ಈಗ ಸಿನಿಮಾ ರಂಗದಲ್ಲಿ ಪುಷ್ಪಾ 2 ಖ್ಯಾತಿಯ ಅಲ್ಲು ಅರ್ಜುನ್ ಅವರ ಬಂಧನ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ, ಡಿಸೆಂಬರ್ 13 ರಂದು ಕಾಲ್ತುಳಿತ ಪ್ರಕರಣದ ವಿಚಾರವಾಗಿ ಪೊಲೀಸರು ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದರು.ಅವರಿಗೆ ಮಧ್ಯಂತರ ಜಾಮೀನು ಕೂಡ ಸಿಕ್ಕಿತ್ತು ಆದರೂ ಕೂಡ ಅವರು ಒಂದು ರಾತ್ರಿ ಜೈಲ್ಲಿನಲ್ಲೆಯೇ ಕಳೆದಿದ್ದಾರೆ ಎನ್ನಲಾಗಿದೆ.ಇಂದು ಬೆಳೆಗ್ಗೆ ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಅಷ್ಟಕ್ಕೂ ಅವರನ್ನು ಬಂಧಿಸಿದ್ದೇಕೆ?
ಪುಷ್ಪಾ 2 ಪ್ರೀಮಿಯರ್ ಷೋ ಪ್ರದರ್ಶನದ ವೇಳೆ ಅಲ್ಲು ಅರ್ಜುನ್ ಹೈದರಾಬಾದ್ ನಲ್ಲಿರುವ ಸಂಧ್ಯಾ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು.ಈ ವೇಳೆ ಅಲ್ಲಿ ಉಂಟಾಗಿರುವ ತೀವ್ರ ಕಾಲ್ತುಳಿತಕ್ಕೆ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಈ ವಿಚಾರವಾಗಿ ಮೃತ ಮಹಿಳೆಯ ಪತಿ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಟ ಅಲ್ಲು ಅರ್ಜುನ್ ಅವರು ತಮ್ಮ ವಿರುದ್ಧ ಇರುವ ಅರೆಸ್ಟ್ ವಾರೆಂಟ್ ರದ್ದು ಕೋರಿ ಕೋರ್ಟ್ ನ ಮೊರೆಹೊಗಿದ್ದರು.ಇದರ ಪೊಲೀಸರು ಮಾತ್ರ ನಟನನ್ನು ಬಂಧಿಸಿ ವಿಚಾರಣೆಗೆ ಕರೆದೊಯ್ದಿದ್ದರು.ಇದೆ ವೇಳೆ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿತ್ತು . ನಂತರ ಕೇವಲ ಒಂದೇ ದಿನದಲ್ಲಿ ಪರಿಸ್ಥಿತಿ ಬದಲಾಗಿ ಅವರಿಗೆ ಮಧ್ಯಂತರ ಜಾಮೀನು ನೀಡಿ ಬಿಡುಗಡೆ ಮಾಡಲು ಕೋರ್ಟ್ ಸಮ್ಮತಿ ನೀಡಿತು.
ಇದನ್ನೂ ಓದಿ- ಪ್ರಪಂಚದ ಶ್ರೀಮಂತರ ಪೈಕಿ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಆಸ್ತಿಯ ಮೌಲ್ಯ ಒಟ್ಟು ಎಷ್ಟು ಗೊತ್ತಾ ?
ಇತ್ತ ರಾತ್ರಿಯೇ ಬಿಡುಗಡೆಯಾಗಬೇಕಾಗಿದ್ದ ನಟ ಅಲ್ಲು ಅರ್ಜುನ್ ಬಿಡುಗಡೆ ವೇಳೆ ಸಮಯ ಮೀರಿದ್ದರಿಂದ ಭದ್ರತೆಯ ಹಿನ್ನೆಲೆಯಲ್ಲಿ ಅವರು ರಾತ್ರಿ ಜೈಲಿನಲ್ಲಿಯೇ ಸಮಯ ಕಳೆಯಬೇಕಾಯಿತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.