Rashmika mandanna : ಬಹುಭಾಷಾ ನಟಿ, ಕನ್ನಡತಿ ರಶ್ಮಿಕಾ ಮಂದಣ್ಣ ಸಾಲು ಸಾಲು ವಿವಾದಗಳಿಂದ ಮನನೊಂದಿದ್ದಾರೆ. ಅವರು ಸರಿಯಾಗಿಯೇ ಮಾತನಾಡಿದರೂ ಸಹ ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಟ್ರೋಲ್ ಮಾಡಲಾಗುತ್ತಿದೆ. ಇತ್ತೀಚಿಗೆ ಕಿರಿಕ್ ಪಾರ್ಟಿ ನಿರ್ಮಾಣ ಸಂಸ್ಥೆ ಹೆಸರು ಹೇಳಿಲ್ಲ ಅಂತ ಟ್ರೋಲ್ ಮಾಡಲಾಗಿತ್ತು. ಇನ್ನು ಮೊನ್ನೆ ಸಂದರ್ಶವೊಂದರಲ್ಲಿ ತಮಗೆ ಸಿನಿರಂಗಕ್ಕೆ ದಾರಿ ತೋರಿದ್ದೇ ರಕ್ಷಿತ್ ಮತ್ತು ರಿಷಬ್ ಶೆಟ್ಟಿ ಅಂತ ಹೇಳಿದ್ರೂ ಸಹ ನೆಟ್ಟಿಗರು ಟೀಕೆ ಮಾಡಿದ್ದರು.
ಹೌದು.. ರಶ್ಮಿಕಾ ಎನೇ ಮಾತನಾಡಿದ್ರು ಸಹ ತಪ್ಪಾಗಿ ಬಿಂಬಿಸಲಾಗುತ್ತಿದೆ. ಇದೀಗ ವಿವಾದಗಳಿಂದ ದೂರವಾಗಲು ನಟಿ ಬಯಸಿದ್ದಾರೆ. ಆದರೂ ಸಹ ಅವರ ವಿರುದ್ಧ ಟೀಕೆಗಳು ಕೇಳಿ ಬರುತ್ತಿವೆ. ಕಳೆದ ವರ್ಷ ರಶ್ಮಿಕಾ ವಿರುದ್ಧ ಸಾಲು ಸಾಲು ಆರೋಪಗಳು ಕೇಳಿ ಬಂದಿದ್ದವು. ಅದರ ವಿರುದ್ಧ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ, ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಅಂತ ಬೇಸರಗೊಂಡಿದ್ದರು.
ಇದನ್ನೂ ಓದಿ: ಸಿಗರೇಟ್ ಸೇದುವ ʼಕಾಳಿʼ ಪೋಸ್ಟರ್ ವಿವಾದ : ನಿರ್ದೇಶಕಿ ಲೀನಾ ಬಂಧನಕ್ಕೆ ತಡೆ..!
ಅಲ್ಲದೆ, ಕಳೆದ ವರ್ಷ ಸೌತ್ ಸಿನಿಮಾಗಳಲ್ಲಿ ಮಾಸ್ ಮಸಾಲಾ, ಐಟಂ ಸಾಂಗ್ಗಳು ಇರುತ್ತವೆ. ರೊಮ್ಯಾಂಟಿಕ್ ಹಾಡುಗ ವಿಚಾರಕ್ಕೆ ಬಂದ್ರೆ ಬಾಲಿವುಡ್ ಬೆಸ್ಟ್ ಅಂತ ಹೇಳಿದ್ದರು. ರಶ್ಮಿಕಾರ ಈ ಹೇಳಿಕೆಯನ್ನು ಅನೇಕರು ಟೀಕೆ ಮಾಡಿದ್ದರು. ಇದೀಗ ಈ ವಿಚಾರವಾಗಿ ಕರಾವಳಿ ಮಂದಣ್ಣ ಸ್ಪಷ್ಟನೆ ನೀಡಿದ್ದಾರೆ. ಯೂಟ್ಯೂಬ್ ಚಾನೆಲ್ ʼಪ್ರೇಮಾ ದಿ ಜರ್ನಲಿಸ್ಟ್ʼ ಜೊತೆ ಮಾತನಾಡಿದ ಮಂದಣ್ಣ, ಹಾಡಿನ ವಿಚಾರವಾಗಿ ಮಾತನಾಡಿ, ʼಅಂದು ನನ್ನ ಮಾತನ್ನು ಅರ್ಧಕ್ಕೆ ತಡೆಯಲಾಯಿತು. ಇನ್ನೂ ನಾನು ಹೇಳುವುದು ಇತ್ತು. ಸಾಕಷ್ಟು ರೊಮ್ಯಾಂಟಿಕ್ ಹಾಡುಗಳಲ್ಲಿ ನಾನು ನಡಿಸಿದ್ದೇನೆ. ಸೌತ್‌ನಲ್ಲಿ ಅವು ಹಿಟ್ ಆಗಿವೆ. ಜನ ಅರ್ಥ ಮಾಡಿಕೊಳ್ತಾರೆ ಅಂತ ತಿಳ್ಕೊಂಡಿದ್ದೆ. ಆದ್ರೆ, ಟ್ರೋಲ್ ಮಾಡಿದ್ರು ಅಂತ ಹೇಳಿದರು.
ಇನ್ನು ಟ್ರೋಲ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನಾನು ಟ್ರೋಲ್ ಮತ್ತು ಟೀಕೆಗಳಿಗೆ ತಿರುಗೇಟು ನೀಡಿಲ್ಲ. ಇದು ನಾನು ಅವರಿಗೆ ನೀಡುವ ಗೌರವ. ಎಲ್ಲವನ್ನೂ ಹ್ಯಾಪಿಯಾಗಿ ಸ್ವೀಕರಿಸುತ್ತೇನೆ. ನಾನು ಆರಂಭದಲ್ಲೇ ಆ ತಪ್ಪು ಮಾಡಿದೆ. ಆದರೆ, ಈಗ ಅವುಗಳು ನನ್ನ ಕುಟುಂಬದ ಮೇಲೆ ಪ್ರಭಾವ ಬೀರುತ್ತಿದೆ. ಇನ್ನು ಮುಂದೆ ಟೀಕೆಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ರಶ್ಮಿಕಾ ಹೇಳಿದರು. ಸದ್ಯ ರಶ್ಮಿಕಾ ಮಂದಣ್ಣ ನಟನೆಯ ʼಮಿಷನ್ ಮಜ್ನುʼ ಸಿನಿಮಾ ಜನವರಿ 20ರಂದು ಒಟಿಟಿಯಲ್ಲಿ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.