BBK10 ಡಬಲ್ ಎಲಿಮಿನೇಷನ್: ಇಶಾನಿ ಬಳಿಕ ನಿನ್ನೆ ಹೊರಹೋಗಿದ್ಯಾರು?

Bigg Boss Elimination : ತಮ್ಮ ಹೆಸರಿನಲ್ಲಿಯೇ ಭಾಗ್ಯವನ್ನು ಇರಿಸಿಕೊಂಡಿರುವ ಭಾಗ್ಯಶ್ರೀ ಅವರಿಗೆ ಬಿಗ್‌ಬಾಸ್‌ ಮನೆಯೊಳಗೂ ಅನೇಕ ಸಲ ಭಾಗ್ಯವೇ ಕೈ ಹಿಡಿದಿತ್ತು.   

Written by - Chetana Devarmani | Last Updated : Nov 20, 2023, 08:00 AM IST
  • ಬಿಗ್‌ ಬಾಸ್‌ ಡಬಲ್ ಎಲಿಮಿನೇಷನ್
  • ಭಾನುವಾರ ಭಾಗ್ಯಶ್ರೀ ಎಲಿಮಿನೇಟ್
  • ಶನಿವಾರ ಔಟ್‌ ಆಗಿದ್ದ ಇಶಾನಿ
BBK10 ಡಬಲ್ ಎಲಿಮಿನೇಷನ್: ಇಶಾನಿ ಬಳಿಕ ನಿನ್ನೆ ಹೊರಹೋಗಿದ್ಯಾರು? title=
BiggBoss

Bhagyashree eliminated : ಬಿಗ್‌ಬಾಸ್‌ ಸೀಸನ್‌ 10ನಲ್ಲಿ ಭಾಗ್ಯಶ್ರೀ ಅವರ ಪಯಣ ಇಂದು ಕೊನೆಗೊಂಡಿದೆ. ಇಂದಿನ ಸುದೀಪ್ ಜೊತೆಗಿನ ಸೂಪರ್ ಸಂಡೆಯ ಎಪಿಸೋಡ್‌ನಲ್ಲಿ ಕಿಚ್ಚ, ಭಾಗ್ಯಶ್ರೀ ಬಿಗ್‌ಬಾಸ್‌ ಮನೆಯಿಂದ ಹೊರಬೀಳುತ್ತಿರುವ ವಿಷಯವನ್ನು ಘೋಷಿಸಿದರು.

ತಮ್ಮ ಹೆಸರಿನಲ್ಲಿಯೇ ಭಾಗ್ಯವನ್ನು ಇರಿಸಿಕೊಂಡಿರುವ ಭಾಗ್ಯಶ್ರೀ ಅವರಿಗೆ ಬಿಗ್‌ಬಾಸ್‌ ಮನೆಯೊಳಗೂ ಅನೇಕ ಸಲ ಭಾಗ್ಯವೇ ಕೈ ಹಿಡಿದಿತ್ತು. ಮಾತು ಮಾತಿಗೂ ಕಣ್ಣೀರು ಸುರಿಸುವ ಅವರ ಸ್ವಭಾವದಿಂದ ಅಳುಮುಂಜಿಯಾಗಿ ಬಿಂಬಿತವಾಗಿದ್ದರೂ, ಅವರು ಇಷ್ಟು ವಾರಗಳ ಕಾಲ ಬಿಗ್‌ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದರು. 

ಹಾಗೆ ನೋಡಿದರೆ ಎರಡು ವಾರಗಳ ಹಿಂದೆಯೇ ಅವರು ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗಬೇಕಾಗಿತ್ತು. ಸುದೀಪ್‌ ಅವರು, ಭಾಗ್ಯಶ್ರೀ ಎಲಿಮಿನೇಟ್ ಆಗಿರುವ ಸಂಗತಿಯನ್ನು ಘೋಷಿಸಿದ್ದರು ಕೂಡ. ಆದರೆ ಬಿಗ್‌ಬಾಸ್ ಮನೆಯ ಬಾಗಿಲು ತೆರೆದಿರಲಿಲ್ಲ. ಆ ವಾರ ಹಬ್ಬದ ಕಾರಣಕ್ಕಾಗಿ ಯಾರನ್ನೂ ಎಲಿಮಿನೇಟ್ ಮಾಡದೇ ಉಳಿಸಿಕೊಂಡಿದ್ದರು ಬಿಗ್‌ಬಾಸ್. 

ಇದನ್ನೂ ಓದಿ : ವಿಜಯ್ - ರಶ್ಮಿಕಾ ಲವ್ ಸ್ಟೋರಿ ರಿವೀಲ್.! ಶೀಘ್ರದಲ್ಲೇ ಮದುವೆಯಾಗೋದು ಪಕ್ಕಾ? 

ಅದರ ಮುಂದಿನ ವಾರ ಪ್ರತಾಪ್‌ ಅವರು ಭಾಗ್ಯಶ್ರೀಯನ್ನು ನಾಮಿನೇಷನ್‌ ಪಟ್ಟಿಯಿಂದಲೇ ಪಾರುಮಾಡಿದ್ದರು. ಅದಾದ ಮೇಲೆ, ವರ್ತೂರು ಸಂತೋಷ್‌ ಅವರ ಕಾರಣದಿಂದ ಇನ್ನೊಂದು ವಾರ ಎಲಿಮಿನೇಷನ್‌ ನಡೆದಿರಲಿಲ್ಲ. 

ಈ ವಾರ ಡಬಲ್‌ ಎಲಿಮಿನೇಷನ್‌ನೊಂದಿಗೆ ಕಿಚ್ಚ ವೀಕೆಂಡ್ ಎಪಿಸೋಡಿಗೆ ಬಂದಿದ್ದರು. ಅದರ ಪ್ರಕಾರ ಶನಿವಾರದ ಪಂಚಾಯ್ತಿಯಲ್ಲಿ ಇಶಾನಿ ಅವರು ಎಲಿಮಿನೇಟ್ ಆಗಿದ್ದರು. ಇಂದು ಭಾಗ್ಯಶ್ರೀ ಮನೆಯಿಂದ ಹೊರಗೆ ಹೋಗುತ್ತಿರುವ ವಿಷಯವನ್ನು ಸುದೀಪ್ ಪ್ರಕಟಪಡಿಸಿದರು. 

ಮುಂದಿನ ವಾರ ಇಶಾನಿ ಮತ್ತು ಭಾಗ್ಯಶ್ರೀ ಅನುಪಸ್ಥಿತಿಯಲ್ಲಿ ಬಿಗ್‌ಬಾಸ್‌ ಸ್ಪರ್ಧಿಗಳು ಮನೆಯಲ್ಲಿ ಮುಂದುವರಿಯಲಿದ್ದಾರೆ. ಮನೆಯ ಸದಸ್ಯರ ಪೈಕಿ ಇಬ್ಬರು ಕಡಿಮೆಯಾಗಿರುವುದು ಸ್ಪರ್ಧೆಯನ್ನು ಇನ್ನಷ್ಟು ಚುರುಕುಗೊಳಿಸಿದೆ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ.
ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಿ.

ಇದನ್ನೂ ಓದಿ : BBK 10 : ಡಬಲ್ ಎಲಿಮಿನೇಷನ್..‌ ನಿನ್ನೆ ಇಶಾನಿ ಔಟ್‌, ಇಂದು ಹೊರ ಬರ್ತಾರಾ ಈ ಸ್ಪರ್ಧಿ? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News