Amitabh Bachchan : ದೆಹಲಿ ಮನೆ ಮಾರಾಟ ಮಾಡಿದ ನಟ ಅಮಿತಾಬ್ ಬಚ್ಚನ್! ಎಷ್ಟು ಕೋಟಿಗೆ?

ಇತ್ತೀಚೆಗೆ ದೆಹಲಿಯ ಗುಲ್ಮೊಹರ್ ಪಾರ್ಕ್‌ನಲ್ಲಿರುವ ತಮ್ಮ ಮನೆಯನ್ನು ಮಾರಾಟ ಮಾಡಿದ್ದಾರೆ. ಅದಕ್ಕೆ ಸೋಪಾನ್ ಎಂದು ಹೆಸರಿತ್ತಿದ್ದರು. 23 ಕೋಟಿ ರೂಪಾಯಿಗೆ ಮನೆ ಮಾರಾಟ ಮಾಡಲಾಗಿದೆ ಎಂದು ವರದಿಯಾಗಿದೆ.

Written by - Channabasava A Kashinakunti | Last Updated : Feb 3, 2022, 01:01 PM IST
  • ಮುಂಬೈನಲ್ಲಿ ಅನೇಕ ಬೆಲೆಬಾಳುವ ಆಸ್ತಿಗಳನ್ನು ಹೊಂದಿದ್ದಾರೆ ಮಿತಾಬ್ ಬಚ್ಚನ್
  • ಇತ್ತೀಚೆಗೆ ದೆಹಲಿಯ ಗುಲ್ಮೊಹರ್ ಪಾರ್ಕ್‌ನಲ್ಲಿರುವ ತಮ್ಮ ಮನೆ ಮಾರಾಟ
  • 23 ಕೋಟಿ ರೂಪಾಯಿಗೆ ಮನೆ ಮಾರಾಟ ಮಾಡಲಾಗಿದೆ
Amitabh Bachchan : ದೆಹಲಿ ಮನೆ ಮಾರಾಟ ಮಾಡಿದ ನಟ ಅಮಿತಾಬ್ ಬಚ್ಚನ್! ಎಷ್ಟು ಕೋಟಿಗೆ? title=

ನವದೆಹಲಿ : ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರು ಮುಂಬೈನಲ್ಲಿ ಅನೇಕ ಬೆಲೆಬಾಳುವ ಆಸ್ತಿಗಳನ್ನು ಹೊಂದಿದ್ದಾರೆ. ಆದರೆ, ಇತ್ತೀಚೆಗೆ ದೆಹಲಿಯ ಗುಲ್ಮೊಹರ್ ಪಾರ್ಕ್‌ನಲ್ಲಿರುವ ತಮ್ಮ ಮನೆಯನ್ನು ಮಾರಾಟ ಮಾಡಿದ್ದಾರೆ. ಅದಕ್ಕೆ ಸೋಪಾನ್ ಎಂದು ಹೆಸರಿತ್ತಿದ್ದರು. 23 ಕೋಟಿ ರೂಪಾಯಿಗೆ ಮನೆ ಮಾರಾಟ ಮಾಡಲಾಗಿದೆ ಎಂದು ವರದಿಯಾಗಿದೆ.

ಎಕನಾಮಿಕ್ ಟೈಮ್ಸ್ ಡಾಟ್ ಕಾಮ್ ವರದಿಯ ಪ್ರಕಾರ, ಬಿಗ್ ಬಿ(Amitabh Bachchan) ಅವರ ಕುಟುಂಬದ ನಿವಾಸ ಸೋಪಾನ್ ಅನ್ನು ನೆಜೋನ್ ಗ್ರೂಪ್ ಆಫ್ ಕಂಪನಿ ಸಿಇಒ ಅವ್ನಿ ಬೇಡರ್ ಖರೀದಿಸಿದ್ದಾರೆ. ವರದಿಯ ಪ್ರಕಾರ, ಅವರು ಬಚ್ಚನ್ ಕುಟುಂಬಕ್ಕೆ ತುಂಬಾ ವರ್ಷಗಳಿಂದ ಪರಿಚಯಿಸ್ಥರಾಗಿದ್ದರೆ.

