ಆರಕ್ಷಕನಾದ ನಟ ರಾಕ್ಷಸ : ಡಾಲಿ 25ನೇ ಚಿತ್ರ ʼಹೊಯ್ಸಳʼ ಬಿಡುಗಡೆಗೆ ಡೇಟ್‌ ಫಿಕ್ಸ್‌

ಬ್ಯಾಕ್‌ ಟು ಬ್ಯಾಕ್‌ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ ಮತ್ತು ಟಾಲಿವುಡ್‌ನಲ್ಲಿ ಸೌಂಡ್‌ ಕ್ರೀಯೆಟ್‌ ಮಾಡುತ್ತಿರುವ ನಟ ಡಾಲಿ ಧನಂಜಯ್‌ ಅವರ 25ನೇ ಸಿನಿಮಾ ʼಹೊಯ್ಸಳʼ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ.

Written by - Krishna N K | Last Updated : Sep 7, 2022, 05:41 PM IST
  • ನಟ ಡಾಲಿ ಧನಂಜಯ್‌ 25ನೇ ಸಿನಿಮಾ ʼಹೊಯ್ಸಳʼ ಬಿಡುಗಡೆಗೆ ದಿನಾಂಕ ಫಿಕ್ಸ್‌
  • ಡಾಲಿ ಖಡಕ್‌ ಪೊಲೀಸ್‌ ಅಧಿಕಾರಿಯ ಗೆಟಪ್‌ಗೆ ಫ್ಯಾನ್ಸ್‌ ಫಿದಾ
  • ಕುತೂಹಲ ಮೂಡಿಸುತ್ತಿದೆ ʼಹೊಯ್ಸಳʼ ಶೀರ್ಷಿಕೆಯ ಅಡಿಬರಹ
ಆರಕ್ಷಕನಾದ ನಟ ರಾಕ್ಷಸ : ಡಾಲಿ 25ನೇ ಚಿತ್ರ ʼಹೊಯ್ಸಳʼ ಬಿಡುಗಡೆಗೆ ಡೇಟ್‌ ಫಿಕ್ಸ್‌ title=

ಬೆಂಗಳೂರು: ಬ್ಯಾಕ್‌ ಟು ಬ್ಯಾಕ್‌ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ ಮತ್ತು ಟಾಲಿವುಡ್‌ನಲ್ಲಿ ಸೌಂಡ್‌ ಕ್ರೀಯೆಟ್‌ ಮಾಡುತ್ತಿರುವ ನಟ ಡಾಲಿ ಧನಂಜಯ್‌ ಅವರ 25ನೇ ಸಿನಿಮಾ ʼಹೊಯ್ಸಳʼ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ.

ಬೆಳಗಾವಿಯಲ್ಲಿ ಒಬ್ಬ ದಿಟ್ಟ ಪೊಲೀಸ್ ಅಧಿಕಾರಿಯ ಸುತ್ತ ನಡೆದ ಘಟನೆಯನ್ನು ಆಧರಿಸಿ ಈ ಕಥೆ ಹೆಣೆಯಲಾಗಿದ್ದು, ಸಿನಿಮಾದಲ್ಲಿ ಗುರುದೇವನಾಗಿ ನಟರಾಕ್ಷಸ ಡಾಲಿ ಮಿಂಚಿದ್ದಾರೆ. ಸಿನಿಮಾದ ಪೋಸ್ಟರ್‌ ಬಿಡುಗಡೆ ಮಾಡಿರುವ ಚಿತ್ರತಂಡ 2023ರ ಮಾರ್ಚ್‌ 30ರಂದು ಸಿನಿಮಾ ತೆರೆಗೆ ಬರಲಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ಪಾಕಿಸ್ತಾನಿ ಕ್ರಿಕೆಟಿಗನೊಂದಿಗೆ ರೊಮ್ಯಾಂಟಿಕ್ ವಿಡಿಯೋ ಹಂಚಿಕೊಂಡ ನಟಿ ಉರ್ವಶಿ ರೌಟೇಲಾ..!

ಸಿನಿಮಾದ ಪೋಸ್ಟರ್‌ನಲ್ಲಿ ಮುಖಕ್ಕೆ ಗ್ಯಾಸ್‌ ಮಾಸ್‌ ಹಾಕ್ಕೊಂಡಿರುವ ಡಾಲಿ ಖಡಕ್‌ ಪೊಲೀಸ್‌ ಅಧಿಕಾರಿಯ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟೈಟಲ್‌ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದು, ಹೊಯ್ಸಳ ಶೀರ್ಷಿಕೆ ಕಳಗೆ ʼಆರಕ್ಷಕ ರಾಕ್ಷನಾದಾಗʼ  ಎಂಬ ಅಡಿ ಬರಹ ಬರೆಯಲಾಗಿದ್ದು, ಸಿನಿಮಾದ ಮೇಲೆ ಇಂಟರೆಸ್ಟಿಂಗ್ ಹೆಚ್ಚಿಸಿದೆ.

ಕಾರ್ತಿಕ್ ಗೌಡ ಹಾಗೂ ಯೋಗಿ ಜಿ. ರಾಜ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ವಿಜಯ್ ನಾಗೇಂದ್ರ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಬಡವ ರಾಸ್ಕಲ್ ಬಳಿಕ ಧನಂಜಯ ಜೊತೆ ಮತ್ತೆ ಅಮೃತ ಅಯ್ಯಂಗಾರ್ ಡಾಲಿಗೆ ಜೋಡಿಯಾಗಿದ್ದಾರೆ. ಅಚ್ಯುತಕುಮಾರ್, ನವೀನ್ ಶಂಕರ್, ಅವಿನಾಶ್, ರಾಜೇಶ್ ನಟರಂಗ ಹಾಗೂ ನಾಗಭೂಷಣ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣ ಸಂಸ್ಥೆ ಬ್ಯಾನರ್‌ನಲ್ಲಿ ಈ ಸಿನಿಮಾ ಮೂಡಿ ಬರಲಿದೆ. 

ಸದ್ಯ ಧನಂಜಯ್‌ ಅಭಿನಯದ ‘ಮಾನ್ಸೂನ್‌ ರಾಗ’, ‘ತೋತಾಪುರಿ’, ‘ಹೆಡ್‌ಬುಷ್‌’ ಹೀಗೆ ಸಾಲು ಸಾಲು ಚಿತ್ರಗಳ ತೆರೆಗೆ ಬರಲು ಸಿದ್ಧವಾಗಿದೆ. ಈಗಾಲೇ ಪುಷ್ಪ ಸಿನಿಮಾದ ಮೂಲಕ ಟಾಲಿವುಡ್‌ನಲ್ಲಿಯೂ ಡಾಲಿ ಕಮಾಲ್‌ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News