BBK9 : ಡಬಲ್‌ ಎಲಿಮಿನೇಷನ್‌ ಬಿಸಿ.. ಇವತ್ತು ಯಾರ್‌ ಬರ್ತಾರೆ ಮನೆಯಿಂದ ಹೊರಗೆ..?

ಸ್ಪರ್ಧಿಗಳ ಪೈಪೋಟಿ, ಜಗಳ, ಪರಸ್ಪರ ದೂರುಗಳ ನಡುವೆ ಕೊನೆಗೂ ಬಿಗ್‌ಬಾಸ್‌ ಸೀಸನ್‌ 9 ಅಂತಿಮ ಘಟ್ಟ ತಲುಪಿದೆ. ವರ್ಷಾಂತ್ಯಕ್ಕೆ ಬಿಗ್ ಬಾಸ್ ಸೀಸನ್ 9 ಮುಕ್ತಾಯಗೊಳಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಇಂದು ಡಬಲ್‌ ಎಲಿಮಿನೇಷನ್‌ ಆಗುವ ಸಾಧ್ಯತೆ ಇದ್ದು, ಬಿಗ್‌ಹೌಸ್‌ ಮನೆ ಮಂದಿಗೆ ನಡುಕ ಶುರುವಾಗಿದೆ. ಹಾಗು ಯಾರು ಇಂದು ಮೆನೆಯಿಂದ ಹೊರಗೆ ಬರುತ್ತಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.

Written by - Krishna N K | Last Updated : Dec 24, 2022, 02:51 PM IST
  • ಬಿಗ್‌ಬಾಸ್‌ ಸೀಸನ್‌ 9 ಅಂತಿಮ ಘಟ್ಟ ತಲುಪಿದೆ.
  • ವರ್ಷಾಂತ್ಯಕ್ಕೆ ಬಿಗ್ ಬಾಸ್ ಸೀಸನ್ 9 ಮುಕ್ತಾಯಗೊಳಲಿದೆ.
  • ಇಂದು ಡಬಲ್‌ ಎಲಿಮಿನೇಷನ್‌ ಆಗುವ ಸಾಧ್ಯತೆ ಇದೆ.
BBK9 : ಡಬಲ್‌ ಎಲಿಮಿನೇಷನ್‌ ಬಿಸಿ.. ಇವತ್ತು ಯಾರ್‌ ಬರ್ತಾರೆ ಮನೆಯಿಂದ ಹೊರಗೆ..? title=

BBK9 : ಸ್ಪರ್ಧಿಗಳ ಪೈಪೋಟಿ, ಜಗಳ, ಪರಸ್ಪರ ದೂರುಗಳ ನಡುವೆ ಕೊನೆಗೂ ಬಿಗ್‌ಬಾಸ್‌ ಸೀಸನ್‌ 9 ಅಂತಿಮ ಘಟ್ಟ ತಲುಪಿದೆ. ವರ್ಷಾಂತ್ಯಕ್ಕೆ ಬಿಗ್ ಬಾಸ್ ಸೀಸನ್ 9 ಮುಕ್ತಾಯಗೊಳಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಇಂದು ಡಬಲ್‌ ಎಲಿಮಿನೇಷನ್‌ ಆಗುವ ಸಾಧ್ಯತೆ ಇದ್ದು, ಬಿಗ್‌ಹೌಸ್‌ ಮನೆ ಮಂದಿಗೆ ನಡುಕ ಶುರುವಾಗಿದೆ. ಹಾಗು ಯಾರು ಇಂದು ಮೆನೆಯಿಂದ ಹೊರಗೆ ಬರುತ್ತಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.

ಹೌದು.. ಅಬ್ಬಬ್ಬಾ ಅಂದ್ರೆ ಬಿಗ್‌ ಬಾಸ್‌ ಫಿನಾಲೆಗೆ ಕೇವಲ 8 ದಿನಗಳು ಮಾತ್ರ ಬಾಕಿ ಇರಬಹುದು. ಇದರಿಂದಾಗಿ ದೊಡ್ಮನೆ ಸ್ಪರ್ಧಿಗಳಿಗೆ ಒಂದೊಂದು ದಿನವೂ ಸಹ ನುಂಗಲಾರದ ತುತ್ತಾಗಿದೆ. ಅಲ್ಲದೆ, ಮನೆ ಮಂದಿಗೆ ಡಬಲ್‌ ಎಲಿಮಿನೇಷನ್‌ ಟೆನಕ್ಷನ್‌ ಶುರುವಾಗಿದೆ. ಸದ್ಯ ಬಿಗ್ ಬಾಸ್ ಹೌಸ್‌ನಲ್ಲಿ 8 ಮಂದಿ ಉಳಿದಿದ್ದು, ಇಂದು ಯಾರು ಮನೆಯಿಂದ ಹೊರಗೆ ಬರ್ತಾರಪ್ಪಾ ಅಂತ ಟಿವಿ ಮುಂದೆ ಪ್ರೇಕ್ಷಕರು ಕಾತುರತೆಯಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: BBK 9 Finale : ಈ ದಿನದಂದು ನಡೆಯಲಿದೆ ಬಿಗ್ ಬಾಸ್ ಗ್ರ್ಯಾಂಡ್‌ ಫಿನಾಲೆ

ಇನ್ನು ಫಿನಾಲೆ ಯಾವಾಗಪ್ಪಾ ಅಂತ ತಲೆಕೆಡಿಸಿಕೊಂಡಿದ್ದ ಪ್ರೇಕ್ಷಕರಿಗೆ ನವೆಂಬರ್ 22ರ ಎಪಿಸೋಡ್‌ ಮೂಲಕ ಬಿಗ್‌ಬಾಸ್‌ ಫಿನಾಲೆಗೆ 8 ದಿನ ಮಾತ್ರ ಬಾಕಿ ಎಂಬ ಸೂಚನೆ ನೀಡಿದೆ. ಅಲ್ಲದೆ, ಈ ವಾರ ಡಬಲ್ ಎಲಿಮಿನೇಷನ್ ಕೂಡ ನಡೆಯಬಹುದು ಎಂದು ಎಚ್ಚರಿಸಲಾಗಿದೆ. ಸದ್ಯ ಅರುಣ್ ಸಾಗರ್, ಆರ್ಯವರ್ಧನ್ ಗುರೂಜಿ, ಅಮೂಲ್ಯ ಗೌಡ, ದೀಪಿಕಾ ದಾಸ್, ರೂಪೇಶ್ ರಾಜಣ್ಣ, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ ಮತ್ತು ದಿವ್ಯಾ ಉರುಡುಗ ಬಿಗ್‌ ಮನೆಯಲ್ಲಿದ್ದಾರೆ.

ಒಟ್ಟು 8 ಮಂದಿ ಸ್ಪರ್ಧಿಗಳಲ್ಲಿ ಈ ವಾರ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಗೆ ಹೋದ್ರೆ ಮುಂದಿನ ವಾರ ಮತ್ತೋರ್ವ ಸ್ಪರ್ಧಿ ಎಲಿಮಿನೇಟ್ ಆಗಲಿದ್ದಾರೆ. ಈ ಮೂಲಕ ಬಿಗ್‌ಹೌಸ್‌ನಲ್ಲಿ ಐವರು ಸ್ಪರ್ಧಿಗಳು ಫಿನಾಲೆ ತಲುಪಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News