ಲತಾ-ಆಶಾರ ಅಪರೂಪದ ಬಾಲ್ಯದ ಫೋಟೋ ಹಂಚಿಕೊಂಡ ಅಮಿತಾಬ್ ಬಚ್ಚನ್!

ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಅವರು ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಮತ್ತು ಆಶಾ ಭೋಸ್ಲೆ ಅವರ ಬಾಲ್ಯದ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

Updated: Feb 12, 2020 , 07:58 AM IST
ಲತಾ-ಆಶಾರ ಅಪರೂಪದ ಬಾಲ್ಯದ ಫೋಟೋ ಹಂಚಿಕೊಂಡ ಅಮಿತಾಬ್ ಬಚ್ಚನ್!

ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಮತ್ತು ಆಶಾ ಭೋಸ್ಲೆ ಅವರ ಬಾಲ್ಯದ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಕಪ್ಪು ಮತ್ತು ಬಿಳಿ ಚಿತ್ರದಲ್ಲಿ, ಲತಾ ಮತ್ತು ಆಶಾ ಫ್ರಾಕ್ ಮತ್ತು ಸ್ಕರ್ಟ್-ಬ್ಲೌಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಲತಾ ಮಂಗೇಶ್ಕರ್ ಅವರು  ಮಂಗಳವಾರ ಬೆಳಿಗ್ಗೆ ಟ್ವೀಟ್ ಮಾಡುವ ಮೂಲಕ ಅವರ ಆಧ್ಯಾತ್ಮಿಕ ಗುರು ಪಂಡಿತ್ ಜಮ್ಮು ಮಹಾರಾಜ್ ಮತ್ತು ದಿವಂಗತ ಕವಿ ನರೇಂದ್ರ ಶರ್ಮಾ ಅವರ ಪುಣ್ಯ ತಿಥಿಯಂದು ಗೌರವ ಸಲ್ಲಿಸಿದರು. ಲತಾ ಮಂಗೇಶ್ಕರ್ ಅವರ ಈ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ, ಬಿಗ್ ಬಿ ಇಬ್ಬರು ಅನುಭವಿ ಸಹೋದರಿಯರ ಈ ಹಳೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಬರೆದಿರುವ ಶೀರ್ಷಿಕೆ, "ಲತಾ ಜಿ ಮತ್ತು ಆಶಾ ಜಿ ಅವರ ಬಾಲ್ಯದ ಚಿತ್ರ. ಇಂದು ಲತಾ ಜಿ ಅವರ ಟ್ವೀಟ್‌ನಲ್ಲಿ ಅವರು ತಮ್ಮ ಗುರುಗಳನ್ನು ಹೇಗೆ ನೆನಪಿಸಿಕೊಂಡರು ಮತ್ತು ಇದ್ದಕ್ಕಿದ್ದಂತೆ ನನಗೆ ಈ ಚಿತ್ರ ಸಿಕ್ಕಿತು. ಟೆಲಿಪತಿ! " ಎಂದು ಬರೆದಿದ್ದಾರೆ.

ಅಭಿಮಾನಿಗಳು ಬರೆದರು- "ಓಲ್ಡ್ ಈಸ್ ಗೋಲ್ಡ್ ಸರ್"
ಈ ಕುರಿತು ಅವರ ಅಭಿಮಾನಿಗಳೊಬ್ಬರು "ಓಲ್ಡ್ ಈಸ್ ಗೋಲ್ಡ್ ಸರ್" ಎಂದು ಬರೆದಿದ್ದಾರೆ. ಒಬ್ಬರು "ನೀವು ನಮ್ಮೆಲ್ಲರಿಗೂ ಸ್ಫೂರ್ತಿ" ಎಂದು ಬರೆದಿದ್ದಾರೆ.