ಪ್ರತಾಪ್‌ ಒಳ್ಳೆತನಕ್ಕೆ ಮನಸೋತ್ರಾ ಸಂಗೀತಾ ಶೃಂಗೇರಿ..! ಇನ್ಮುಂದೆ ಲವ್‌ ಪ್ರಪಂಚದಲ್ಲಿ ಹಾರುತ್ತಂತೆ ಡ್ರೋನ್‌

Sangeetha Proposal To Drone Prathap : ಸಂಗೀತಾ ಶೃಂಗೇರಿ ಅಂತೂ ಡ್ರೋನ್‌ ಬಗ್ಗೆ ಯಾವಾಗ್ಲೂ ಒಳ್ಳೆಯದನ್ನೇ ಮಾತನಾಡುತ್ತಾ ಬಂದಿದ್ದಾರೆ. ಕಾರ್ತೀಕ್‌ ಬಗ್ಗೆ ಹೆಚ್ಚು ಹೇಳ್ತಾರೆ ಇಲ್ಲವೋ ಗೊತ್ತಿಲ್ಲ, ಆದ್ರೆ ಪ್ರತಾಪ್‌ ಹಾಗೂ ಅವನ ಮನಸ್ಸಿನ ಬಗ್ಗೆ ತುಂಬಾ ತಿಳಿದುಕೊಂಡಿದ್ದಾರೆ. 

Written by - Krishna N K | Last Updated : Nov 17, 2023, 06:31 PM IST
  • ಸಂಗೀತಾ ಶೃಂಗೇರಿ ಡ್ರೋನ್‌ ಪ್ರತಾಪ್‌ ಬಗ್ಗೆ ಯಾವಾಗ್ಲೂ ಒಳ್ಳೆಯದನ್ನೇ ಮಾತನಾಡುತ್ತಾರೆ.
  • ಕಾರ್ತೀಕ್‌ ಬಗ್ಗೆ ಹೆಚ್ಚು ಹೇಳ್ತಾರೆ ಇಲ್ಲವೋ ಗೊತ್ತಿಲ್ಲ, ಆದ್ರೆ ಪ್ರತಾಪ್‌ ಮನಸ್ಸನ್ನು ಅರ್ಥ ಮಾಡಿಕೊಂಡಿದ್ದಾರೆ.
  • ಮೊನ್ನೆ ಮೊನ್ನೆ ಪ್ರತಾಪ್‌ಗೆ ಬೇರೆ ಸಂಗೀತಾ ಪ್ರಪೋಸ್‌ ಮಾಡಿದ್ದು, ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ.
ಪ್ರತಾಪ್‌ ಒಳ್ಳೆತನಕ್ಕೆ ಮನಸೋತ್ರಾ ಸಂಗೀತಾ ಶೃಂಗೇರಿ..! ಇನ್ಮುಂದೆ ಲವ್‌ ಪ್ರಪಂಚದಲ್ಲಿ ಹಾರುತ್ತಂತೆ ಡ್ರೋನ್‌ title=
Bigg boss kannada 10

Bigg Boss Kannada 10 : ಬಿಗ್ ಬಾಸ್ ಮನೆಯಲ್ಲಿ ಏನಾಗ್ತಿದೆ ಅಂತ ತಿಳಿದುಕೊಳ್ಳುವ ಮೊದಲು, ಪಾಪ ಕಾರ್ತಿಕ್ ಮಹೇಶ್ ಹೃದಯಕ್ಕಾಗಿರುವ ನೋವಿನ ಬಗ್ಗೆ ಯೋಚನೆ ಮಾಡ್ಬೇಕಿದೆ. ಇತ್ತ ಸಂಗೀತ ಕೂಡ ಅವರಿಂದ ದೂರವಾಗುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ. ಅತ್ತ ಸ್ನೇಹಿತ ವಿನಯ್‌ ಇವರಿಂದ ದೂರ. ಅಲ್ಲದೆ ಮೊನ್ನೆ ಮೊನ್ನೆ ಪ್ರತಾಪ್‌ಗೆ ಬೇರೆ ಸಂಗೀತಾ ಪ್ರಪೋಸ್‌ ಮಾಡಿದ್ದು, ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. 

