Akanksha Dubey : ಆ ʻವಿಡಿಯೋʼದಲ್ಲಿದ್ಯಾ ಆಕಾಂಕ್ಷಾ ಸಾವಿನ 'ರಹಸ್ಯ' ! ಆತ್ಮಹತ್ಯೆಗೂ ಮನ್ನ Insta Live ಬಂದು ಹೇಳಿದ್ದೇನು?

Akanksha Dubey Suicide: ನಟಿ ಆಕಾಂಕ್ಷಾ ದುಬೆ ಹೋಟೆಲ್‌ವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಭೋಜ್‌ಪುರಿಯ ಪ್ರತಿಭಾವಂತ ನಟಿ ಇನ್‌ಸ್ಟಾಗ್ರಾಮ್ ಲೈವ್‌ಗೆ ಬಂದು ಬಾಯಿ ಮುಚ್ಚಿಕೊಂಡು ಅಳಲು ಪ್ರಾರಂಭಿಸಿದರು.   

Written by - Chetana Devarmani | Last Updated : Mar 27, 2023, 12:49 PM IST
  • ಭೋಜ್‌ಪುರಿ ನಟಿ ಆಕಾಂಕ್ಷಾ ದುಬೆ ಆತ್ಮಹತ್ಯೆ ಪ್ರಕರಣ
  • ಇದೇನಾ ಆಕಾಂಕ್ಷಾ ಸಾವಿನ 'ರಹಸ್ಯ' !
  • ಆತ್ಮಹತ್ಯೆಗೂ ಮನ್ನ Insta Live ಬಂದು ಹೇಳಿದ್ದೇನು?
Akanksha Dubey : ಆ ʻವಿಡಿಯೋʼದಲ್ಲಿದ್ಯಾ ಆಕಾಂಕ್ಷಾ ಸಾವಿನ 'ರಹಸ್ಯ' ! ಆತ್ಮಹತ್ಯೆಗೂ ಮನ್ನ Insta Live ಬಂದು ಹೇಳಿದ್ದೇನು?  title=
ಭೋಜ್‌ಪುರಿ ನಟಿ ಆಕಾಂಕ್ಷಾ ದುಬೆ ಆತ್ಮಹತ್ಯೆ ಪ್ರಕರಣ ಇದೇನಾ ಆಕಾಂಕ್ಷಾ ಸಾವಿನ 'ರಹಸ್ಯ' ! ಆತ್ಮಹತ್ಯೆಗೂ ಮನ್ನ Insta Live ಬಂದು ಹೇಳಿದ್ದೇನು?

Akanksha Dubey Suicide: ಭೋಜ್‌ಪುರಿ ನಟಿ ಆಕಾಂಕ್ಷಾ ದುಬೆ ಭಾನುವಾರ ಉತ್ತರ ಪ್ರದೇಶದ ವಾರಣಾಸಿಯ ಹೋಟೆಲ್‌ವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 25 ವರ್ಷದ ಆಕಾಂಕ್ಷಾ ಸಾವಿನ ಕುರಿತು ಎರಡು ದೊಡ್ಡ ಅಪ್‌ಡೇಟ್‌ಗಳು ಹೊರಬರುತ್ತಿವೆ. 

ಸಾಯುವ ಕೆಲವು ಗಂಟೆಗಳ ಮೊದಲು ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಆಕಾಂಕ್ಷಾ ದುಬೆ ಅವರ ಕಣ್ಣಲ್ಲಿ ನೀರು ತುಂಬಿತ್ತು, ಆದರೆ ಈಗ ಅವರು ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಏನು ಹೇಳಲು ಬಯಸಿದ್ದರು ಎಂಬ ಪ್ರಶ್ನೆ ಉದ್ಭವಿಸುತ್ತಿದೆ? ಭೋಜ್‌ಪುರಿಯ ಪ್ರತಿಭಾವಂತ ನಟಿ ಇನ್‌ಸ್ಟಾಗ್ರಾಮ್ ಲೈವ್‌ಗೆ ಬಂದು ಬಾಯಿ ಮುಚ್ಚಿಕೊಂಡು ಅಳಲು ಪ್ರಾರಂಭಿಸಿದರು. ಆದರೆ, ಆಕಾಂಕ್ಷಾ ತನ್ನ ಕಣ್ಣೀರಿಗೆ ಯಾವುದೇ ಕಾರಣ ನೀಡಲಿಲ್ಲ. 

ಈ ವಿಡಿಯೋದಲ್ಲಿ ಆಕಾಂಕ್ಷಾ ದುಃಖದಿಂದ ಕಾಣುತ್ತಿದ್ದಳು. ಈ ಸಂದರ್ಭದಲ್ಲಿ, ಅವರ ಅಭಿಮಾನಿಗಳು ಮತ್ತು ಅನುಯಾಯಿಗಳು ಪ್ರಶ್ನೆಗಳನ್ನು ಕೇಳುತ್ತಿದ್ದರು ಮತ್ತು ಅಳಲು ಕಾರಣವನ್ನು ಹುಡುಕಲು ಪ್ರಯತ್ನಿಸಿದರು, ಆದರೆ ಆಕಾಂಕ್ಷಾ ಉತ್ತರಿಸುವ ಬದಲು ಜೋರಾಗಿ ಅಳಲು ಪ್ರಾರಂಭಿಸಿದರು. 

