Amruthadhare Serial: ಜೈದೇವನ ಮೋಸದ ಮದುವಗೆ ಅಡ್ಡಿಯಾಗಿ ನಿಂತ ಭೂಮಿಕಾ!

Amruthadhare Todayʼs Marriage Episode: ಅಮೃತಧಾರೆ ಧಾರವಾಹಿಯಲ್ಲಿ ಜೈದೇವ್‌ ಹಾಗೂ ಅಪೇಕ್ಷಾ ಮದುವೆ ಸಂಭ್ರಮ ಜೋರಾಗಿದೆ.  ಇತ್ತ ಮಲ್ಲಿಗೆ ಮೋಸ ಮಾಡಿದ ಜೈದೇವ್‌ನ ವಿರುದ್ಧ ಅತ್ತಿಗೆ ಭೂಮಿಕಾ ನಿಂತು ನ್ಯಾಯಾದ ಪರವಾಗಿರುತಾಳೆ.  ಸರಿಯಾಗಿ ಮುಹೂರ್ತದ ಸಮಯಲ್ಲಿ ಭೂಮಿಕಾ ಅಡ್ಡವಾಗುತ್ತಾಳೆ. ಹಾಗಾದ್ರೇ ಈ ಮದುವೆ ನಡೆಯುತ್ತಾ? ಇಲ್ಲಿದೆ ಕಂಪ್ಲೀಟ್‌ ಸ್ಟೋರಿ.

Written by - Zee Kannada News Desk | Last Updated : Feb 23, 2024, 03:01 PM IST
  • ಮದುಮಗ ಜೈದೇವ್‌ ಮಲ್ಲಿಗೆ ಮೋಸ ಮಾಡಿ ಮುಗ್ಧನಂತೆ ಎಲ್ಲರ ಎದುರು ನಟಿಸುತ್ತಿಸದ್ದಾನೆ.
  • ಇಂತಹ ತಂತ್ರ ಕುಂತ್ರದ ನಡುವೆಯೇ ಜೈದೇವ್‌ ಹಾಗೂ ಅಪೇಕ್ಷಾಳ ಮದುವೆ ಸಂಭ್ರಮ ಮಂಟಪದವರೆಗೂ ಬಂದಿದೆ.
  • ಜೈದೇವ್‌ ಹಣೆಮಣೆಯಲ್ಲಿ ಅಪೇಕ್ಷಾಳಿಗೆ ಕಾಯುತ್ತಾ ಕೂತಿರುತ್ತಾನೆ. ಸಂಭ್ರಮ ಜೋರಾಗಿಯೇ ಇದ್ದು, ಪ್ರತಿಯೊಬ್ಬರ ಮುಖದಲ್ಲಿ ನಗುಬೀರಿರುತ್ತೆ.
Amruthadhare Serial: ಜೈದೇವನ ಮೋಸದ ಮದುವಗೆ ಅಡ್ಡಿಯಾಗಿ ನಿಂತ ಭೂಮಿಕಾ! title=

Amruthadhare Jaidev Apeksha Marriage Episode: ಅಮೃತಧಾರೆ ಸೀರಿಯಲ್‌ ಮದುವೆ ಸಂಭ್ರಮ ಜೋರಾಗಿಯೇ ನಡೆಯುತ್ತಿದೆ. ಮನೆಯವರೆಲ್ಲರೂ ಮದುವೆ ಶಾಸ್ತ್ರಗಳಲ್ಲಿ ಬ್ಯುಸಿಯಾಗಿದ್ದರೇ, ಇತ್ತ ಮದುಮಗಳು ಅಪೇಕ್ಷಾ ಮುಖದಲ್ಲಿ ಸ್ವಲ್ಪವೂ ಖುಷಿಯಿಲ್ಲ. ಅವಳ ಮನಸ್ಸೆಲ್ಲವೂ ಪ್ರಿಯಕರ ಪಾರ್ಥನ ಮೇಲೆಯೇ ಇದೆ. ಅಪೇಕ್ಷಾ ಮನೆಯವರ ಒಳಿತಿಗಾಗಿ ಮದುಮಗಳಾಗಿದ್ದು, ಪಾರ್ಥನಿಂದ ದೂರ ಇರಬೇಕಲ್ಲ ಎಂಬ ಚಿಂತೆಯಲ್ಲಿ ಮುಳುಗಿದ್ದಾಳೆ. ಇತ್ತ ಮದುಮಗ ಜೈದೇವ್‌ ಮಲ್ಲಿಗೆ ಮೋಸ ಮಾಡಿ ಮುಗ್ಧನಂತೆ ಎಲ್ಲರ ಎದುರು ನಟಿಸುತ್ತಿಸದ್ದಾನೆ.
 
