U Turn 2: ಕನ್ನಡದಲ್ಲಿ ಮತ್ತೊಂದು ಹಾರರ್‌ ಸಿನಿಮಾ..! ರಿಲೀಸ್‌ಗೆ ರೆಡಿಯಾಯ್ತು 'ಯು-ಟರ್ನ್‌ 2'!

'ಯು-ಟರ್ನ್‌ 2'  ಮೂಲಕ ಕನ್ನಡ ಸಿನಿ ಪ್ರಿಯರು ಸದ್ಯದಲ್ಲೇ ಮತ್ತೊಂದು ಹಾರರ್‌ ಕಥೆ ಕಣ್ತುಂಬಿಕೊಳ್ಳಬಹುದು.‌  ಈಗಾಗಲೇ ಸದ್ದು ಮಾಡುತ್ತಿರುವ ಟೀಸರ್ ಪ್ರೇಕ್ಷಕರ ಕುತೂಹಲವನ್ನೂ ಹೆಚ್ಚಾಗುವಂತೆ ಮಾಡಿದೆ.

Edited by - Yashaswini V | Last Updated : Feb 3, 2022, 07:32 AM IST
  • ಸ್ಯಾಂಡಲ್‌ವುಡ್‌ನಲ್ಲಿ ಕೆಲ ವರ್ಷಗಳ ಹಿಂದೆ ರಿಲೀಸ್‌ ಆಗಿ ಕನ್ನಡಿಗರ ಮನ ಗೆದ್ದಿದ್ದ 'ಯು ಟರ್ನ್'
  • 'ಯು ಟರ್ನ್' ಚಿತ್ರದ ಟೈಟಲ್‌ ಈಗ ಮತ್ತೆ ಸದ್ದು ಮಾಡುತ್ತಿದೆ
  • 'ಯು-ಟರ್ನ್‌ 2' ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಆದರೆ ಇದು 'ಯು ಟರ್ನ್' ಚಿತ್ರದ ಸೀಕ್ವೆಲ್‌ ಅಲ್ಲವೇ ಅಲ್ಲ
U Turn 2: ಕನ್ನಡದಲ್ಲಿ ಮತ್ತೊಂದು ಹಾರರ್‌ ಸಿನಿಮಾ..! ರಿಲೀಸ್‌ಗೆ ರೆಡಿಯಾಯ್ತು 'ಯು-ಟರ್ನ್‌ 2'! title=
U Turn 2 (Photo Credit- Twitter@aanandaaudio)

ಬೆಂಗಳೂರು:  'ಯು ಟರ್ನ್‌' ಕನ್ನಡಿಗರ ಮನ ಗೆದ್ದಿದ್ದ ಸಿನಿಮಾ. ಇದೀಗ ಇದೇ ಟೈಟಲ್‌ ಅಡಿ ಬರ್ತಿರೋ  'ಯು-ಟರ್ನ್‌ 2' (U Turn 2) ಕನ್ನಡಿಗರಿಗೆ ಹಾರರ್‌ ಕಥೆ ಹೇಳಲು ಸಿದ್ಧವಾಗಿದೆ. ಈಗಾಗಲೇ ಚಿತ್ರದ ಟೀಸರ್‌ ರಿಲೀಸ್‌ ಆಗಿ ಸಖತ್‌ ಸದ್ದು ಮಾಡ್ತಿದೆ.

ಸ್ಯಾಂಡಲ್‌ವುಡ್‌ನಲ್ಲಿ ಕೆಲ ವರ್ಷಗಳ ಹಿಂದೆ ರಿಲೀಸ್‌ ಆಗಿ ಕನ್ನಡಿಗರ ಮನ ಗೆದ್ದಿದ್ದ 'ಯು ಟರ್ನ್' ಚಿತ್ರದ ಟೈಟಲ್‌ ಈಗ ಮತ್ತೆ ಸದ್ದು ಮಾಡುತ್ತಿದೆ. 'ಯು-ಟರ್ನ್‌ 2' ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಆದರೆ ಇದು 'ಯು ಟರ್ನ್' ಚಿತ್ರದ ಸೀಕ್ವೆಲ್‌ ಅಲ್ಲವೇ ಅಲ್ಲ. ಬದಲಾಗಿ ಹೊಸ ಕಥಾಹಂದರ ಹೊಂದಿರುವ 'ಯು-ಟರ್ನ್‌ 2' ಕನ್ನಡಿಗರಿಗೆ ಹಾರರ್‌ ಕಥೆ ಹೇಳಲಿದೆ.

