Drugs Case: ಬಾಲಿವುಡ್ ನಲ್ಲಿ ಡ್ರಗ್ಸ್ ಕುರಿತು ನೋವು ಹೊರಹಾಕಿದ Akshay ಕುಮಾರ್ ಹೇಳಿದ್ದೇನು?

ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಅವರು ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಚಿತ್ರರಂಗದ ಮೇಲಿನ ಡ್ರಗ್ಸ್ ಪ್ರಕರಣದ ಆರೋಪಗಳನ್ನು ಸಮರ್ಥಿಸಿಕೊಂಡ ಅವರು ಮತ್ತೆ ಜನರಲ್ಲಿ ವಿಶ್ವಾಸ ಮೂಡಿಸುವ ಭರವಸೆ ನೀಡಿದರು.

Last Updated : Oct 4, 2020, 12:53 PM IST
  • ಬಾಲಿವುಡ್ ಡ್ರಗ್ಸ್ ಪ್ರಕರಣದ ಕುರಿತು ಅಭಿಮಾನಿಗಳಿಗೆ ಸಂದೇಶ ನೀಡಿದ ಅಕ್ಷಯ್ ಕುಮಾರ್.
  • ಬಾಲಿವುಡ್ ನಲ್ಲಿ ಡ್ರಗ್ಸ್ ಇಲ್ಲ ಎಂದು ಎದೆ ಮೇಲೆ ಕೈ ಇಟ್ಟು ನಾನು ಸುಳ್ಳು ಹೇಳಲು ಸಾಧ್ಯವಿಲ್ಲ.
  • ಆದರೆ, ಬಾಲಿವುಡ್ ನಲ್ಲಿರುವ ಎಲ್ಲರನ್ನು ಒಂದೇ ಕನ್ನಡಕ ಧರಿಸಿ ನೋಡಬೇಡಿ.
  • ನ್ಯಾಯಕ್ಕಾಗಿ ಮಾಧ್ಯಮದವರು ಧ್ವನಿ ಎತ್ತುವುದು ಅವರ ಕರ್ತವ್ಯ, ಅವರು ಅದನ್ನು ಮಾಡಲೇ ಬೇಕು.
Drugs Case: ಬಾಲಿವುಡ್ ನಲ್ಲಿ ಡ್ರಗ್ಸ್ ಕುರಿತು ನೋವು ಹೊರಹಾಕಿದ Akshay ಕುಮಾರ್ ಹೇಳಿದ್ದೇನು? title=

ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ (Akshay Kumar) ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಶನಿವಾರ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಚಿತ್ರರಂಗದ ಮೇಲಿನ ಡ್ರಗ್ಸ್ ಪ್ರಕರಣದ ಆರೋಪಗಳನ್ನು ಸಮರ್ಥಿಸಿಕೊಂಡ ಅವರು ಜನರಲ್ಲಿ ವಿಶ್ವಾಸವನ್ನು ಪುನರುಜ್ಜೀವನಗೊಳಿಸುವ ಭರವಸೆ ನೀಡಿದ್ದಾರೆ. "ಇಂದು ನಾನು ನಿಮ್ಮೊಂದಿಗೆ ಭಾರವಾದ ಹೃದಯದಿಂದ ಮಾತನಾಡುತ್ತಿದ್ದೇನೆ. ಕಳೆದ ಕೆಲವು ವಾರಗಳಲ್ಲಿ ಹೇಳಲು ಹಲವು ವಿಷಯಗಳಿವೆ, ಆದರೆ ಎಲ್ಲೆಡೆ ತುಂಬಾ ನಕಾರಾತ್ಮಕತೆ ಇದೆ, ನನಗೆ ಏನು, ಎಷ್ಟು ಮತ್ತು ಯಾರೊಂದಿಗೆ ಮಾತನಾಡಬೇಕೆಂದು ಅರ್ಥವಾಗುತ್ತಿಲ್ಲ. ನೋಡಿ, ನಮ್ಮನ್ನು ಸ್ಟಾರ್ಸ್ ಗಳೆಂದು ಎಂದು ಕರೆಯಲಾಗಿದ್ದರೂ, ನೀವು ನಿಮ್ಮ ಪ್ರೀತಿಯಿಂದ ಬಾಲಿವುಡ್ ಅನ್ನು ಮಾಡಿದ್ದೀರಿ.ನಾವು ಕೇವಲ ಒಂದು ಉದ್ಯಮವಲ್ಲ, ನಾವು ಪ್ರಪಂಚದ ಮೂಲೆ ಮೂಲೆಗಳ ಮೂಲಕ ಚಲನಚಿತ್ರಗಳ ಮೂಲಕ ನಮ್ಮ ಸಂಸ್ಕೃತಿಯನ್ನು ನಮ್ಮ ಮೌಲ್ಯಗಳಿಗೆ ತಂದಿದ್ದೇವೆ. ಸಾರ್ವಜನಿಕರ ಭಾವನೆಗಳಿಗೆ ಬಂದಾಗ, ನೀವು ಏನನ್ನು ಅನುಭವಿಸುತ್ತಿರಲಿ, ಇಷ್ಟು ವರ್ಷಗಳಿಂದ ಚಲನಚಿತ್ರಗಳು ಅದನ್ನು ತೋರಿಸಲು ಪ್ರಯತ್ನಿಸಿದವು.ಇದು ಇಂಗ್ಲಿಷ್‌ನ ಕೋಪವಾಗಲಿ, ಅಥವಾ ಭ್ರಷ್ಟಾಚಾರ, ಬಡತನ, ನಿರುದ್ಯೋಗವಾಗಲಿ, ಪ್ರತಿಯೊಂದು ವಿಷಯವೂ ಸಿನೆಮಾವನ್ನು ತನ್ನದೇ ಆದಂತೆ ಮಾಡಿತು ದಾರಿ ತೋರಿಸಲು ಪ್ರಯತ್ನಿಸಿದೆ.

