ತೆಲುಗಿನ ಖ್ಯಾತ ಕೊರಿಯೋಗ್ರಾಫರ್‌, ಟ್ರೋಲಿಗರ ಫೇವರೆಟ್‌ ರಾಕೇಶ್‌ ಮಾಸ್ಟರ್‌ ಇನ್ನಿಲ್ಲ..!

Rakesh Master : ತೆಲುಗಿನ ಖ್ಯಾತ ಕೊರಿಯೋಗ್ರಾಫರ್‌ ಹಾಗೂ ಟ್ರೋಲಿಗರ ಫೇವರೆಟ್‌ ರಾಕೇಶ್‌ ಮಾಸ್ಟರ್‌ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಸಂಜೆ ನಿಧನರಾಗಿದ್ದಾರೆ.

Written by - Savita M B | Last Updated : Jun 19, 2023, 10:42 AM IST
  • ಯೂಟ್ಯೂಬ್‌ ಹಾಗೂ ಖಾಸಗಿ ವಾಹಿನಿಗಳಿಗೆ ವಿಚಿತ್ರ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿರುತ್ತಿದ್ದರು.
  • ಟ್ರೋಲರ್ಸ್‌ಗೆ ಸಖತ್‌ ಫೇವರೆಟ್‌ ಇವರು.
  • ಕಳೆದ ಒಂದು ವಾರದಿಂದ ರಾಕೇಶ ಮಾಸ್ಟರ್‌ ಅನಾರೋಗ್ಯದಿಂದ ಬಳಲುತ್ತಿದ್ದರು.
ತೆಲುಗಿನ ಖ್ಯಾತ ಕೊರಿಯೋಗ್ರಾಫರ್‌, ಟ್ರೋಲಿಗರ ಫೇವರೆಟ್‌ ರಾಕೇಶ್‌ ಮಾಸ್ಟರ್‌ ಇನ್ನಿಲ್ಲ..!  title=

Rakesh Master Death : ರಾಕೇಶ್‌ ಮಾಸ್ಟರ್‌ ಅವರು ಯೂಟ್ಯೂಬ್‌ ಹಾಗೂ ಖಾಸಗಿ ವಾಹಿನಿಗಳಿಗೆ ವಿಚಿತ್ರ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿರುತ್ತಿದ್ದರು. ಟ್ರೋಲರ್ಸ್‌ಗೆ ಸಖತ್‌ ಫೇವರೆಟ್‌ ಇವರು. ಕಳೆದ ಒಂದು ವಾರದಿಂದ ರಾಕೇಶ ಮಾಸ್ಟರ್‌ ಅನಾರೋಗ್ಯದಿಂದ ಬಳಲುತ್ತಿದ್ದರು. ಇತ್ತೀಚೆಗೆ ಶೂಟಿಂಗ್‌ಗಾಗಿ ಅವರು ವಿಶಾಖಪಟ್ಟಣದಿಂದ ಹೈದರಾಬಾದ್‌ ಗೆ ತೆರಳಿದ್ದರು. 

ಶೂಟಿಂಗ್‌ ಮುಗಿಸಿ ಬರುತ್ತಿದ್ದಂತೆ ಇವರಿಗೆ ಆರೋಗ್ಯ ಸಮಸ್ಯೆ ಹೆಚ್ಚಾಗಿದ್ದು, ಚಿಕಿತ್ಸೆಗಾಗಿ ಸಿಕಂದ್ರಾಬಾದ್‌ನ ಗಾಂಧಿ ಆಸ್ಪತ್ರಗೆ ದಾಖಲಾಗಿದ್ದರು. ಇವರಿಗೆ ಸನ್‌ಸ್ಟ್ರೋಕ್‌ ಆಗಿತ್ತು ಇದರಿಂದ ಅವರು ಇನ್ನೂ ಹೆಚ್ಚು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾದೇ ಅವರು ಭಾನುವಾರ ಸಂಜೆ ಹೈದರಾಬಾದ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ. 

ಇದನ್ನೂ ಓದಿ-ಹಿರಿಯ ನಿರ್ದೇಶಕ ಜಿ.ಕೆ.ಮುದ್ದುರಾಜ್ ನಿರ್ದೇಶನದ "ಎಜುಕೇಟೆಡ್ ಬುಲ್ಸ್" ಆರಂಭ

ಇವರಿಗೆ ಕೇವಲ 55 ವರ್ಷ ವಯಸ್ಸಾಗಿತ್ತು. ರಾಕೇಶ್‌ ಮಾಸ್ಟರ್‌ ಹೆಚ್ಚಾಗಿ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿಹದ್ದರು ಜೊತೆಗೆ ಟ್ರೋಲ್‌ನಿಂದಲೂ ಹೆಚ್ಚು ಸುದ್ದಿಯಲ್ಲಿರುತ್ತಿದ್ದರು. ಕೆಲವು ವರದಿಗಳ ಪ್ರಕಾರ ರಾಕೇಶ್‌ ಮಾಸ್ಟರ್‌ ಮಧುಮೇಹದಿಂದ ಬಳಲುತ್ತಿದ್ದರು ಜೊತೆಗ ಅವರಿಗೆ ಅಂಗಾಂಗ ವೈಫಲ್ಯವೂ ಇತ್ತು ಎಂದು ಹೇಳಲಾಗುತ್ತಿದೆ. 

ಇವರ ನಿಜವಾದ ಹೆಸರು ಎಸ್‌. ರಾಮಾರಾವ್‌. ಕಿರುತೆರೆಯ ರಿಯಾಲಿಟಿ ಶೋ ಮೂಲಕ ವೃತ್ತಿ ಜೀವನ ಆರಂಭಿಸಿದ ರಾಕೇಶ್‌ ಮಾಸ್ಟರ್‌ ಸುಮಾರು 1500 ಕ್ಕೂ ಹೆಚ್ಚು ಸಿನಿಮಾಗಳಿಗೆ ಡ್ಯಾನ್ಸ್‌ ಕೊರಿಯೋಗ್ರಾಫ್‌ ಮಾಡಿದ್ದು, ಇವರ ಕೆಲವು ಹಾಡುಗಳು ಸಖತ್‌ ಫೇಮಸ್‌ ಆಗಿವೆ. 

ಇದನ್ನೂ ಓದಿ-Bollywood: ಆದಿಪುರುಷ ನಟಿಯನ್ನು ಮಂಚಕ್ಕೆ ಕರೆದಿದ್ದನಂತೆ ಮನೆ ಮಾಲೀಕ.!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News