BBK 10: ಬಿಗ್‌ ಬಾಸ್‌ ಮನೆಯಲ್ಲಿ ನಿಜವಾದ ಸಿಂಹಿಣಿ ಯಾರು?

Bigg Boss Kannada 10: ಬಿಗ್‌ ಬಾಸ್‌ ಮನೆ ದಿನದಿಂದ ದಿನಕ್ಕೆ ರಣರಂಗವಾಗುತ್ತಿದೆ. ಟಾಸ್ಕ್‌ ಅಂತಾ ಬಂದಾಗ ಸಂಗೀತಾ, ನಮ್ರತಾ, ತನಿಷಾ ಈ ಮೂವರು ನಾರಿಯರು ಭಾರೀ ಸ್ಟ್ರಾಂಗ್‌ ಅನ್ನೋದು ವೀಕ್ಷಕರ ಅಭಿಪ್ರಾಯ ಹಾಗಾದರೇ ಬಿಗ್‌ ಬಾಸ್‌ ಮನೆಯ ನಿಜವಾದ ಸಿಂಹಿಣಿ ಯಾರು? 

Written by - Savita M B | Last Updated : Nov 3, 2023, 09:00 AM IST
  • ಬಿಗ್‌ ಮನೆ ವಾತಾವರಣ ಸದ್ಯಕ್ಕಂತೂ ಹದಗೆಟ್ಟು ಹೋಗಿದೆ.
  • ವಿನಯ್‌ ನಮ್ರತಾ ಗ್ರೂಪಿಸಂ.. ನಾಮಿನೇಷನ್‌ ವಿಚಾರಕ್ಕೆ ಪರೋಕ್ಷವಾಗಿ ಇನ್‌ಫ್ಲುಯೆನ್ಸ್ ಮಾಡುವುದು.
  • ಬಿಗ್‌ ಬಾಸ್‌ ಮನೆಯಲ್ಲಿ ನಿಜವಾದ ಸಿಂಹಿಣಿ ಯಾರಾಗಿರಬಹುದು?
BBK 10: ಬಿಗ್‌ ಬಾಸ್‌ ಮನೆಯಲ್ಲಿ ನಿಜವಾದ ಸಿಂಹಿಣಿ ಯಾರು? title=

Bigg Boss Kannada 10 Week 4: ಬಿಗ್‌ ಮನೆ ವಾತಾವರಣ ಸದ್ಯಕ್ಕಂತೂ ಹದಗೆಟ್ಟು ಹೋಗಿದೆ. ವಿನಯ್‌ ನಮ್ರತಾ ಗ್ರೂಪಿಸಂ.. ನಾಮಿನೇಷನ್‌ ವಿಚಾರಕ್ಕೆ ಪರೋಕ್ಷವಾಗಿ ಇನ್‌ಫ್ಲುಯೆನ್ಸ್ ಮಾಡುವುದು. ಹೀಗೆ ರೂಲ್ಸ್‌ ಬ್ರೇಕ್‌ ಆಗುತ್ತಿರುವುದನ್ನು ಸಂಗೀತಾ ಪ್ರಶ್ನೆ ಮಾಡಿದ್ದಾರೆ. ಆದರೆ ವಿನಯ್‌ ಅವರಿಗೆ ಅವಾಚ್ಯ ಶಬ್ದಗಳಿಂದ ಮಾತನಾಡಿದ್ದಾರೆ.. 

