ʼಹೌಸ್ ಪುಲ್ 5ʼ ಮೂಲಕ ತೆರೆಗೆ ಬರಲು ರೆಡಿಯಾದ ಅಕ್ಷಯ್ ಕುಮಾರ್ ..! ರಿಲೀಸ್‌ ಡೇಟ್‌ ಫಿಕ್ಸ್‌

Akshay kumar housefull 5 : ಹೌಸ್‌ ಫುಲ್‌ ಸರಣಿಗಳು ಸಖತ್‌ ಹಿಟ್‌ ಆಗಿವೆ. ಸದ್ಯ ಹೌಸ್‌ಫುಲ್‌ 5 ತೆರೆಗೆ ಬರಲಿದ್ದು, ಈ ಸಿನಿಮಾವನ್ನು ತರುಣ್ ಮನ್ಸುಖಾನಿ ನಿರ್ದೇಶಿಸಲಿದ್ದಾರೆ. ಹೌಸ್‌ಫುಲ್ 5 2024 ದೀಪಾವಳಿ ಹಬ್ಬದಂದು ತೆರೆಗೆ ಬರಲಿದೆ. 

Written by - Krishna N K | Last Updated : Jun 30, 2023, 06:24 PM IST
  • ನಟ ಅಕ್ಷಯ್‌ ಕುಮಾರ್‌ ಹೌಸ್‌ಫುಲ್‌ ಸಿನಿಮಾ ಸರಣಿಯ ಐದನೇ ಭಾಗವನ್ನು ಘೋಷಿಸಿದ್ದಾರೆ.
  • ಹೌಸ್‌ಫುಲ್‌ 5 ತೆರೆಗೆ ಬರಲಿದ್ದು, ಈ ಸಿನಿಮಾವನ್ನು ತರುಣ್ ಮನ್ಸುಖಾನಿ ನಿರ್ದೇಶಿಸಲಿದ್ದಾರೆ.
  • ಹೌಸ್‌ಫುಲ್ 5 ನಲ್ಲಿ ರಿತೇಶ್ ದೇಶಮುಖ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.
ʼಹೌಸ್ ಪುಲ್ 5ʼ ಮೂಲಕ ತೆರೆಗೆ ಬರಲು ರೆಡಿಯಾದ ಅಕ್ಷಯ್ ಕುಮಾರ್ ..! ರಿಲೀಸ್‌ ಡೇಟ್‌ ಫಿಕ್ಸ್‌ title=

Houseful 5 : ಸಿನಿ ರಸಿಕರನ್ನು ನಗೆಯಲ್ಲಿ ತೆಲಿಸಲು ಬಾಲಿವುಡ್‌ ನಟ ಅಕ್ಷಯ್ ಕುಮಾರ್ ಮರಳಿದ್ದಾರೆ. ಹೌಸ್‌ಫುಲ್‌ ಸಿನಿಮಾ ಸರಣಿಯ ಐದನೇ ಭಾಗವನ್ನು ಘೋಷಿಸಿದ್ದಾರೆ. ಸ್ವತಃ ಈ ಸುದ್ದಿಯನ್ನು ಅಕ್ಷಯ್ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಚಿತ್ರದ ಬಿಡುಗಡೆ ದಿನಾಂಕವನ್ನು ಸಹ ಘೋಷಿಸಿದ್ದಾರೆ.

ಹೌದು.. ಹೌಸ್‌ ಫುಲ್‌ ಸರಣಿಗಳು ಸಖತ್‌ ಹಿಟ್‌ ಆಗಿವೆ. ಸದ್ಯ ಹೌಸ್‌ಫುಲ್‌ 5 ತೆರೆಗೆ ಬರಲಿದ್ದು, ಈ ಸಿನಿಮಾವನ್ನು ತರುಣ್ ಮನ್ಸುಖಾನಿ ನಿರ್ದೇಶಿಸಲಿದ್ದಾರೆ. ಹೌಸ್‌ಫುಲ್ 5 2024ರ ದೀಪಾವಳಿ ಹಬ್ಬದಂದು ತೆರೆಗೆ ಬರಲಿದೆ. ಮೋಜು, ಮನರಂಜನೆ ಮತ್ತು ಹಾಸ್ಯದ ರೋಲರ್-ಕೋಸ್ಟರ್ ರೈಡ್‌ನ ಭರವಸೆಯೊಂದಿಗೆ ಮಿಂಚಲು ಚಿತ್ರತಂಡ ಸಿದ್ಧವಾಗಿದೆ.