ಜೈದೇವನ ಮೋಸದ ಬಗ್ಗೆ ತಿಳಿದ ಶಕುಂತಲಾ  ಮಗ ಜೈದೇವ್‌ ಬಗ್ಗೆ ಎಲ್ಲವನ್ನೂ ತಿಳಿದಿದ್ದರೂ  ಏನು ಗೊತ್ತಿಲ್ಲದ ಹಾಗೆ ಭೂಮಿಕಾ ಮುಂದೆ ಇದ್ದಳು. ಶಕುಂತಲಾಗೆ ಅಪೇಕ್ಷಾ ಜೊತೆಗೆ ಜೈದೇವನ ಮದುವೆಯ ನಡೆಯಲೇ ಬೇಕು. ಇದು ದಿವಾನ್ ಕುಟುಂಬದ ಪ್ರೆಸ್ಟೀಜ್ ಪ್ರಶ್ನೆಯಾಗಿದೆ. ಈ ಮದುವೆ ಯಾವುದೇ ಕಾರಣಕ್ಕೂ ನಿಲ್ಲಬಾರೆಂಬುದು ಶಕುಂತಲಾ ಬಯಸುತ್ತಿದ್ದಾಳೆ.  ಇನ್ನೊಂದೆಡೆ ಭೂಮಿಕಾಗೆ ಈ ಮದುವೆ ನಡೆಯುವುದು ಇಷ್ಟವಿರುವುದಿಲ್ಲ. ಜೈದೇವ ಮಾಡಿರುವ ತಪ್ಪಿನಿಂದ ಇಬ್ಬರು ಹೆಣ್ಣು ಮಕ್ಕಳ ಬಾಳಿಗೆ ತೊಂದರೆಯಾಗುತ್ತದೆ ಎಂದು ಯೋಚಿಸುತ್ತಿದ್ದಾಳೆ.

 
 
 
 

 
 
 
 
 
 
 
 
 
 
 

A post shared by Zee Kannada (@zeekannada)

ಇದನ್ನೂ ಓದಿ: ಮತ್ತೆ ಬಂದರು ಟಕ್ಕರ್ ರಘು ಶಾಸ್ತ್ರೀ… ’ಲೈನ್ ಮ್ಯಾನ್’ ಅವತಾರದಲ್ಲಿ ತ್ರಿಗುಣ್!

ಭೂಮಿಕಾ ಗೌತಮ್‌ಗೆ ಇದರ ಬಗ್ಗೆ ಹೇಳುವುದಾರರೇ , ಆತ ಸಾಕ್ಷಿ ಇಲ್ಲಿದೇ ಯಾರ ಮಾತು ನಂಬುವುದಿಲ್ಲ. ಮದುವೆಯ ಸಂಭ್ರಮದ  ಮಧ್ಯೆಯೂ ಯಾರೋ ಜೈದೇವನ ನಡವಳಿಕೆ ಸರಿಯಿಲ್ಲ ಎಂದು ಮಾತನಾಡಿದ್ದನ್ನು ಕೇಳಿಸಿಕೊಂಡ ಗೌತಮ್ ಜಗಳ ಮಾಡುತ್ತಿರುತ್ತಾನೆ. ನನ್ನ ಸಹೋದರರ ಬಗ್ಗೆ ಯಾರೂ ಏನೂ ಮಾತನಾಡಬಾರದು. ಅವರು ನನಗಿಂತಲೂ ಒಳ್ಳೆಯವರು ಎಂದು ಜಗಳವಾಡಿರುತ್ತಾನೆ.  ಇಂತಹ ತಂತ್ರ ಕುಂತ್ರದ ನಡುವೆಯೇ ಜೈದೇವ್‌ ಹಾಗೂ ಅಪೇಕ್ಷಾಳ ಮದುವೆ ಸಂಭ್ರಮ ಮಂಟಪದವರೆಗೂ ಬಂದಿದೆ.

ಜೈದೇವ್‌ ಹಣೆಮಣೆಯಲ್ಲಿ ಅಪೇಕ್ಷಾಳಿಗೆ ಕಾಯುತ್ತಾ ಕೂತಿರುತ್ತಾನೆ. ಸಂಭ್ರಮ ಜೋರಾಗಿಯೇ ಇದ್ದು,  ಪ್ರತಿಯೊಬ್ಬರ ಮುಖದಲ್ಲಿ ನಗುಬೀರಿರುತ್ತೆ. ಮುಹೂರ್ತದ ಸಮಯ ಹತ್ತಿರ ಬಂತು. ಆಗಾ ವಧು ಅಪೇಕ್ಷಾಳನ್ನು ಮಂಟಪದ ಬಳಿ ಸಡಗರದಿಂದ ಕರೆದೊಯುತ್ತಿರುತ್ತಾರೆ. ಆದರೆ ಅಪೇಕ್ಷಾ ಮುಖದಲ್ಲಿ ಸಲ್ಪವೂ ಸಂತೋಷ ಕಾಣಿಸುತ್ತಿರಲ್ಲಿ. ಅಪೇಕ್ಷಾ ಹೆಸೆಮಣೆ ಮೇಲೆ ಕೂತ ಬಳಿಕ, ಇನ್ನೇನು ಜೈದೇವ್‌ ತಾಳಿ ಕಟ್ಟಬೇಕು ಅದೇ ಸಮಯದಲ್ಲಿ ಆತನ ಕತ್ತಿಗೆ ಮಲ್ಲಿ ತಾತ ಕತ್ತಿಯನ್ನು ಅಡ್ಡ ಹಿಡಿಯುತ್ತಾನೆ. ಆಗ ನ್ಯಾಯದ ಪರವಾಗಿ ನಿಂತ ಭೂಮಿಕಾಳ ಪ್ರವೇಶವಾಗುವುದನೆಲ್ಲಾ ಪ್ರೋಮೋದಲ್ಲಿ ನೋಡಬಹುದು. ಹಾಗಾದ್ರೇ ಈ ಮದುವೆ ನಡೆಯುತ್ತಾ ಇಲ್ಲವಾ ಅಂತ ಮುಂಬರುವ ಸಂಚಿಕೆಗಾಗಿ ಕಾದು ನೋಡಬೇಕು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News