ಇದನ್ನು ಓದಿ-ಉಳಿದೆಲ್ಲ ಬಾಲಿವುಡ್ ನಟರು ಯಾಕೆ ಸುಮ್ಮನಿದ್ದಾರೆ? ಅಕ್ಷಯ್ ಕುಮಾರ್ ಗೆ ಶಿವಸೇನಾ ಪ್ರಶ್ನೆ

" ಇನ್ತನ ಪರಿಸ್ಥಿತಿಯಲ್ಲಿ, ಇಂದು ನಿಮ್ಮ ಭಾವನೆಯಲ್ಲಿ ಕೋಪವಿದ್ದರೆ, ಆ ಕೋಪವೂ ನಮ್ಮ ತಲೆಯ ಮೇಲೆ ಹೊತ್ತುಕೊಳ್ಳುತ್ತೇವೆ. ಸುಶಾಂತ್ ಸಿಂಗ್ ರಜಪೂತ್ ಅವರ ಹಠಾತ್ ನಿಧನದ ನಂತರ ಇಂತಹ ಅನೇಕ ವಿಷಯಗಳು ಬೆಳಕಿಗೆ ಬಂದಿವೆ. ಅವು ನಮ್ಮೆಲ್ಲರಿಗೂ ಕೂಡ ಅಷ್ಟೇ ನೋವು ನೀಡಿವೆ.  ಸಮಸ್ಯೆಗಳನ್ನು ಹಾಗೂ ನಾವು ನಮ್ಮ ಹಿನ್ನೆಲೆಯನ್ನು ಅವಲೋಕಿಸಲು ನಮ್ಮನ್ನು ಒತ್ತಾಯಿಸಿವೆ. ಇದು ನಮ್ಮ ಚಲನಚಿತ್ರೋದ್ಯಮದಲ್ಲಿನ ಅನೇಕ ನ್ಯೂನತೆಗಳನ್ನು ಗಮನಿಸಬೇಕಾದ ಅಂಶವಾಗಿದೆ. ಇಂದು ನಾರ್ಕೊಟಿಕ್ಸ್ ಹಾಗೂ ಡ್ರಗ್ಸ್ ಕುರಿತು ಎಲ್ಲೆಡೆ ಚರ್ಚೆಯಾಗುತ್ತಿದೆ. ಬಾಲಿವುಡ್ ನಲ್ಲಿ ಡ್ರಗ್ಸ್ ಇಲ್ಲ ಎಂದು  ಹೃದಯದ ಮೇಲೆ ಕೈ ಇಟ್ಟು ನಾನು ನಿಮಗೆ ಹೇಗೆ ಸುಳ್ಳು ಹೇಳಲಿ?  ಅದು ಖಂಡಿತವಾಗಿಯೂ ಇದೆ. ಪ್ರತಿಯೊಂದು ಉದ್ಯಮದಲ್ಲಿಯೂ ಮತ್ತು ಪ್ರತಿ ವೃತ್ತಿಯಲ್ಲಿಯೂ ಎಲ್ಲರೂ ಇದಕ್ಕೆ ದಾಸರಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ ಮತ್ತು ಹೀಗೆ ಆಗುವುದು ಇಲ್ಲ.

ಇದನ್ನು ಓದಿ-ಅಸ್ಸಾಂ ನೆರೆ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ Akshay Kumaar... ನೀಡಿದ ಧನಸಹಾಯ ಎಷ್ಟು ಗೊತ್ತಾ?

