ಆಲಿಯಾ ಭಟ್ ಜೊತೆ ಅಂಬಾನಿ 300 ಕೋಟಿ ರೂ. ಡೀಲ್ ..! ಏಕೆ ಗೊತ್ತಾ..?

Alia Bhatt Ed-a-Mamma : ಬಾಲಿವುಡ್‌ ನಟಿ ಆಲಿಯಾ ಭಟ್ ಚಿಕ್ಕ ಮಕ್ಕಳಿಗಾಗಿ ಬಟ್ಟೆ ಬ್ರಾಂಡ್ ಕಂಪನಿಯನ್ನು ಆರಂಭಿಸಿರುವುದು ಗೊತ್ತೇ ಇದೆ. ಇದೀಗ ಕಂಪನಿಯನ್ನು ಖರೀದಿಸಲು ರಿಲಯನ್ಸ್ ಮುಖ್ಯಸ್ಥ ಮುಕೇಶ್‌ ಅಂಬಾನಿ ಆಲಿಯಾ ಭಟ್ ಜೊತೆ ಭಾರಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಸುದ್ದಿಯಾಗಿದೆ.

Written by - Krishna N K | Last Updated : Jul 19, 2023, 06:10 PM IST
  • ಆಲಿಯಾ ಬ್ರ್ಯಾಂಡ್ 'ಎಡ್-ಎ-ಮಮ್ಮಾ' ಎಂಬ ಬಟ್ಟೆಯನ್ನು ಆರಂಭಿಸಿದ್ದು, ಪ್ರಸ್ತುತ ಯಶಸ್ವಿಯಾಗಿ ನಡೆಸುತ್ತಿದೆ.
  • ಆಲಿಯಾ ಭಟ್ ಅವರ ಬಟ್ಟೆ ಕಂಪನಿಯನ್ನು ರಿಲಯನ್ಸ್ ಮುಖ್ಯಸ್ಥ ಅಂಬಾನಿ ಖರೀದಿಸಲಿದ್ದಾರೆ ಎಂಬ ವರದಿ ಕೇಳಿ ಬಂದಿದೆ.
  • ಆಲಿಯಾ ಭಟ್ ಜೊತೆ ಅಂಬಾನಿ ಭಾರೀ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಆಲಿಯಾ ಭಟ್ ಜೊತೆ ಅಂಬಾನಿ 300 ಕೋಟಿ ರೂ. ಡೀಲ್ ..! ಏಕೆ ಗೊತ್ತಾ..? title=

Mukesh ambani buys Ed-a-Mamma : ಬಾಲಿವುಡ್ ಸ್ಟಾರ್ ಹೀರೋಯಿನ್ ಆಲಿಯಾ ಭಟ್ ಸದ್ಯ ಸತತ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ವರ್ಷ ಅವರು 'RRR' ಮತ್ತು 'ಬ್ರಹ್ಮಾಸ್ತ್ರ'ದೊಂದಿಗೆ ಬ್ಯಾಕ್ ಟು ಬ್ಯಾಕ್ ಹಿಟ್‌ಗಳಲ್ಲಿ ನಟಿಸಿದ್ದರು. ಇನ್ನು ಆಲಿಯಾ ಬ್ರ್ಯಾಂಡ್ 'ಎಡ್-ಎ-ಮಮ್ಮಾ' ಎಂಬ ಬಟ್ಟೆಯನ್ನು ಆರಂಭಿಸಿದ್ದು, ಪ್ರಸ್ತುತ ಯಶಸ್ವಿಯಾಗಿ ನಡೆಸುತ್ತಿದೆ.

ಈ ಮಧ್ಯ ಆಲಿಯಾ ಭಟ್ ಅವರ ಬಟ್ಟೆ ಕಂಪನಿಯನ್ನು ರಿಲಯನ್ಸ್ ಮುಖ್ಯಸ್ಥ ಅಂಬಾನಿ ಖರೀದಿಸಲಿದ್ದಾರೆ ಎಂಬ ವರದಿ ಕೇಳಿ ಬಂದಿದೆ. ಅದಕ್ಕಾಗಿ ಆಲಿಯಾ ಭಟ್ ಜೊತೆ ಅಂಬಾನಿ ಭಾರೀ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಅನೇಕ ವ್ಯವಹಾರಗಳೊಂದಿಗೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ. ಇದೀಗ ತಮ್ಮ ವ್ಯಾಪಾರ ವಿಸ್ತರಣೆಯ ಭಾಗವಾಗಿ ಆಲಿಯಾ ಭಟ್ ಬಟ್ಟೆ ಬ್ರಾಂಡ್ ಕಂಪನಿಯನ್ನು ಖರೀದಿಸುವ ಚಿಂತನೆಯಲ್ಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಪಬ್ಲಿಕ್‌ ನಲ್ಲಿ ಜಾನ್ವಿಯ ಕಿವಿ ಕಚ್ಚಿದ ನಟ ; ಇವೆಲ್ಲಾ ಬೆಡ್‌ರೂಮ್ ನಲ್ಲಿ ಇರ್ಲಿ ಎಂದ ನೆಟ್ಟಿಗರು