ಇದನ್ನೂ ಓದಿ: ಅಮೀರ್ ಖಾನ್ ಅವರ 3 Idiots 2 ಕನ್ಫರ್ಮ್? ರಾಜು ರಸ್ತೋಗಿ ಕೊಟ್ರು ಬಿಗ್ ಅಪ್‌ಡೇಟ್!

ಅಕ್ಷಯ್ ಕುಮಾರ್ ಜೊತೆಗೆ ಹೌಸ್‌ಫುಲ್ 5 ನಲ್ಲಿ ರಿತೇಶ್ ದೇಶಮುಖ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಹಿಂದಿನ ಸಿರೀಸ್‌ನಲ್ಲಿಯೂ ಸಹ ಇಬ್ಬರು ನಟಿಸಿದ್ದರು. ಸದ್ಯ ಇನ್ಯಾವ ಕಲಾವಿದರು ಈ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬುವುದರ ಬಗ್ಗೆ ಮಾಹಿತಿ ಇಲ್ಲ.

 
 
 
 

 
 
 
 
 
 
 
 
 
 
 

A post shared by Akshay Kumar (@akshaykumar)

ಇನ್ನು ಹೌಸ್‌ಫುಲ್ 5 ರ ಘೋಷಣೆಯ ಬೆನ್ನಲ್ಲೆ ಅಕ್ಕಿ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ʼಕಾಮಿಡಿ ಕಿಂಗ್ ಈಸ್ ಬ್ಯಾಕ್ʼ ಎಂದು ಬರೆದುಕೊಂಡು ಪೊಸ್ಟರ್‌ ಶೇರ್‌ ಮಾಡುತ್ತಿದ್ದಾರೆ. ಅಲ್ಲದೆ, ಬಳಕೆದಾರರೊಬ್ಬರು ಕಾರ್ತಿಕ್ ಆರ್ಯನ್ ಅವರನ್ನು ಚಿತ್ರದಲ್ಲಿ ನಟಿಸುವಂತೆ ಒತ್ತಾಯಿಸಿದ್ದಾರೆ. ಹೀಗೆ ಚಿತ್ರ ವಿಚಿತ್ರ ಕಾಮೆಂಟ್‌ಗಳನ್ನು ನೆಟ್ಟಿಗರು ಮಾಡುತ್ತಿದ್ದಾರೆ.

ಇದನ್ನೂ ಓದಿ:  ರಾಮ್‌ಚರಣ ಮಗಳ ನಾಮಕರಣಕ್ಕೆ 24 ಕ್ಯಾರೆಟ್‌ ಬಂಗಾರದ ತೊಟ್ಟಿಲು ಗಿಪ್ಟ್‌ ನೀಡಿದ ಅಂಬಾನಿ..!

ಮೊದಲ ಹೌಸ್‌ಫುಲ್ ಚಲನಚಿತ್ರವು 2010 ರಲ್ಲಿ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್, ಅರ್ಜುನ್ ರಾಂಪಾಲ್ ಮತ್ತು ಚಂಕಿ ಪಾಂಡೆ ನಟಿಸಿದ್ದರು. 2012 ರಲ್ಲಿ ಫ್ರಾಂಚೈಸಿಯ ಎರಡನೇ ಭಾಗ ರಿಲೀಸ್‌ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು. ಉಳಿದ ಎರಡು ಹೌಸ್‌ಫುಲ್ ಚಲನಚಿತ್ರಗಳು ಕ್ರಮವಾಗಿ 2016 ಮತ್ತು 2019 ರಲ್ಲಿ ಬಿಡುಗಡೆಯಾದವು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News