ಇದನ್ನೂ ಓದಿ : Akanksha Dubey : ನಟಿಯ ಆತ್ಮಹತ್ಯೆಯ ಹಿಂದಿನ ರಾತ್ರಿ ಆ 17 ನಿಮಿಷದಲ್ಲಿ ಏನಾಯ್ತು! ಹೋಟೆಲ್‌ಗೆ ಬಂದ ಹುಡುಗ ಯಾರು?

ಆಕಾಂಕ್ಷಾ ದುಬೆ ಅಳುತ್ತಿರುವ ವಿಡಿಯೋವನ್ನು ಅಭಿಮಾನಿಗಳು ರೆಕಾರ್ಡ್ ಮಾಡಿಕೊಂಡಿದ್ದು, ಕೆಲವು ಸೆಕೆಂಡುಗಳ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆಕಾಂಕ್ಷಾ ಆತ್ಮಹತ್ಯೆಗೆ ಕಾರಣ ಯಾರಿಗೂ ತಿಳಿದಿಲ್ಲ. ಇದೀಗ ಆತ್ಮಹತ್ಯೆಯ ಹಿಂದಿನ ರಾತ್ರಿ ಆಕಾಂಕ್ಷಾ ಅವರನ್ನು ಹೋಟೆಲ್‌ಗೆ ಡ್ರಾಪ್ ಮಾಡಲು ಬಂದಿದ್ದ ಹುಡುಗನ ಮೇಲೆ ಅನುಮಾನ ಮೂಡಿದೆ. 

 

 

ಹುಡುಗ ಆಕಾಂಕ್ಷಾಗೆ ತುಂಬಾ ಹತ್ತಿರವಾಗಿದ್ದ ಎಂದು ಕೂಡ ಹೇಳಲಾಗಿದೆ. ಆಕಾಂಕ್ಷಾ ದುಬೆಯ ಆತ್ಮಹತ್ಯೆಯ ಹಿಂದಿನ ನಿಜವಾದ ಕಾರಣ ಅವನಿಗೆ ತಿಳಿದಿದೆ ಎಂದು ನಿರೀಕ್ಷಿಸಲಾಗಿದೆ. ಆತನ ಪತ್ತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಆದರೆ, ಇದುವರೆಗೂ ಆತನ ಸುಳಿವು ಮಾತ್ರ ಸಿಕ್ಕಿಲ್ಲ.

ಇದನ್ನೂ ಓದಿ : Actress Suicide: ಯಶ್ ಜೊತೆ ನಟಿಸಿದ್ದ ಖ್ಯಾತ ನಟಿ ನೇಣು ಬಿಗಿದು ಆತ್ಮಹತ್ಯೆಗೆ ಶರಣು!

ಭೋಜ್‌ಪುರಿ ನಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಆಕೆಯ ಮೃತದೇಹ ವಾರಣಾಸಿಯ ಸಾರನಾಥದ ಹೋಟೆಲ್‌ನಲ್ಲಿ ಪತ್ತೆಯಾಗಿದೆ. ಶುಕ್ರವಾರ ರಾತ್ರಿ ಶೂಟಿಂಗ್ ಮುಗಿಸಿ ಹೋಟೆಲ್ ನಲ್ಲಿಯೇ ಉಳಿದುಕೊಂಡಿದ್ದು, ಬೆಳಗ್ಗೆ ಹೋಟೆಲ್ ಕೊಠಡಿಯಲ್ಲಿ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿದೆ. 

ಬೆಳಗ್ಗೆ ಮೇಕಪ್ ಕಲಾವಿದ ಆಕಾಂಕ್ಷಾಗೆ ಕರೆ ಮಾಡಿದರೂ ಕರೆ ಸ್ವೀಕರಿಸದ ಕಾರಣ ಹೊಟೇಲ್‌ಗೆ ಆಗಮಿಸಿ, ನೋಡಿದಾಗ ಆಕಾಂಕ್ಷಾಳ ಕೊಠಡಿಗೆ ಒಳಗಿನಿಂದ ಬೀಗ ಹಾಕಲಾಗಿತ್ತು ಎಂದು ಹೇಳಲಾಗುತ್ತಿದೆ. ಇದಾದ ನಂತರ ಹೋಟೆಲ್ ಸಿಬ್ಬಂದಿ ಕೊಠಡಿಯ ಬಾಗಿಲು ತಟ್ಟಿದರೂ ಒಳಗೆ ಯಾವುದೇ ಚಲನವಲನ ಇರಲಿಲ್ಲ. ಆ ಬಳಿಕ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರ ಸಮ್ಮುಖದಲ್ಲಿ ಮಾಸ್ಟರ್ ಕೀ ಮೂಲಕ ಕೊಠಡಿಯ ಬಾಗಿಲು ತೆರೆದಾಗ ನೇಣು ಬಿಗಿದ ಸ್ಥಿತಿಯಲ್ಲಿ ಆಕಾಂಕ್ಷಾ ಶವ ಪತ್ತೆಯಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News