ಬಿಗ್ ಬಾಸ್ ಸೀಸನ್ -7ರ ಆರಂಭಕ್ಕೆ ಕ್ಷಣಗಣನೆ

ವೈಭವೋಪೇತ ವೇದಿಕೆ, ಬಣ್ಣ ಮತ್ತು ಬೆಳಕಿನಿಂದ ಬೆರಗುಗೊಳಿಸುವ ಕಾರ್ಯಕ್ರಮದ ಮೂಲಕ ಬಿಗ್ ಬಾಸ್ ಸೀಸನ್ ಸೆವೆನ್ ಇಂದು ಸಂಜೆ ಆರಂಭವಾಗಲಿದೆ.

Last Updated : Oct 13, 2019, 03:14 PM IST
ಬಿಗ್ ಬಾಸ್ ಸೀಸನ್ -7ರ ಆರಂಭಕ್ಕೆ ಕ್ಷಣಗಣನೆ title=
Image Courtesy: Twitter@ColorsKannada

ಬೆಂಗಳೂರು: ಭಾರೀ ಕುತೂಹಲ ಉಂಟುಮಾಡಿರುವ 'ಬಿಗ್ ಬಾಸ್ ಸೀಸನ್ -7' ಇಂದಿನಿಂದ ಆರಂಭವಾಗಲಿದೆ. ಜೊತೆಗೆ ಈ ಸಲದ ಬಿಗ್ ​ಬಾಸ್ ರಿಯಾಲಿಟಿ ಶೋನಲ್ಲಿ ಯಾರೆಲ್ಲಾ ಸ್ಪರ್ಧಿಗಳಾಗಲಿದ್ದಾರೆ ಎನ್ನುವ ಕುತೂಹಲವೂ ಹೆಚ್ಚಾಗುತ್ತಿದ್ದು ಸಂಜೆ 6ಗಂಟೆಗೆ ನಡೆಯುವ ವರ್ಣರಂಜಿತ ಕಾರ್ಯಕ್ರಮದಲ್ಲಿ ಅದು ಗೊತ್ತಾಗಲಿದೆ‌.

ವೈಭವೋಪೇತ ವೇದಿಕೆ, ಬಣ್ಣ ಮತ್ತು ಬೆಳಕಿನಿಂದ ಬೆರಗುಗೊಳಿಸುವ ಕಾರ್ಯಕ್ರಮದ ಮೂಲಕ ಬಿಗ್ ಬಾಸ್ ಸೀಸನ್ ಸೆವೆನ್ ಇಂದು ಸಂಜೆ ಆರಂಭವಾಗಲಿದೆ. ಬಿಗ್ ಬಾಸ್ ಸೀಸನ್ ಗಳ ಯಶಸ್ವಿ ನಿರೂಪಕ ‘ಕಿಚ್ಚ’ ಸುದೀಪ್ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ. ಈ ಸಲ ಒಟ್ಟು 17 ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ವಿಶೇಷ ಏನೆಂದರೆ ಈ ಬಾರಿ ಸ್ಪರ್ಧೆಯಲ್ಲಿರುವವರೆಲ್ಲರೂ ಸೆಲೆಬ್ರಿಟಿಗಳೇ ಆಗಿರುತ್ತಾರೆ. ಸಿನಿಮಾ, ಕಿರುತೆರೆ, ಕ್ರೀಡೆ ಮುಂತಾದ ಜನಪ್ರಿಯ ಕ್ಷೇತ್ರಗಳಿಂದ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. 

ಬರೊಬ್ಬರಿ 100 ದಿನ ನಡೆಯುವ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ವಿಜೇತರಿಗೆ 50 ಲಕ್ಷ ರೂ. ಬಹುಮಾನ ಸಿಗಲಿದೆ. ಸ್ಪರ್ಧಿಗಳ‌ ವಿವರದ ಜೊತೆಗೆ ಈ ಸಲದ ಬಿಗ್​ಬಾಸ್ ಮನೆ ಯಾವ ರೀತಿ ಇದೆ? ನಿಯಮಗಳು ಹೇಗಿವೆ? ಎಂಬುದು ಕೂಡ  ಉದ್ಘಾಟನಾ ಕಾರ್ಯಕ್ರಮದಲ್ಲಿ ಗೊತ್ತಾಗಲಿದೆ. ಕಲರ್ಸ್ ಕನ್ನಡ ವಾಹಿನಿ ಸಕಲ ರೀತಿಯಲ್ಲೂ ಸಜ್ಜಾಗಿದೆ.

ಈ ಬಾರಿಯ ಬಿಗ್​ಬಾಸ್ ಉದ್ಘಾಟನಾ ಕಾರ್ಯಕ್ರಮವನ್ನು ಮಲ್ಟಿಪ್ಲೆಕ್ಸ್​ಗಳಲ್ಲಿ ಬಿತ್ತರಿಸಲು ಕಲರ್ಸ್ ಕನ್ನಡ ವಾಹಿನಿ ವ್ಯವಸ್ಥೆ ಮಾಡಿಕೊಂಡಿದೆ‌. ಬೆಂಗಳೂರಿನ ಮಂತ್ರಿ ಸ್ಕ್ವೇರ್, ಜೆಪಿ ನಗರದ ಸೆಂಟ್ರಲ್, ಜಯನಗರದ ಗರುಡ ಮಾಲ್, ಮೈಸೂರಿನ ಮಾಲ್ ಆಫ್ ಮೈಸೂರು, ಬೆಳಗಾವಿ  ಮಾಲ್, ಉಡುಪಿ ಮಣಿಪಾಲದ ಸೆಂಟ್ರೆಲ್ ಸಿನಿಮಾಸ್​ನಲ್ಲಿ ಸಂಜೆ 6ಕ್ಕೆ ಬಿಗ್​ಬಾಸ್ ಎಪಿಸೋಡ್ ನೇರಪ್ರಸಾರ ಇರುತ್ತದೆ.

Trending News