ನನಗೆ ನನ್ನ ಗಂಡ ಹೆದರಬೇಕು..! ನಟಿ ಪ್ರಿಯಾಮಣಿ ಶಾಕಿಂಗ್‌ ಹೇಳಿಕೆ..

Priyamani Bhamakalapam 2 : ನಟಿ ಪ್ರಿಯಾಮಣಿ ತಮ್ಮ ಮುಂಬರುವ ಸಿನಿಮಾ 'ಭಾಮಾಕಲಾಪಂ 2' ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಭಾಗವಾಗಿ ಇತ್ತೀಚಿಗೆ ನಡೆದ ಪ್ರೆಸ್ ಮೀಟ್‌ನಲ್ಲಿ ನಟಿ ತಮ್ಮ ಪತಿ ಕುರಿತು ಕೆಲವೊಂದಿಷ್ಟು ಇಂಟ್ರಸ್ಟಿಂಗ್‌ ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತ ವರದಿ ಇಲ್ಲಿದೆ ನೋಡಿ.. 

Written by - Krishna N K | Last Updated : Feb 15, 2024, 05:25 PM IST
  • ನಟಿ ಪ್ರಿಯಾಮಣಿ ತಮ್ಮ ಮುಂಬರುವ ಸಿನಿಮಾ 'ಭಾಮಾಕಲಾಪಂ 2'
  • ಈಗಾಗಲೇ 'ಭಾಮಾಕಲಾಪಂ 2' ಚಿತ್ರದ ಟ್ರೈಲರ್ ಸಹ ಬಿಡುಗಡೆಯಾಗಿದೆ
  • ಈ ಚಿತ್ರ ಫೆಬ್ರವರಿ 16 ರಿಂದ OTT ನಲ್ಲಿ ಸ್ಟ್ರೀಮ್ ಆಗಲಿದೆ
ನನಗೆ ನನ್ನ ಗಂಡ ಹೆದರಬೇಕು..! ನಟಿ ಪ್ರಿಯಾಮಣಿ ಶಾಕಿಂಗ್‌ ಹೇಳಿಕೆ.. title=

Actress Priyamani : ಬಹುಭಾಷಾ ನಟಿ ಪ್ರಿಯಾಮಣಿ ನಟನೆಯ ‘ಭಾಮಾ ಕಲಾಪಂ’ ವೆಬ್ ಸಿನಿಮಾ ಉತ್ತಮ ಯಶಸ್ಸು ಕಂಡಿದೆ. 2022 ರಲ್ಲಿ ಬಿಡುಗಡೆಯಾದ ಈ ಕ್ರೈಮ್ ಥ್ರಿಲ್ಲರ್ ಚಿತ್ರ ಪ್ರೇಕ್ಷಕರನ್ನು ಮೆಚ್ಚಿಸಿತು. ಇದೀಗ 'ಭಾಮಾಕಲಾಪಂ 2' ಸೀಕ್ವೆಲ್‌ನೊಂದಿಗೆ ಪ್ರಿಯಾ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈಗಾಗಲೇ 'ಭಾಮಾಕಲಾಪಂ 2' ಚಿತ್ರದ ಟ್ರೈಲರ್ ಸಹ ಬಿಡುಗಡೆಯಾಗಿದೆ.

ಮೊದಲ ಭಾಗಕ್ಕಿಂತಲೂ ಇದು ಥ್ರಿಲ್ಲಿಂಗ್ ಅಂಶಗಳನ್ನು ಹೊಂದಿದ್ದು, ಈ ವೆಬ್ ಚಿತ್ರದ ಟ್ರೈಲರ್ ಅನ್ನು 'ಆಹಾ' ಬಿಡುಗಡೆ ಮಾಡಿದೆ. ಆಹಾ ಒರಿಜಿನಲ್ ಆಗಿ ತಯಾರಾದ ಈ ಚಿತ್ರ ಫೆಬ್ರವರಿ 16 ರಿಂದ OTT ನಲ್ಲಿ ಸ್ಟ್ರೀಮ್ ಆಗಲಿದೆ. 'ಭಾಮಾಕಲಾಪಂ 2' ಚಿತ್ರದ ಪ್ರಚಾರದ ಭಾಗವಾಗಿ ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಿಯಾಮಣಿ ಭಾಗವಹಿಸಿದ್ದರು. ಈ ವೇಳೆ ತಮ್ಮ ಪತಿ ಬಗ್ಗೆ ಸ್ವಾರಸ್ಯಕರ ಮಾಹಿತಿ ನೀಡಿದರು.

ಇದನ್ನೂ ಓದಿ:ಜಾಕ್ ಪಾಟ್ ಪ್ರೇಮೋತ್ಸವ ವೇದಿಕೆಯಲ್ಲಿ ಸಂಗೀತ ಸುಧೆ!

