ʼಸೋರುತಿಹುದು ಮನಿಯ ಮಾಳಿಗೆʼ ಎನ್ನುತ್ತಾ ಹವಾ ಸೃಷ್ಟಿಸೋಕೆ ಬಂದ್ರು ALL OK

ಇಂದಿನ ಜಗತ್ತು ಅಜ್ಞಾನದಿಂದ ಮಾಡುವ ತಪ್ಪುಗಳು, ಅವುಗಳಿಂದ ನಡೆಯುವ ಅನಾಹುತಗಳನ್ನು ಆಲ್‌ ಒಕೆ ತಮ್ಮ ಒಂದೇ ಹಾಡಿನಲ್ಲಿ ತೋರಿಸಿಕೊಟ್ಟಿದ್ದಾರೆ. 

Written by - Bhavishya Shetty | Last Updated : Jun 16, 2022, 03:59 PM IST
  • ಕನ್ನಡದ ಖ್ಯಾತ ರ‍್ಯಾಪ್‌ ಸಿಂಗರ್‌ ALL OK ಅಲಿಯಾಸ್ ಅಲೋಕ್ ಹಾಡು ರಿಲೀಸ್‌
  • ಸಖತ್‌ ಸೌಂಡ್‌ ಮಾಡ್ತಿದೆ ಅಲೋಕ್‌ ಸಾಂಗ್‌
  • ಸೋರುತಿಹುದು ಮನಿಯ ಮಾಳಿಗೆ ಹಾಡು ಸಖತ್‌ ವೈರಲ್‌
ʼಸೋರುತಿಹುದು ಮನಿಯ ಮಾಳಿಗೆʼ ಎನ್ನುತ್ತಾ ಹವಾ ಸೃಷ್ಟಿಸೋಕೆ ಬಂದ್ರು ALL OK title=
Soruthihudu Maniya Malige

ಪ್ರಸ್ತುತ ಜಗತ್ತಿಗೆ ಸೂಕ್ತ ಎನಿಸುವಂತೆ ಹಾಡುಗಳನ್ನು ಬರೆದು, ಹಾಡುವ ಕನ್ನಡದ ಖ್ಯಾತ ರ‍್ಯಾಪ್‌ ಸಿಂಗರ್‌ ALL OK ಅಲಿಯಾಸ್ ಅಲೋಕ್ ಮತ್ತೆ ಸುದ್ದಿಯಾಗಿದ್ದಾರೆ. ಇದೀಗ ಸದ್ದಿಲ್ಲದೆ ಮತ್ತೊಂದು ವಿಡಿಯೋ ಸಾಂಗ್ ಹೊರತಂದಿದ್ದು, ಸಖತ್‌ ಸೌಂಡ್‌ ಮಾಡ್ತಿದೆ. ಈ ಹಾಡಿನ ಹೆಸರು ʼಸೋರುತಿಹುದು ಮನಿಯ ಮಾಳಿಗೆʼ. ಈ ಹಾಡಿನಲ್ಲಿ ಕರುನಾಡ ಖ್ಯಾತ ಗಾಯಕರಾದ ಸಿ.ಅಶ್ವತ್ಥ್‌, ರಘು ದೀಕ್ಷಿತ್‌ ಅವರ ಚಿತ್ರವಿರುವ ಸಣ್ಣ ತುಣುಕುಗಳನ್ನು ಅಳವಡಿಸಿಕೊಳ್ಳಲಾಗಿದೆ. 

ಇದನ್ನು ಓದಿ: ಈ ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಬಂಪರ್‌ ಕೊಡುಗೆ: 2 ತಿಂಗಳಲ್ಲಿ ಮನೆ ಸೇರಿಲಿದೆ ಗಿಫ್ಟ್‌

ಹಾಡಿನಲ್ಲಿ ಅಜ್ಞಾನದಿಂದ ಮನೆಯ ಮಾಳಿಗೆ ಸೋರುತಿದೆ ಎಂಬ ಸಾಲನ್ನು ಬರೆಯಲಾಗಿದೆ. ಇದು ಪ್ರಸ್ತುತ ಜಗತ್ತಿನ ಪರಿಸ್ಥಿತಿ ಹೋಲುವಂತಿದೆ ಎನ್ನಬಹುದು. ಪರಿಸರ ಸಂರಕ್ಷಣೆ, ವಿಜ್ಞಾನ, ಅಜ್ಞಾನ ಹೀಗೆ ಅನೇಕ ಸಂಗತಿಗಳನ್ನು ಒಂದೇ ಹಾಡಿನಲ್ಲಿ ಅಡಕಗೊಳ್ಳುವಂತೆ ಅಲೋಕ್‌ ನಿರ್ಮಾಣ ಮಾಡಿದ್ದು, ಅವರ ಪ್ರತಿಭೆಯನ್ನು ಪ್ರದರ್ಶಿಸುತ್ತಿದೆ. 

ಇಂದಿನ ಜಗತ್ತು ಅಜ್ಞಾನದಿಂದ ಮಾಡುವ ತಪ್ಪುಗಳು, ಅವುಗಳಿಂದ ನಡೆಯುವ ಅನಾಹುತಗಳನ್ನು ಆಲ್‌ ಒಕೆ ತಮ್ಮ ಒಂದೇ ಹಾಡಿನಲ್ಲಿ ತೋರಿಸಿಕೊಟ್ಟಿದ್ದಾರೆ. 

ಇದನ್ನು ಓದಿ: ಹುಡುಗಿಯರು ಒಬ್ಬರೇ ಇರುವಾಗ Googleನಲ್ಲಿ ಅತಿ ಹೆಚ್ಚು ಸರ್ಚ್ ಮಾಡುವ ವಿಷಯಗಳಿವು ..!

ಒಟ್ಟಾರೆಯಾಗಿ ಸೋರುತಿಹುದು ಮಾನಿಯ ಮಾಳಿಗಿ ಹಾಡು ಸಖತ್‌ ವೈರಲ್‌ ಆಗುತ್ತಿದ್ದು, ಇದರ ಮೂಲ ಶಿಶುನಾಳ ಷರೀಫರ ಗೀತೆಯಾಗಿದೆ. ಹಾಡಿನ ಸಂಗೀತ ಸಂಯೋಜನೆ, ರಾಪ್ ಸಾಹಿತ್ಯ ಮತ್ತು ನಿರ್ಮಾಣದ ಹೊಣೆಯನ್ನು ಅಲೋಕ್‌ ಹೊತ್ತಿದ್ದಾರೆ. ಜೊತೆಗೆ  ರಾಜರಾಮ್ ರಾಜೇಂದ್ರನ್,  ಗಗನ್ ಬಡೇರಿಯಾ, ಜ್ಯೋಲ್ಸ್ನಾ ಪಣಿಕ್ಕರ್, ಅನಿಕೇತ್ ಮೊಹಾಂತಿ, ಸಂದೀಪ್ ರಾಯ್, ಹರಿಣಿ ರಾಮಕೃಷ್ಣ ಸೇರಿದಂತೆ ಅನೇಕರ ಕೈಚಳಕ ಈ ಹಾಡಿಗಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News