ಅಂಬಾನಿ ತಮ್ಮ ಮಗಳ ವ್ಯಾಪಾರದ ವಿಸ್ತರಣೆಗಾಗಿ ಆಲಿಯಾ ಭಟ್ ಅವರೊಂದಿಗೆ ಭಾರಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ. ರಿಲಯನ್ಸ್ ಬ್ರ್ಯಾಂಡ್ ಆಲಿಯಾ ಭಟ್ ಅವರ ಮಕ್ಕಳ ವೇರ್ ಬ್ರಾಂಡ್ 'ಎಡ್-ಎ-ಮಮ್ಮಾ' ಕಂಪನಿಯನ್ನು ಖರೀದಿಸಲು ಸಿದ್ಧವಾಗಿದೆಯಂತೆ. ಸುಮಾರು ರೂ.300 ಕೋಟಿಗೆ ಖರೀದಿಸಲಿದೆ ಎಂದು ವರದಿಗಳಿವೆ. ಪ್ರಸ್ತುತ, ಈ ವ್ಯವಹಾರ ಒಪ್ಪಂದದ ಬಗ್ಗೆ ಚರ್ಚೆ ಅಂತಿಮ ಹಂತದಲ್ಲಿದ್ದು, ಮುಂದಿನ ವಾರದಲ್ಲಿ ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ ಎಂದು  ಹೇಳಲಾಗುತ್ತಿದೆ..

ಆಲಿಯಾ ಭಟ್ 2020 ರಲ್ಲಿ ಚಿಕ್ಕ ಮಕ್ಕಳಿಗಾಗಿ 'ಎಡ್-ಎ-ಮಮ್ಮಾ' ಎಂಬ ಬಟ್ಟೆ ಬ್ರಾಂಡ್ ಕಂಪನಿಯನ್ನು ಪ್ರಾರಂಭಿಸಿದರು. ಇದು 2 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಎಲ್ಲಾ ರೀತಿಯ ಬಟ್ಟೆಗಳನ್ನು ಹೊಂದಿದೆ. ಇತ್ತೀಚೆಗಷ್ಟೇ ಆಲಿಯಾ ತಮ್ಮ ಕಂಪನಿ ಯಶಸ್ವಿಯಾಗಿ ನಡೆಯುತ್ತಿದ್ದು, ವಿಸ್ತರಿಸಲು ಬಯಸುವುದಾಗಿ ಹೇಳಿದ್ದರು. ಈ ಮಧ್ಯ ರಿಲಯನ್ಸ್ ಆಲಿಯಾ ಭಟ್ ಅವರ ಬಟ್ಟೆ ಕಂಪನಿಯನ್ನು ಖರೀದಿಸಲು ಸಿದ್ಧವಾಗಿದೆ ಎಂಬ ಸುದ್ದಿ ಗಮನಾರ್ಹವಾಗಿದೆ.

ಇದನ್ನೂ ಓದಿ: ಪ್ರಾಜೆಕ್ಟ್‌ K ಪ್ರಭಾಸ್‌ ಫಸ್ಟ್‌ ಲುಕ್‌ ವೈರಲ್..‌ ಮಾರ್ವೆಲ್ ಹೀರೋ ಎಂದ ಫ್ಯಾನ್ಸ್!

ಸದ್ಯ ಆಲಿಯಾ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಕಪೂರ್ ಅವರೊಂದಿಗೆ 'ರಾಖಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್‌ನ ಟಾಪ್ ನಿರ್ಮಾಪಕ ಕರಣ್ ಜೋಹರ್ ನಿರ್ಮಿಸಿರುವ ಈ ಚಿತ್ರ ಜುಲೈ 27 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News