BBK10: ಬೆಸೆದುಕೊಂಡಿದ್ದ ಬಾಂಧವ್ಯವೆಲ್ಲ ಬೆಂಕಿಗೆ.. ಸ್ಪರ್ಧಿಗಳ ಗೆಲುವಿನ ಕಿಚ್ಚಿಗೆ ಬಲಿಯಾದೋರು ಯಾರು?

Bigg Boss Kannada 10: ಸಂಕ್ರಾಂತಿ ಸಂಭ್ರಮಕ್ಕೆ ನೋ ಎಲಿಮಿನೇಷನ್‌ ಸಿಹಿ ಕೊಟ್ಟಿರುವ ಬಿಗ್‌ಬಾಸ್‌, ಹೊಸ ವಾರಕ್ಕೆ ಸ್ಪರ್ಧಿಗಳಿಗೆ ಹೊಸ ಹೊಸ ಟಾಸ್ಕ್‌ಗಳನ್ನು ನೀಡುತ್ತಿದ್ದಾರೆ. ಸದಸ್ಯರ ನಡುವಿನ ಸ್ಪರ್ಧೆಯ ತುರುಸನ್ನು ಹೆಚ್ಚಿಸುವ ಬೆಂಕಿ ಚಟುವಟಿಕೆಯೊಂದು ಮನೆಯೊಳಗೆ ನಡೆದಿದೆ. ಸದ್ಯ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಅದರ ಝಲಕ್ ಜಾಹೀರಾಗಿದೆ.

Written by - Savita M B | Last Updated : Jan 15, 2024, 11:49 AM IST
  • ‘ಈ ವಾರದ ನಾಮಿನೇಷನ್‌ನಲ್ಲಿ ನಿಮ್ಮೊಳಗಿರುವ ಗೆಲುವಿನ ಕಿಚ್ಚಿಗೆ ಇಬ್ಬರುಸದಸ್ಯರು ಬಲಿಯಾಗಬೇಕು’
  • ಎದುರಿಗೆ ಧಗದಹಿಸಿ ಉರಿಯುತ್ತಿರುವ ಬೆಂಕಿಗೆ ತಾವು ಇಚ್ಛಿಸಿರುವ ಇಬ್ಬರು ಸದಸ್ಯರ ಫೊಟೊಗಳನ್ನು ಹಾಕಬೇಕು.
  • ಮನೆಯೊಳಗೇ ರೂಪುಗೊಂಡಿರುವ ಬಾಂಧವ್ಯವೆಲ್ಲವೂ ಈ ಬೆಂಕಿಯಲ್ಲಿ ಹಾದು ಬಣ್ಣ ಬದಲಿಸಿಕೊಳ್ಳುತ್ತಿವೆ.
BBK10: ಬೆಸೆದುಕೊಂಡಿದ್ದ ಬಾಂಧವ್ಯವೆಲ್ಲ ಬೆಂಕಿಗೆ.. ಸ್ಪರ್ಧಿಗಳ ಗೆಲುವಿನ ಕಿಚ್ಚಿಗೆ ಬಲಿಯಾದೋರು ಯಾರು? title=

BBK10: ‘ಈ ವಾರದ ನಾಮಿನೇಷನ್‌ನಲ್ಲಿ ನಿಮ್ಮೊಳಗಿರುವ ಗೆಲುವಿನ ಕಿಚ್ಚಿಗೆ ಇಬ್ಬರುಸದಸ್ಯರು ಬಲಿಯಾಗಬೇಕು’ ಎಂದು ಹೇಳಿದ್ದಾರೆ. ಎದುರಿಗೆ ಧಗದಹಿಸಿ ಉರಿಯುತ್ತಿರುವ ಬೆಂಕಿಗೆ ತಾವು ಇಚ್ಛಿಸಿರುವ ಇಬ್ಬರು ಸದಸ್ಯರ ಫೊಟೊಗಳನ್ನು ಹಾಕಬೇಕು. ಮನೆಯೊಳಗೇ ರೂಪುಗೊಂಡಿರುವ ಬಾಂಧವ್ಯವೆಲ್ಲವೂ ಈ ಬೆಂಕಿಯಲ್ಲಿ ಹಾದು ಬಣ್ಣ ಬದಲಿಸಿಕೊಳ್ಳುತ್ತಿವೆ. 