ಸದ್ದು ಮಾಡುತ್ತಿದೆ ಟೀಸರ್..!
ಈ ಹಿಂದೆ 'ಯು ಟರ್ನ್' ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್, ರಾಧಿಕಾ ಚೇತನ್ ನಟಿಸಿ ಪವನ್‍ ಕುಮಾರ್ ನಿರ್ದೇಶಿಸಿದ್ದರು. ಇದೀಗ 'ಯು-ಟರ್ನ್‌ 2' (U Turn 2) ಕೂಡ ಹೊಸಬರ ತಂಡ ಕಟ್ಟಿಕೊಂಡು ಹಾರರ್‌ ಕಥೆ (Horror Movie) ಸಿದ್ಧಪಡಿಸಿದೆ. ಪೋಸ್ಟರ್‌ ಮೂಲಕ ಸದ್ದು ಮಾಡಿದ್ದ 'ಯು-ಟರ್ನ್‌ 2' ಚಿತ್ರ ರಿಲೀಸ್‌ಗೆ ರೆಡಿಯಾಗುತ್ತಿದೆ.

ಇದನ್ನೂ ಓದಿ- Radhe Shyam release date: ಈ ದಿನದಂದು ಬಿಡುಗಡೆಯಾಗಲಿದೆ ಪ್ರಭಾಸ್ ಅಭಿನಯದ 'ರಾಧೆ ಶ್ಯಾಮ್'

ಮತ್ತೊಂದು ಹಾರರ್‌ ಕಥೆ..!
'ಯು-ಟರ್ನ್‌ 2'  ಮೂಲಕ ಕನ್ನಡ ಸಿನಿ ಪ್ರಿಯರು ಸದ್ಯದಲ್ಲೇ ಮತ್ತೊಂದು ಹಾರರ್‌ ಕಥೆ ಕಣ್ತುಂಬಿಕೊಳ್ಳಬಹುದು.‌  ಈಗಾಗಲೇ ಸದ್ದು ಮಾಡುತ್ತಿರುವ ಟೀಸರ್ ಪ್ರೇಕ್ಷಕರ ಕುತೂಹಲವನ್ನೂ ಹೆಚ್ಚಾಗುವಂತೆ ಮಾಡಿದೆ.

ವಿದೇಶದಲ್ಲೂ ವಿಶ್..!
ಅಂದಹಾಗೆ 'ಯು-ಟರ್ನ್‌ 2' (U Turn 2) ಸಿನಿಮಾ ಬಿಡುಗಡೆಗೂ ಮೊಲದೇ ಸಾಕಷ್ಟು ಸದ್ದು ಮಾಡುತ್ತಿದೆ. ವಿದೇಶದಿಂದಲೂ ಚಿತ್ರಕ್ಕೆ ಶುಭಹಾರೈಕೆ ಬರುತ್ತಿದೆ. ವಿದೇಶದಲ್ಲಿ ವಾಸವಾಗಿರುವ ಕನ್ನಡಿಗರು 'ಯು-ಟರ್ನ್‌ 2'ಗೆ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ-  Puneet Rajkumar : ಅಪ್ಪು ಜೊತೆ ನಟಿಸಬೇಕಿತ್ತು ಐಶ್ವರ್ಯ ರೈ! ಹಾಗಿದ್ರೆ, ಯಾವ ಸಿನಿಮಾ?

ಹೊಸ ಪ್ರಯತ್ನ..!
'ಯು-ಟರ್ನ್‌ 2' ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಚಂದ್ರು ಓಬಯ್ಯ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಆನಂದ್ ಸಂಪಂಗಿ ಬಂಡವಾಳ ಹೂಡಿದ್ದಾರೆ. ಹಾಗೇ 'ಯು-ಟರ್ನ್‌ 2' ಚಿತ್ರದಲ್ಲಿ ಮಂಜು ಪಾವಗಡ ಸೇರಿದಂತೆ 'ತಿಥಿ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಿದ್ದ ಪೂಜಾ ಕಾವೇರಿ, ಸಂಧ್ಯಾ ಭಟ್, ಆನಂದ್, ಕರಿಸುಬ್ಬು, ಡಿಂಗ್ರಿ ನಾಗರಾಜ್‌ ಮತ್ತಿತರರ ತಾರಾಬಳಗವಿದೆ.

ಒಟ್ನಲ್ಲಿ ಬೆಳ್ಳಿ ತೆರೆ ಮೇಲೆ ಹಾರರ್‌ ಕಥೆ ಹೇಳಲು ಯು-ಟರ್ನ್‌ 2 ಚಿತ್ರತಂಡ ಸಜ್ಜಾಗಿದ್ದು, ಟೀಸರ್‌ ಮೂಲಕ ನಿರೀಕ್ಷೆಗಳನ್ನ ಮತ್ತಷ್ಟು ಹೆಚ್ಚಿಸಿದೆ. ಸದ್ಯದಲ್ಲೇ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌ ಆಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News