Animal: ರಣಬೀರ್‌ ಸಿನಿಮಾದ ಆ ಸಾಂಗ್ ಬಿಟ್ ಕಂಪೋಸ್ ಮಾಡಿದ್ದು ಬಿಗ್ ಬಾಸ್ ಸ್ಪರ್ಧಿ...! ಯಾರು ಗೊತ್ತಾ..?

Sandeep Aata: ಸದ್ಯ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಸೌಂಡ್‌ ಮಾಡುತ್ತಿರುವ ಅನಿಮಲ್ ಚಿತ್ರದಲ್ಲಿನ 'ಚಿನ್ನಿ ಚಿನ್ನಿ ಆಶ್' ಸಾಂಗ್ ಬಿಟ್ ಬಿಗ್ ಬಾಸ್ ಸ್ಪರ್ಧಿಯಿಂದ ಕಂಪೋಸ್ ಮಾಡಲಾಗಿದೆ..   

Written by - Savita M B | Last Updated : Dec 6, 2023, 01:18 PM IST
  • ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಆಕ್ಷನ್ ಚಿತ್ರ 'ಅನಿಮಲ್'.
  • ಸಂದೀಪ್ ವಂಗ ಈ ಸಿನಿಮಾದಲ್ಲಿ ಪ್ರತಿ ದೃಶ್ಯವನ್ನು ತುಂಬಾ ಹೊಸದಾಗಿ ತೋರಿಸಿದ್ದಾರೆ
  • ಹಳೆಯ ಸೂಪರ್ ಹಿಟ್ ಹಾಡುಗಳನ್ನು ಅಲ್ಲೊಂದು ಇಲ್ಲೊಂದು ಬಳಸಿದ ರೀತಿ ಚಿತ್ರವನ್ನು ರೆಡಿ ಮಾಡಲಾಗಿದೆ
Animal: ರಣಬೀರ್‌ ಸಿನಿಮಾದ ಆ ಸಾಂಗ್ ಬಿಟ್ ಕಂಪೋಸ್ ಮಾಡಿದ್ದು ಬಿಗ್ ಬಾಸ್ ಸ್ಪರ್ಧಿ...! ಯಾರು ಗೊತ್ತಾ..?  title=

Animal: ಬಾಲಿವುಡ್ ಹೀರೋ ರಣಬೀರ್ ಕಪೂರ್ ಜೊತೆ ಟಾಲಿವುಡ್ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಆಕ್ಷನ್ ಚಿತ್ರ 'ಅನಿಮಲ್'. ಅನಿಲ್ ಕಪೂರ್, ಬಾಬಿ ಡಿಯೋಲ್, ರಶ್ಮಿಕಾ ಮಂದಣ್ಣ ಮತ್ತು ತೃಪ್ತಿ ಡಿಮ್ರಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರವು ನಗ್ನ ಭಾವನೆಗಳನ್ನು ತೋರಿಸುವ ಮೂಲಕ ಪ್ರೇಕ್ಷಕರನ್ನು ಥ್ರಿಲ್ ಮಾಡುತ್ತಿದೆ. 

ಸಂದೀಪ್ ವಂಗ ಈ ಸಿನಿಮಾದಲ್ಲಿ ಪ್ರತಿ ದೃಶ್ಯವನ್ನು ತುಂಬಾ ಹೊಸದಾಗಿ ತೋರಿಸಿದ್ದು.. ಹಳೆಯ ಸೂಪರ್ ಹಿಟ್ ಹಾಡುಗಳನ್ನು ಅಲ್ಲೊಂದು ಇಲ್ಲೊಂದು ಬಳಸಿದ ರೀತಿ ಚಿತ್ರವನ್ನು ರೆಡಿ ಮಾಡಲಾಗಿದೆ... ಇದರಲ್ಲಿ ಎ.ಆರ್.ರೆಹಮಾನ್ ರಚಿಸಿರುವ ‘ಚಿನ್ನಿ ಚಿನ್ನಿ ಆಶೆ’ ಹಾಡಿನ ಸಂಗೀತವನ್ನೂ ಬಳಸಿಕೊಳ್ಳಲಾಗಿದೆ. 

ಇದನ್ನೂ ಓದಿ-ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚಿತ್ರದ "ಕೃಷ್ಣಂ ಪ್ರಣಯ ಸಖಿ" ಚಿತ್ರೀಕರಣ ಮುಕ್ತಾಯ

ಈ ಸಾಂಗ್‌ಗೆ ರಣಬೀರ್ ಹೆಜ್ಜೆ ಹಾಕಿದ್ದು ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿದೆ ಎನ್ನಲಾಗುತ್ತಿದೆ.. ಆದ್ರೆ ಈ ಸಾಂಗ್ ಬಿಟ್‌ನ ಕಂಪೋಸ್‌ ಮಾಡಿದ್ದು ಬಿಗ್ ಬಾಸ್ ಸ್ಪರ್ಧಿ ಅಂತ ಗೊತ್ತಾ..? ಹೌದು ಇತ್ತೀಚೆಗಷ್ಟೇ ತೆಲುಗು ಬಿಗ್ ಬಾಸ್ 7ಕ್ಕೆ ಸ್ಪರ್ಧಿಯಾಗಿ ಎಂಟ್ರಿಕೊಟ್ಟು ಎಂಟು ವಾರಗಳ ಕಾಲ ಮನೆಯಲ್ಲೇ ಇದ್ದು ಎಲಿಮಿನೇಟ್ ಆಗಿದ್ದ ಅಟ್ಟಾ ಸಂದೀಪ್ ಮ್ಯೂಸಿಕ್ ಬಿಟ್ 'ಚಿನ್ನಿ ಚಿನ್ನಿ ಆಶ್'ಗೆ ಡ್ಯಾನ್ಸ್ ಕಂಪೋಸ್ ಮಾಡಿದ್ದಾರೆ. ಈ ವಿಷಯವನ್ನು ಸ್ವತಃ ಸಂದೀಪ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.  

ಈ ಬಗ್ಗೆ ಪೋಸ್ಟ್‌ ಶೇರ್‌ ಮಾಡಿಕೊಂಡ ಅವರು ಅವಕಾಶ ನೀಡಿದ ಸಂದೀಪ್‌ ವಂಗ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಇದನ್ನು ತಿಳಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಇದೇ ವೇಳೆ ಅನಿಮಲ್‌ ಚಿತ್ರದ ಮೇಲೆ ಹಲವು ಟೀಕೆಗಳು ಬರುತ್ತಿವೆ. ಆದರೆ ಅವು ಚಿತ್ರದ ಕಲೆಕ್ಷನ್‌ಗೆ ಯಾವುದೇ ಅಡ್ಡಿಯನ್ನುಂಟು ಮಾಡಿಲ್ಲ... 

ಇದನ್ನೂ ಓದಿ-Yash 19: ಯಶ್ ಗೆ ಈ ʻನ್ಯಾಚುರಲ್‌ ಬ್ಯೂಟಿʼನೇ ನಾಯಕಿ.. ಕನ್ನಡಕ್ಕೆ ಸಾಯಿಪಲ್ಲವಿ‌ ಗ್ರ್ಯಾಂಡ್ ಎಂಟ್ರಿ.!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News