ನಮ್ಮ ತನಿಖಾ ತಂಡಗಳು, ಸಂಸ್ಥೆಗಳು ಹಾಗೂ ನ್ಯಾಯ ವ್ಯವಸ್ತೆಗಳು ಇದರ ತನಿಖೆ ನಡೆಸುತ್ತಿವೆ. ಯಾವುದೇ ಕ್ರಮ ಕೈಗೊಂಡರು ಅದು ಸರಿಯಾಗಿರಲಿದೆ. ಚಿತ್ರೋದ್ಯೋಮದ ಪ್ರತಿಯೊಬ್ಬ ವ್ಯಕ್ತಿ ಅವರಿಗೆ ಸಹಕರಿಸಲಿದ್ದಾರೆ ಎಂಬ ದೃಢವಾದ ವಿಶ್ವಾಸ ನನ್ನಲ್ಲಿದೆ. ಆದರೆ ಇಡೀ ಚಿತ್ರ ಜಗತ್ತನ್ನು ಒಂದೇ ಕನ್ನಡಕ ಧರಿಸಿ ನೋಡಬೇಡಿ ಎಂದು ನಾನು ನಿಮ್ಮಲ್ಲಿ ಬೇಡಿಕೊಳ್ಳುತ್ತೆನೆ. ಇದು ಸರಿ ಅಲ್ಲ ಮತ್ತು ತಪ್ಪು.

ಇದನ್ನು ಓದಿ-ಪ್ರಧಾನಮಂತ್ರಿ ಪರಿಹಾರ ನಿಧಿಗೆ 25 ಕೋಟಿ ರೂ. ನೀಡುವುದಾಗಿ ಘೋಷಿಸಿದ ನಟ ಅಕ್ಷಯ್ ಕುಮಾರ್

ವೈಯಕ್ತಿಕವಾಗಿ ಹೇಳುವುದಾದರೆ ಮಾಧ್ಯಮದ ಶಕ್ತಿಯ ಮೇಲೆ ನನಗೆ ತುಂಬಾ ನಂಬಿಕೆ ಇದೆ. ಒಂದು ವೇಳೆ ಸರಿಯಾದ ಸಮಯದಲ್ಲಿ ಸರಿಯಾದ ಸಂಗತಿಗಳನ್ನು ಮಾಧ್ಯಮದವರು ಎತ್ತಿ ತೋರಿಸದೆ ಹೋದಲ್ಲಿ ಹಲವು ಜನರಿಗೆ ಧ್ವನಿ ಕೂಡ ಬರುವುದಿಲ್ಲ ಹಾಗೂ ನ್ಯಾಯ ಕೂಡ ಸಿಗುವುದಿಲ್ಲ. ಮಾಧ್ಯಮದವರು ಪ್ರಶ್ನೆ ಕೇಳಲೇಬೇಕು ಎಂದು ನಾನು ಅವರಿಗೆ ವಿನಂತಿಸುತ್ತೇನೆ. ಆದರೆ, ನೀವು ಎತ್ತುವ ಧ್ವನಿಯಲ್ಲಿ ಸೂಕ್ಷ್ಮತೆ ಇರಲಿ. ಏಕೆಂದರೆ, ಒಂದು ನಕಾರಾತ್ಮಕ ಸುದ್ದಿ ಯಾವುದೇ ಓರ್ವ ವ್ಯಕ್ತಿಯ ವರ್ಷಾನು-ವರ್ಷಗಳ ಆ ವ್ಯಕ್ತಿ ಗಳಿಸಿರುವ ಮಾನ ಹಾಗೂ ಕೆಲಸ, ಕಷ್ಟವನ್ನು ಹಾಳುಮಾಡುತ್ತವೆ.

ಇದನ್ನು ಓದಿ- ಹಿಂಸಾಚಾರ ಮಾಡುವವರಿಗೆ ತಿರುಗೇಟು ನೀಡಿದ AKSHAY KUMAR

ತನ್ನ ಕೊನೆಯ ಸಂದೇಶದಲ್ಲಿ ಮಾತನಾಡಿರುವ ಅಕ್ಷಯ್, "ಗೆಳೆಯರೇ ಇಂದು ನಾವು ಯಾವುದೇ ಸ್ಥಾನದಲ್ಲಿದ್ದರು ಕೂಡ ಅದು ಕೇವಲ ನಿಮ್ಮಿಂದ ಮಾತ್ರ. ನಿಮ್ಮ ವಿಶ್ವಾಸ ಹೋಗಲು ನಾವು ಬಿಡುವುದಿಲ್ಲ. ಒಂದು ವೇಳೆ ನಮ್ಮಿಂದ ನಿಮಗೆ ಅಸಮಾಧಾನ ಉಂಟಾಗಿದ್ದರೆ, ನಾವು ಮತ್ತಷ್ಟು ಶ್ರಮ ಪಡುತ್ತೇವೆ. ನಿಮ್ಮ ಪ್ರೀತಿ ಮತ್ತು ವಿಶ್ವಾಸ ಮತ್ತೆ ಗೆಲ್ಲುವೆವು. ನೀವು ಜೊತೆಗಿದ್ದರೆ ಮಾರ ನಾವು ಇರಲಿದ್ದೇವೆ. ಪ್ಲೀಸ್ ನಮ್ಮ ಕೈಬಿಡಬೇಡಿ" ಎಂದು ಹೇಳಿದ್ದಾರೆ.

Trending News