ಇನ್ನು ಇತ್ತೀಚೆಗೆ ನಟಿ ಕಾವ್ಯಾ ಶಾಸ್ತ್ರೀ ಸಹ ಬಿಗ್‌ ಬಾಸ್‌ ಮನೆಮಂದಿಯ ಕುರಿತಾಗಿ " ಈ ಸಲದ ಬಿಗ್‌ ಬಾಸ್‌ ನಿಜಕ್ಕೂ ಬೇಸರ ತಂದಿದೆ.. ಶೋ ನಲ್ಲಿ ಉಳಿಯೋ ಭರದಲ್ಲಿ ಅವಾಚ್ಯ ಶಬ್ಧಗಳಲ್ಲಿ ನಿಂದನೆ, ಚಾರಿತ್ರ್ಯ ವಧೆ, ಹೆಣ್ಣುಮಕ್ಕಳ ಮೇಲೆ ಏಕವಚನದ ಬಳಕೆ, ಮಾನಸಿಕವಾಗಿ ಇತರರನ್ನು ಕುಗ್ಗಿಸುವ ಪ್ರಯತ್ನ, ಜೋರು ಧ್ವನಿಯಲ್ಲಿ ಗದರುವುದು., ಹೆಸರಿಸುವುದು ಇವೆಲ್ಲವೂ ಹೆಚ್ಚಾಗಿದೆ. ಚಿಕ್ಕಮಕ್ಕಳಿರುವ ತಂದೆ-ತಾಯಂದಿರು ದಯವಿಟ್ಟು ಇಂತಹ ಕಾರ್ಯಕ್ರಮಗಳನ್ನು ಮಕ್ಕಳ ಎದುರು ನೋಡದಿರಿ. ಇದು ನಿಮ್ಮ ಮಗುವಿನ ಮನಸ್ಸಿನ ಮೇಲೆ ಪ್ರಭಾವ ಬೀರಬಹುದು." ಈ ರೀತಿ ಬರೆದುಕೊಂಡು ಬೇಸರ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ-BBK 10: ‘ಬಿಗ್ ಬಾಸ್’ ಮನೆಯಲ್ಲಿ ನಮ್ರತಾ ಗ್ರೂಪಿಸಂ.. ನಾಮಿನೇಷನ್‌ನಲ್ಲಿ ವಿನಯ್‌ ಫಿಕ್ಸಿಂಗ್ ಗೇಮ್!

ಬಿಗ್‌ ಬಾಸ್‌ ಮನೆಯಲ್ಲಿ ಹೆಚ್ಚು ಹೆಚ್ಚು ಅನುಚಿತ ಪದಗಳನ್ನು ಬಳಕೆ ಮಾಡುತ್ತಿರೋದು ಹಾಗೂ ಗ್ರೂಪಿಸಂ ಮಾಡುವುದರ ಕುರಿತಾಗಿ ವೀಕ್ಷಕರು ಸಹ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನಮ್ರತಾ ಹಾಗೂ ವಿನಯ್‌ ಗೆದ್ದು ಬೀಗಿದ ನಂತರ ಆಡಿದ ಮಾತುಗಳು ನೇರವಾಗಿ ಎದುರಾಳಿ ತಂಡವನ್ನು ಕೆಣಕುತ್ತಿವೆ. 

ಹೌದು ಈ ವಾರದ ಟಾಸ್ಕ್‌ನ್ನು ನಾವು ಗಮನಿಸಿದಾಗ ಅಲ್ಲಿ ವಿನಯ್‌ ಏರು ಧ್ವನಿಯಿಂದ ಮಾತನಾಡಿದ್ದಕ್ಕೆ ಸಂಗೀತಾ ಸಿಂಹಿಣಿ ಅವತಾರ ತಾಳಿದ್ದು, ಆದರೆ ನಮ್ರತಾ ಇದರ ಮಧ್ಯ ಬಂದು ತಾನು ಹೈಲೈಟ್‌ ಆಗಲು ನೋಡಿದ್ದು.. ಇದಾದ ಮೇಲೆ ತನಿಷಾ ವಿನಯ್‌ ಶಬ್ಧಗಳಿಗೆ ತಿರುಗೇಟು ನೀಡಿದ್ದು.. ಇದೆಲ್ಲವನ್ನು ನೋಡಿದರೇ ಇಲ್ಲಿ ಯಾರು ಫಿಕ್ಸಿಂಗ್‌ ಗೇಮ್‌ ಆಡುತ್ತಿದ್ದಾರೆ.. ಗ್ರೂಪಿಸಂ ಮಾಡುತ್ತಿದ್ದಾರೆ ಅನ್ನೋದಕ್ಕೆ ಕ್ಲಿಯರ್‌ ಚಿತ್ರಣ ಸಿಕ್ಕೆ ಬಿಡುತ್ತೇ. ಆದರೆ ಸದ್ಯ ಬಿಗ್‌ ಬಾಸ್‌ ಮನೆಯಲ್ಲಿ ನಿಜವಾದ ಸಿಂಹಿಣಿ ಯಾರಾಗಿರಬಹುದು?  

ಇದನ್ನೂ ಓದಿ-ಕಿಂಗ್ ಖಾನ್ ಜನ್ಮದಿನಕ್ಕೆ ಬಂತು ‘ಡಂಕಿ’ ಟೀಸರ್…ಹೇಗಿದೆ ರಾಜ್ ಕುಮಾರ್ ಹಿರಾನಿ ಹಾಗೂ ಶಾರುಖ್ ಕಾಂಬೋದ ಮೊದಲ ಝಲಕ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News