ಇದನ್ನೂ ಓದಿ : U Turn 2: ಕನ್ನಡದಲ್ಲಿ ಮತ್ತೊಂದು ಹಾರರ್‌ ಸಿನಿಮಾ..! ರಿಲೀಸ್‌ಗೆ ರೆಡಿಯಾಯ್ತು 'ಯು-ಟರ್ನ್‌ 2'!

ಈ ಕುರಿತು  ET.com ಗೆ ಮಾಹಿತಿ ನೀಡಿರುವ ಅವ್ನಿ ಬೇಡರ್, "ಇದು ಹಳೆಯ ಕಾಲದಲ್ಲಿ ನಿರ್ಮಾಣ ಮಾಡಿದ ಮನೆ ಇದಾಗಿದೆ. ಆದ್ದರಿಂದ ನಾವು ಮನೆಯ ಒಳ ವಿನ್ಯಾಸವನ್ನ ನಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ನಿರ್ಮಿಸಿಕೊಳ್ಳುತ್ತೇವೆ. ನಾವು ಹಲವು ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದೇವೆ ಮತ್ತು ಹೆಚ್ಚುವರಿ ಆಸ್ತಿಗಾಗಿ ಹುಡುಕುತ್ತಿದ್ದೇವೆ. ಈ ಮನೆ ಮಾರಾಟದ ಆಫರ್ ಬಂದಾಗ, ನಾವು ತಕ್ಷಣ ಒಪ್ಪಿಕೊಳ್ಳಬೇಕಾಯಿತು. ಸಧ್ಯ ಈ ಆಸ್ತಿಯನ್ನು ನಿವು ಪಡೆದುಕೊಂಡಿದ್ದೇವೆ, ”ಎಂದು ತಿಳಿಸಿದ್ದಾರೆ.

ಅಮಿತಾಭ್ ಬಚ್ಚನ್ ಅವರ ತಂದೆ ಮತ್ತು ಪ್ರಸಿದ್ಧ ಕವಿ ಹರಿವಂಶಿ ರಾಯ್ ಬಚ್ಚನ್(Harivanshi Rai Bachchan) ಮತ್ತು ತಾಯಿ ದಿವಂಗತ ತೇಜಿ ಬಚ್ಚನ್ ಸೋಪಾನ್‌ನಲ್ಲಿ ವಾಸಿಸುತ್ತಿದ್ದರು.

ET.com ವರದಿಯ ಪ್ರಕಾರ, 418.05 ಚದರ-ಮೀಟರ್ ಆಸ್ತಿಯ ನೋಂದಣಿಯನ್ನು ಡಿಸೆಂಬರ್ 7 ರಂದು ಪೂರ್ಣಗೊಳಿಸಿದ ಡೇಟಾವನ್ನು Zapkey ಗೆ ಒಪ್ಪಿಸಿದೆ.

ಇದನ್ನೂ ಓದಿ : Puneet Rajkumar : ಅಪ್ಪು ಜೊತೆ ನಟಿಸಬೇಕಿತ್ತು ಐಶ್ವರ್ಯ ರೈ! ಹಾಗಿದ್ರೆ, ಯಾವ ಸಿನಿಮಾ?

ದಿವಂಗತ ಹರಿವಂಶಿ ರಾಯ್ ಬಚ್ಚನ್ ಅವರು ಅಲ್ಲಿ ವಾಸವಾಗಿದ್ದಾಗ ಕವಿಗೋಷ್ಠಿಯನ್ನು ಆಯೋಜಿಸಿದ ಅನೇಕ ಆರಂಭಿಕ ನೆನಪುಗಳನ್ನು ಈ ಮನೆ ಹೊಂದಿದೆ. ಅಲ್ಲದೆ, ಎರಡು ಅಂತಸ್ತಿನ ಸೋಪಾನ್(Sopaan) ಅನ್ನು ತೇಜಿ ಬಚ್ಚನ್ ಹೆಸರಿನಲ್ಲಿ ನೋಂದಾಯಿಸಲಾಗಿದೆ.

ಈ ಬಗ್ಗೆ ಅಮಿತಾಬ್ ಬಚ್ಚನ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News