂತ್ ಆರೋಗ್ಯದ ಬಗ್ಗೆ ಪತ್ನಿ ಐಂದ್ರಿತಾ ಮಾತು
ಇವತ್ತು ಅಥವಾ ನಾಳೆ ಡಿಸ್ಚಾರ್ಜ್: ನಟ ದಿಗಂತ್ ಆರೋಗ್ಯದ ಬಗ್ಗೆ ಭಾವುಕರಾದ ಪತ್ನಿ ಐಂದ್ರಿತಾ  title=
ಐಂದ್ರಿತಾ ಮಾತು

Diganth Health Condition: ಚಂದನವನದ ದೂದ್‌ಪೇಡಾ ನಟ ದಿಗಂತ್ ಗೋವಾ ಟ್ರಿಪ್‌ ಅಲ್ಲಿದ್ದ ವೇಳೆ ಸಮ್ಮರ್‌ ಸಾಲ್ಟ್‌ ಜಂಪ್‌ ಮಾಡುವಾಗ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿತ್ತು. ಗೋವಾದಲ್ಲಿ ಪ್ರಥಮ ಚಿಕಿತ್ಸೆಯ ಬಳಿಕ, ಅವರನ್ನು ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಗೆ ಏರ್‌ಲಿಫ್ಟ್‌ ಮಾಡಲಾಯಿತು. ನಿನ್ನೆ ನಟ ದಿಗಂತ್‌ ಅವರಿಗೆ ಮೂರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ನಟ ದಿಗಂತ್ ಆರೋಗ್ಯದ ಬಗ್ಗೆ ಪತ್ನಿ, ನಟಿ ಐಂದ್ರಿತಾ ಮಾತನಾಡಿದ್ದಾರೆ.

ಇದನ್ನೂ ಓದಿ: Spinal Cord ಇಂಜುರಿ ಎಂದರೇನು? ಮೊದಲಿನಂತೆ ಆಗ್ತಾರಾ ನಟ ದಿಗಂತ್‌! ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

ಇಂದು ಮಾಧ್ಯಮಗಳ ಮುಂದೆ ಪತಿಯ ಆರೋಗ್ಯದ ಬಗ್ಗೆ ಮಾತನಾಡಿದ ಐಂದ್ರಿತಾ, ದಿಗಂತ್ ನಾವು ವೆಕೆಷನ್‌ಗೆ ಹೋಗಿದ್ವಿ. ರೆಸಾರ್ಟ್‌ಗೆ ಹೋಗಿದ್ವಿ, ಸಮರ್ ಸಾಲ್ಟ್ ಜಂಪ್‌ ಸ್ವಲ್ಪ ರಾಂಗ ಆಗಿ, ಕುತ್ತಿಗೆಗೆ ಪೆಟ್ಟಾಗಿದೆ ಎಂದು ತಿಳಿಸಿದರು.

ಗೋವಾ ಮಣಿಪಾಲ್ ಆಸ್ಪತ್ರೆಗೆ ಹೋಗಿದ್ವಿ. ಅಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಏರ್ ಲಿಫ್ಟ್‌ ಮಾಡಿದ್ವಿ. ಗೋವಾ ಸರ್ಕಾರಕ್ಕೆ ಧನ್ಯವಾದ. ಈಗ ಸರ್ಜರಿ ಆಗಿದೆ ಚೇತರಿಕೆ ಕಾಣ್ತಿದ್ದಾರೆ. ಗೋವಾದಲ್ಲಿ ಇದ್ದಾಗ ತುಂಬಾ ಟೆನ್ಷನ್ ಆಗಿದ್ದೆ. ಬೋನ್ ಇಂಜುರಿ ಆಗಿದೆ. ಆಪರೇಷನ್ ಆದಮೇಲೆ ದಿಗಂತ್ ನಗ್ತಿದ್ದಾನೆ ಎಂದು ಭಾವುಕರಾಗಿ ಐಂದ್ರಿತಾ ಹೇಳಿದರು.

ನಾನು ಇನ್ಮೇಲೆ ದಿಗಂತ್‌ನ ಟೇಕ್ ಕೇರ್ ಮಾಡ್ತೀನಿ. ಡಿಸ್ಚಾರ್ಜ್ ಇವತ್ತು ಅಥವಾ ನಾಳೆ ಮಾಡ್ತೀವಿ ಅಂದಿದ್ದಾರೆ ಎಂದು ತಿಳಿಸಿದರು. 

ಇದನ್ನೂ ಓದಿ: MS Dhoni: ಕ್ರಿಕೆಟಿಗ ಧೋನಿ ನಿರ್ಮಾಣದ ಮೊದಲ ಚಿತ್ರಕ್ಕೆ ದಳಪತಿ ವಿಜಯ್ ಹೀರೋ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News