ಜೈಲರ್‌ ಆರಂಭಕ್ಕೂ ಮುನ್ನ ಘೋಸ್ಟ್ ಘರ್ಜನೆ; ಮೂರು ರಾಜ್ಯಗಳ ಥಿಯೇಟರ್‌ನಲ್ಲಿ ಬಿಗ್‌ ಡ್ಯಾಡಿ ಪ್ರೋಮೋ ಝಲಕ್‌

Ghost Movie Promo : ಜೈಲರ್‌ ಸಿನಿಮಾ ಆರ್ಭಟದಲ್ಲಿ ಶಿವಣ್ಣನ ಹೆಸರೇ ರಾರಾಜಿಸುತ್ತಿದೆ. ನರಸಿಂಹನ ಪಾತ್ರಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ನಡುವೆ ಘೋಸ್ಟ್‌ ಚಿತ್ರತಂಡ ಜೈಲರ್‌ ಸಿನಿಮಾ ಆರಂಭಕ್ಕೂ ಮುನ್ನ ಚಿತ್ರಮಂದಿರಗಳಲ್ಲಿ ಬಿಗ್‌ ಡ್ಯಾಡಿ ಪ್ರೋಮೋ ಪ್ರಸಾರಮಾಡುತ್ತಿದೆ. 

Written by - Savita M B | Last Updated : Aug 12, 2023, 04:20 PM IST
  • ಜೈಲರ್‌ ಸಿನಿಮಾ ಗ್ರ್ಯಾಂಡ್‌ ಓಪನಿಂಗ್‌ ಪಡೆದುಕೊಂಡಿದೆ
  • ಪ್ರೇಕ್ಷಕರಿಗೆ ಇನ್ನೊಂದು ಗುಡ್‌ ನ್ಯೂಸ್‌ ಕೊಟ್ಟಿದೆ ಘೋಸ್ಟ್‌ ಸಿನಿಮಾ ತಂಡ.
  • ಸದ್ಯ ಈ ಪ್ರೋಮೋ ಜೈಲರ್‌ಗೂ ಮುನ್ನ ತೆರೆಗೆ ಅಪ್ಪಳಿಸಿದೆ.
ಜೈಲರ್‌ ಆರಂಭಕ್ಕೂ ಮುನ್ನ ಘೋಸ್ಟ್ ಘರ್ಜನೆ; ಮೂರು ರಾಜ್ಯಗಳ ಥಿಯೇಟರ್‌ನಲ್ಲಿ ಬಿಗ್‌ ಡ್ಯಾಡಿ ಪ್ರೋಮೋ ಝಲಕ್‌ title=

Ghost Movie : ರಜನಿಕಾಂತ್‌ ಮುಖ್ಯ ಪಾತ್ರದಲ್ಲಿ ನಟಿಸಿರುವ ಜೈಲರ್‌ ಸಿನಿಮಾ ಗ್ರ್ಯಾಂಡ್‌ ಓಪನಿಂಗ್‌ ಪಡೆದುಕೊಂಡು, ಕಲೆಕ್ಷನ್‌ ವಿಚಾರದಲ್ಲಿಯೂ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ರಜನಿಕಾಂತ್‌ ಹಾಗೂ ಶಿವಣ್ಣನ ಅಬ್ಬರದ ನಟನೆ ಹಾಗೂ ಮಾಸ್‌ ಡೈಲಾಗ್ಸ್‌, ಸ್ಟೈಲ್‌ ಇಡೀ ಸಿನಿಮಾದ ಹೈಲೈಟ್.‌ 

ಇನ್ನು ಈ ಜೈಲರ್‌ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ಅವರ ನರಸಿಂಹನ ಅವತಾರ ಕಂಡು ತಮಿಳು, ತೆಲುಗು, ಕೇರಳ ಮಂದಿ ನಿಬ್ಬೆರಗಾಗಿದ್ದಾರೆ. ಸದ್ಯ ಅದೇ ಪ್ರೇಕ್ಷಕರಿಗೆ ಇನ್ನೊಂದು ಗುಡ್‌ ನ್ಯೂಸ್‌ ಕೊಟ್ಟಿದೆ ಘೋಸ್ಟ್‌ ಸಿನಿಮಾ ತಂಡ.

