BBKS10: ಮುಂದಿನವಾರ ಮನೆಯಿಂದ ಹೊರಬರೋದು ಇವರೇ! ರಕ್ಷಕ್ ಬುಲೆಟ್ ವಾಕ್‌ಬಾಣ ಯಾರತ್ತ?

Rakshak Bullet: ಈ ವಾರ ಬಿಗ್‌ ಬಾಸ್‌ ಮನೆಯಿಂದ ಹೊರ ಬಂದ ರಕ್ಷಕ್‌ ಬುಲೆಟ್‌ ಮುಂದಿನ ವಾರ ತಮ್ಮ ಜಾಗದಲ್ಲಿ ಯಾವ ಸ್ಪರ್ಧಿ ಇರಬಹುದು ಎಂಬುದನ್ನು ಬಹಿರಂಗವಾಗಿ ತಿಳಿಸಿದ್ದಾರೆ.   

Written by - Savita M B | Last Updated : Nov 7, 2023, 03:16 PM IST
  • ಬಿಗ್‌ ಬಾಸ್‌ ಮನೆಯಿಂದ ಈ ವಾರ ಎಲಿಮಿನೇಟ್‌ ಆದ ಸ್ಪರ್ಧಿ ರಕ್ಷಕ್ ಬುಲೆಟ್
  • ಇದೀಗ ರಕ್ಷಕ್‌ ಸ್ಪರ್ಧಿಗಳ ಕುರಿತಾಗಿ ಮನಬಿಚ್ಚಿ ಮಾತನಾಡಿದ್ದಾರೆ
  • ರಕ್ಷಕ್‌ ಬುಲೆಟ್‌ ಸ್ಥಾನದಲ್ಲಿ ಮುಂದಿನ ವಾರ ಇರೋದು ಯಾರು?
BBKS10: ಮುಂದಿನವಾರ ಮನೆಯಿಂದ ಹೊರಬರೋದು ಇವರೇ! ರಕ್ಷಕ್ ಬುಲೆಟ್ ವಾಕ್‌ಬಾಣ ಯಾರತ್ತ?  title=

Bigg Boss Kannada: ಬಿಗ್‌ ಬಾಸ್‌ ಮನೆಯಿಂದ ಈ ವಾರ ಎಲಿಮಿನೇಟ್‌ ಆದ ಸ್ಪರ್ಧಿ ರಕ್ಷಕ್ ಬುಲೆಟ್. ಇವರು ದೊಡ್ಮನೆಯಲ್ಲಿ ಅನುಭವ, ಸ್ಪರ್ಧಿಗಳ ಕುರಿತಾದ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. 

ಮೊದಲು ರಕ್ಷಕ್‌ ಬುಲೆಟ್‌ ಟಾಸ್ಕ್​ ಬಗ್ಗೆ ಮಾತನಾಡಿದರು "ಫನ್‌ ಫ್ರೈಡೆನಲ್ಲಿ ಮ್ಯೂಸಿಕಲ್ ಪಾಟ್‌ ಟಾಸ್ಕ್‌ ಸಖತ್ ಮಜಾ ನೀಡಿತ್ತು.  ಫನ್‌ ಫ್ರೈಡೆ ಅಂದ್ರೇ ಮಜವಾಗಿರೋ ಚುಟುವಟಿಕೆ. ಆದರೆ ಅದನ್ನೂ ಕೆಲವರು ಹೆಚ್ಚು ಗಂಭೀರವಾಗೇ ಆಡುತ್ತಾರೆ. ದ್ರೆ ಮಜವಾಗಿ ಆಡುವ ಆಟವನ್ನು ಮಜವಾಗಿಯೇ ಆಡಬೇಕು.. ಎಂಜಾಯ್‌ ಮಾಡುವ ಸಮಯವನ್ನು ಎಂಜಾಯ್‌ ಮಾಡಬೇಕು" ಎಂದಿದ್ದಾರೆ.

ಇದನ್ನೂ ಓದಿ-Anushka Shetty: ಅನುಷ್ಕಾ ಜೀವನದಲ್ಲಿ ಅಫೇರ್ ರೂಮರ್ಸ್..! ಸ್ವೀಟಿಗೂ ಆ ಹೀರೋಗಳಿಗೂ ಏನು ಸಂಬಂಧ?

ಮುಂದುವರೆದು ಮಾತನಾಡಿದ ರಕ್ಷಕ್‌ .." ಸ್ಪರ್ಧಿಗಳಲ್ಲಿ ಜೆನ್ಯೂನ್ ಅಂದ್ರೆ ನಮ್ರತಾ ಗೌಡ.. ಸ್ಟ್ರಾಟರ್ಜಿ ಅಂತ ಬಂದ್ರೆ ವಿನಯ್ ಅವ್ರು... ಫೇಕ್‌ ಅಂತ ಹೇಳೋಕಾಗಲ್ಲ.. ಆದರೆ ತಮಗೆ ಬೇಡದೇ ಇರೋ ವಿಷಯಕ್ಕೆ ನಾಟಕ ಮಾಡ್ತಾರೆ ಭಾಗ್ಯಶ್ರೀ. ಅಳೋದು ಒಂದೇ ಅಲ್ಲ ಜೀವನದಲ್ಲಿ .. ಅದನ್ನು ಗಟ್ಟಿಯಾಗಿ ನಿಂತು ಎದುರಿಸಬೇಕು.,, ಬಿಗ್‌ ಬಾಸ್ ಮನೆಯಲ್ಲಿ ಸತ್ಯವನ್ನು ಮುಖಕ್ಕೆ ಹೊಡೆದ ಹಾಗೆ ಹೇಳೋರು ವಿನಯ್. ಮತ್ತೆ ಫೈನಲ್‌ನಲ್ಲಿ ನಮ್ರತಾ ಗೌಡ ಇರಲೇಬೇಕು. ಜೊತೆಗೆ  ಕಾರ್ತಿಕ್ ಬರಬಹುದೇನೋ, ಆದರೆ ನಮ್ರತಾ ವಿನ್ನರ್ ಆಗಬೇಕು" ಎದು ಹೇಳಿದ್ದಾರೆ.. 

ಇನ್ನು ಈ ವಾರ ಕಡಿಮೆ ಪರ್ಫಾರ್ಮೆನ್ಸ್‌ ಕೊಟ್ಟಿದ್ದು ಪ್ರತಾಪ್‌.. ಮೇ ಬಿ ಅವರೇ ಮುಂದಿನ ವಾರ ನನ್ನ ಜಾಗದಲ್ಲಿ ಇರಬಹುದು ಅಂದ್ಕೊಂಡಿದೀನಿ. ಮತ್ತೆ ನಾನು ಒಬ್ಬರ ಜೊತೆ ಒಳ್ಳೆ ಬಾಂಡಿಂಗ್‌ ಶುರು ಮಾಡಿದ್ರೆ ಅದನ್ನು ಬ್ರೇಕ್ ಮಾಡೋಕೆ ಇಷ್ಟಪಡಲ್ಲ.. ತಪ್ಪಾಗಿದ್ರೆ ನಾನು ಸಾರಿ ಕೇಳುತ್ತಿನಿ.. ತಪ್ಪಾಗಿಲ್ಲದಿದ್ರೆ ನಾನು ತಲೆಕೆಡಿಸಿಕೊಳ್ಳಲ್ಲ" ಎಂದರು.

ಇದನ್ನೂ ಓದಿ-ನಟ ಡಾಲಿ ಧನಂಜಯ್‌ ನೋಡಲು ಮುಗಿಬಿದ್ದ ಅಭಿಮಾನಿಗಳು
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News