ಕೆಲವು ಉರಿದು ಬೂದಿಯಾಗುತ್ತಿವೆ. ಕೆಲವು ಕರಕಲಾಗುತ್ತಿವೆ. ಯಾವುದಾದರೂ ಬೆಂಕಿಯಲ್ಲಿ ಬೆಂದು ಅಪ್ಪಟ ಚಿನ್ನವಾಗಿ ಹೊರಬರಲಿವೆಯೇ ಎಂದು ಕಾದು ನೋಡಬೇಕಿದೆ. ಸಂಗೀತಾ, ಪ್ರತಾಪ್ ಅವರ ಫೋಟೊವನ್ನು ಬೆಂಕಿಗೆ ಎಸೆದಿದ್ದಾರೆ. ‘ನಾನು ಇದುವರೆಗೆ ನೋಡಿರುವ ಪ್ರತಾಪ್ ಬೇರೆಯೇ, ಈಗ ನೋಡ್ತಿರೋ ಪ್ರತಾಪ್ ಬೇರೆಯೇ. ಹಾಗಾಗಿ ಅವರನ್ನು ನಾಮಿನೇಟ್ ಮಾಡುತ್ತೇನೆ’ ಎಂದು ಸಂಗೀತಾ ವಿವರಣೆ ನೀಡಿದ್ದಾರೆ. ತುಕಾಲಿ ಸಂತೋಷ್ ಮತ್ತು ತನಿಷಾ ಇಬ್ಬರೂ ಕಾರ್ತಿಕ್ ಅವರನ್ನು ನಾಮಿನೇಟ್ ಮಾಡಿದ್ದಾರೆ. 

ಇದನ್ನೂ ಓದಿ-ಕಳೆದ ಹತ್ತು ವರ್ಷಗಳಲ್ಲಿ ಕೇವಲ ಆರು ಚಿತ್ರಗಳನ್ನು ಮಾಡಿದ ಸ್ಟಾರ್‌ ನಟ.. ಗಳಿಸಿದ್ದು ಮಾತ್ರ 622 ಕೋಟಿ!

ತನಿಷಾ, ಪ್ರತಾಪ್ ಫೋಟೊವನ್ನು ಹರಿದು ಬೆಂಕಿಗೆ ಎಸೆದಿದ್ದಾರೆ. ಜೊತೆಗೆ, ‘ಹೇಳುವಂಥ ಮಾತು ಉಳಿಸಿಕೊಳ್ಳಕ್ಕಾಗಲ್ಲ. ಹಾರ್ಟಿಗೆ ಚುಚ್ಚಿದ್ರೆ ನಾನು ಡೈರೆಕ್ಟ್ ಬೆಂಕಿಗೇ ಹಾಕ್ತೀನಿ. ಸುಟ್ಟು ಪುಡಿಪುಡಿಯಾಗಿ, ಬೂದಿನೂ ಸಿಗದಿರುವಷ್ಟು ಕ್ರೂರ ಆಗಿಬಿಡ್ತೀನಿ’ ಎಂದು ಖಡಕ್ಕಾಗಿ ಹೇಳಿದ್ದಾರೆ. 

ಬಿಗ್‌ಬಾಸ್‌ ಷೋ ಅಂತಿಮ ಹಂತದಲ್ಲಿನ ಈ ಸಂದರ್ಭದಲ್ಲಿ ಮನೆಯೊಳಗಿನ ಸದಸ್ಯರ ನಡುವಿನ ಸ್ಪರ್ಧೆಯೂ ಅಷ್ಟೇ ತುರುಸಿನದಾಗಿರುತ್ತದೆ. ಕಳೆದ ವಾರ ಬೆಸ್ಟ್ ಪರ್ಫಾರ್ಮೆನ್ಸ್ ನೀಡಿದ್ದ ಸ್ಪರ್ಧಿಗಳೆಲ್ಲ ಈ ವಾರ ಅದನ್ನು ಮುಂದುವರಿಸುತ್ತಾರಾ? ಕಾದು ನೋಡಬೇಕು. 
ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು ಮತ್ತು ಎಪಿಸೋಡ್‌ಗಳನ್ನು JioCinemaದಲ್ಲಿ ಉಚಿತವಾಗಿ ನೋಡಿ.

ಇದನ್ನೂ ಓದಿ-ಲುಂಗಿ ಬೀಸುತ್ತಾ, ಫುಲ್ ಸೌತ್ ಫೀಲ್ ಕೊಟ್ಟು, ಫಸ್ಟ್ ಲುಕ್ ನಲ್ಲಿ ರಾಜಾ ಸಾಬ್ ಆಗಿ ಬಂದ ಪ್ರಭಾಸ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News