ಹೌದು ಶಿವರಾಜ್‌ಕುಮಾರ್‌ ಹಾಗೂ  ಶ್ರೀನಿ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ಘೋಸ್ಟ್‌ ಸಿನಿಮಾ ಈಗಾಗಲೇ ಶೂಟಿಂಗ್‌ ಮುಗಿಸಿ, ಪೋಸ್ಟ್‌ ಪ್ರೊಡಕ್ಷನ್‌ ಹಂತವನ್ನು ತಲುಪಿದೆ. ಮುಂಬರುವ ದಸರಾ ಹಬ್ಬಕ್ಕೆ ಸಿನಿಮಾ ರಿಲೀಸ್‌ ಆಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. 

ಇದನ್ನೂ ಓದಿ-Veerendra Babu: ಮಹಿಳೆಯಿಂದ ಅತ್ಯಾಚಾರ ಆರೋಪ.. ಸ್ಯಾಂಡಲ್‌ವುಡ್ ಹೀರೊ ಅರೆಸ್ಟ್!

ಈ ಘೋಸ್ಟ್‌ ಸಿನಿಮಾ ಕನ್ನಡದಲ್ಲಿ ಮಾತ್ರವಲ್ಲದೇ  ಸೌತ್‌ನ ಎಲ್ಲ ಭಾಷೆಗಳಿಗೂ ಡಬ್‌ ಆಗಿ ರಿಲೀಸ್‌ ಆಗಲಿದ್ದು, ಹ್ಯಾಟ್ರಿಕ್‌ ಹಿರೋ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಬಿಗ್‌ ಡ್ಯಾಡಿ ಪ್ರೋಮೋ ಬಿಡುಗಡೆಯಾಗಿತ್ತು. ಸದ್ಯ ಈ ಪ್ರೋಮೋ ಜೈಲರ್‌ಗೂ ಮುನ್ನ ತೆರೆಗೆ ಅಪ್ಪಳಿಸಿದೆ.

ಅಂದರೇ ತಮಿಳುನಾಡು, ಕೇರಳ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಘೋಸ್ಟ್‌ ಚಿತ್ರದ ಬಿಗ್‌ ಡ್ಯಾಡಿ ಪ್ರೋಮೋ ಜೈಲರ್‌ ಸಿನಿಮಾಗೂ ಮುನ್ನ ಆರಂಭದಲ್ಲಿ ಪ್ರಸಾರವಾಗುತ್ತಿದೆ. ಈ ಬಗ್ಗೆ ಚಿತ್ರದ ನಿರ್ದೇಶಕ ಎಂ.ಜಿ ಶ್ರೀನಿ ಅವರು  "ಭಾಷೆ ಯಾವ್ದೆ ಇರಲಿ, ಡೈಲಾಗ್ ಯಾವ್ದೆ ಕೊಡ್ಲಿ, ಸ್ವಾಗ್‌ ಮಾತ್ರ ಖಡಕ್ ಆಗ್ ಇರುತ್ತೆ" ಎಂದು ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಜೈಲರ್‌ ಸಿನಿಮಾ ಅಭಿಮಾನಿಗಳಿಂದ ಶಭಾಷ್‌ಗಿರಿ ಪಡೆದುಕೊಂಡಿದ್ದು, ಕ್ಷಣ ಮಾತ್ರ ಬಂದು ಹೋಗುವ ಶಿವಣ್ಣನ ನೋಡಿದ ತಮಿಳಿಗರು ಹ್ಯಾಟ್ರಿಕ್‌ ಹಿರೋ ಖದರ್‌ಗೆ ಫಿದಾ ಆಗಿದ್ದಾರೆ. ಇನ್ನುಮುಂದೆ ಶಿವಣ್ಣನ ಸಿನಿಮಾಗಳನ್ನು ಮಿಸ್‌ ಮಾಡದೇ ನೋಡ್ತೀವಿ ಎಂದು ಹೇಳುತ್ತಿದ್ದಾರೆ. 

ಇದನ್ನೂ ಓದಿ-Jailer : ಬಾಕ್ಸಾಫೀಸ್‌ನಲ್ಲಿ ಜೈಲರ್‌ ಆರ್ಭಟ; ಸೀಕ್ವೆಲ್ ಅಲ್ಲ ಪ್ರೀಕ್ವೆಲ್.. ಹೀರೊ ರಜನಿನಾ? ಶಿವಣ್ಣನಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News