ಹೌದು.. ಸಂದರ್ಶನದಲ್ಲಿ ನೀವು ನಿಮ್ಮ ಗಂಡನಿಗೆ ಹೆದರುತ್ತೀರಾ..? ಅಂತ ವರದಿಗಾರರು ಪ್ರಶ್ನೆ ಮಾಡಿದರು. ಅದಕ್ಕೆ ಪ್ರಿಯಾಮಣಿ, "ನನ್ನ ಕಂಡರೆ ನನ್ನ ಗಂಡನಿಗೆ ಭಯ, ಅವನಿಗೆ ಹೆದರಿಕೆ. ಇದು ಹಿಂಸೆ ಅಲ್ಲ, ಕೆಲವು ಸಂದರ್ಭಗಳಲ್ಲಿ ಗಂಡ ನಮ್ಮ ಮಾತು ಕೇಳಬೇಕು, ಕೆಲವೊಮ್ಮೆ ನಾವು ಅವರ ಮಾತು ಕೇಳಬೇಕು. ಎಲ್ಲವೂ ಫಿಫ್ಟಿ-ಫಿಫ್ಟಿ ಇರಬೇಕು ಎಂದು ಪ್ರಿಯಾಮಣಿ ಉತ್ತರಿಸಿದರು.

ಇನ್ನು ಈಗಲೂ ಸಿನಿಮಾ ಆಫರ್‌ಗಳು ಬರುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಎಲ್ಲಾ ಭಾಷೆಗಳಲ್ಲೂ ಅನೇಕರು ಆಫರ್‌ಗಳನ್ನು ನೀಡುತ್ತಿದ್ದಾರೆ. ಹಲವು ಸಿನಿಮಾ ಆಫರ್‌ಗಳು ಬರುತ್ತಿವೆ. ಒಟಿಪಿ ಆಫರ್‌ಗಳೂ ಬರುತ್ತಿವೆ. ಇದು ನನ್ನ ಅದೃಷ್ಟವೆಂದೇ ಭಾವಿಸುತ್ತೇನೆ. ಅವರೂ ನನ್ನನ್ನು ನಂಬಿ ಕರೆ ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ:ಕ್ರೈಂ ಕಂಟೆಂಟ್ ಜೊತೆಗೊಂದು ತ್ರಿಕೋನ‌ ಪ್ರೇಮಕಥೆ.. ʼಎವಿಡೆನ್ಸ್ʼ ಲಿರಿಕಲ್ ಸಾಂಗ್ ರಿಲೀಸ್!

ಅಲ್ಲದೆ, ಮದುವೆಯಾದರೂ ಆಗದಿದ್ದರೂ ಇಂಡಸ್ಟ್ರಿ ಮತ್ತು ಪ್ರೇಕ್ಷಕರ ಪ್ರೀತಿ, ಬೆಂಬಲ ಈಗಲೂ ಹಾಗೆಯೇ ಇದೆ. ಇದು ಹೀಗೆಯೇ ಮುಂದುವರಿಯಬೇಕೆಂದು ನಾನು ಬಯಸುತ್ತೇನೆ. ಮದುವೆಯ ನಂತರ ನಾಯಕಿಯಾಗಿ ಮುಂದುವರಿಯಬೇಕೋ ಅಥವಾ ಬ್ರೇಕ್ ತೆಗೆದುಕೊಳ್ಳಬೇಕೋ ಎಂಬುದು ಅವರ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಮದುವೆಯಾದ ನಾಯಕಿಯರು ಈಗ ತುಂಬಾ ಒಳ್ಳೆಯ ಪಾತ್ರಗಳನ್ನು ಮಾಡುತ್ತಿದ್ದಾರೆ. ಇದು ಶಾಶ್ವತವಾಗಿ ಮುಂದುವರಿಯಬೇಕೆಂದು ನಾನು ಬಯಸುತ್ತೇನೆ ಎಂದರು.

'ಭಾಮಾಕಲಾಪಂ 2' ಚಿತ್ರದಲ್ಲಿ ಸೀರತ್ ಕಪೂರ್, ಬ್ರಹ್ಮಾಜಿ, ರಘು ಮುಖರ್ಜಿ ಸೇರಿದಂತೆ ಹಲವಾರು ನಟರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬಾಪಿನಿಡು ಬಿ ಮತ್ತು ಸುಧೀರ್ ಈದರ್ ಈ ಚಿತ್ರವನ್ನು ಡ್ರೀಮ್ ಫಾರ್ಮರ್ಸ್ ಬ್ಯಾನರ್ ಅಡಿಯಲ್ಲಿ 'ಆಹಾ' ಒಟಿಟಿ ಕಂಪನಿಯ ಸಹಯೋಗದಲ್ಲಿ ನಿರ್ಮಿಸಿದ್ದಾರೆ. ಈ ಸರಣಿಯನ್ನು ಅಭಿಮನ್ಯು ನಿರ್ದೇಶಿಸಿದ್ದು, ಪ್ರಶಾಂತ್ ಆರ್ ವಿಹಾರಿ ಸಂಗೀತ ಸಂಯೋಜಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News