ಹೌದು.. ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ನಡುವೆ ಪ್ರೀತಿ ಯಾವಾಗ ಹುಟ್ಟುತ್ತೋ, ಧ್ವೇಷ ಯಾವಾಗ ಹುಟ್ಟುತ್ತೋ.. ಅಂತ ಹೇಳೋದೆ ಕಷ್ಟವಾಗಿದೆ. ಜಸ್ಟ್‌ ಐದು ನಿಮಿಷದ ಹಿಂದೆ ಸ್ನೇಹಿತರಂತೆ ಇದ್ದವರು, ಟಾಸ್ಕ್‌ ಮುಗಿಯುವುದರೊಳಗೆ ವೈರಿಗಳಾಗಿರುತ್ತಾರೆ ಇಲ್ಲವೆ ಅಲ್ಲಿ ಹೊಸ ಸ್ನೇಹ ಹುಟ್ಟಿಕೊಂಡಿರುತ್ತವೆ.

ಇದನ್ನೂ ಓದಿ: ಯೋಗಿ ಅಭಿನಯದ "ರೋಜಿ" ಚಿತ್ರದಲ್ಲಿ ಸ್ಯಾಂಡಿ ಮಾಸ್ಟರ್ 

ಸಧ್ಯ ಇಷ್ಟು ದಿನ ಬಿಗ್‌ಬಾಸ್‌ ಮನೆಯ ಲವ್‌ ಬರ್ಡ್‌ ಅಂತಲೇ ಕರೆಯಿಸಿಕೊಳ್ಳುತ್ತಿದ್ದ ಸಂಗೀತಾ ಕಾರ್ತೀಕ್‌ ನಡುವೆ ಏನೂ ಇಲ್ಲ ಎಂಬ ವಿಚಾರ ಬಹಿರಂಗವಾಗಿದೆ. ಅಲ್ಲದೆ, ಇಬ್ಬರು ಜಸ್ಟ್‌ ಪ್ರೇಂಡ್ಸ್‌ ಅಂತ ಬೇರೆ ಸಂಗೀತ ಹೇಳಿಕೊಂಡಿದ್ದು, ಅಚ್ಚರಿ ಮೂಡಿಸಿದೆ. ಅಲ್ಲದೆ, ಇತ್ತೀಚಿಗೆ ಪ್ರತಾಪ್‌ ಸಂಗೀತಾ ಪ್ರಪೋಸ್‌ ಮಾಡಿದ್ದು, ನೆಟ್ಟಿಗರ ಹೊಸ ಕಥೆ ಸೃಷ್ಟಿಗೆ ಕಾರಣವಾಗಿದೆ.

ಯಸ್‌... ಪ್ರತಾಪ್‌, ಕಣ್ಣೀರು ಹಾಕುತ್ತ ಮನೆ ಮಂದಿಯ ಮಾತಿಗೆ ಮೂಲೆಯಲ್ಲಿ ಕುಳಿತು ಅಳುತ್ತಿದ್ದ ಸ್ಪರ್ಧಿ. ಆದ್ರೆ ಇದೀಗ ಡ್ರೋನ್‌ ವರಸೆ ಬದಲಾಗಿದೆ, ಅದ್ಭುತವಾಗಿ ಆಟವಾಡುವುದರ ಜೊತೆಗೆ ಮನೆ ಮಂದಿಗೆ ಒಳ್ಳತನದ ಪಾಠ ಬೇರೆ ಮಾಡ್ತೀದ್ದಾರೆ. ಅಷ್ಟೇ ಅಲ್ಲ, ಧ್ವೇಷ ಮಾಡಿದ ಸ್ಪರ್ಧಿಗಳು ಎಲಿಮಿನೇಷನ್‌ನಿಂದ ಸೇಫ್‌ ಮಾಡಿ ಅವರ ದೃಷ್ಟಿಯಲ್ಲಿ ಉತ್ತಮ ಹುಡುಗ ಅಂತ ಕರೆಸಿಕೊಳ್ಳುತ್ತಿದ್ದಾನೆ.

ಇದನ್ನೂ ಓದಿ: ವಾರಣಾಸಿ ಗಂಗಾ ಆರತಿಯಲ್ಲಿ ಸನ್ನಿ ಲಿಯೋನ್ ಭಾಗಿ..! ವಿಡಿಯೋ ವೈರಲ್

ಇನ್ನು ಸಂಗೀತಾ ಶೃಂಗೇರಿ ಅಂತೂ ಡ್ರೋನ್‌ ಬಗ್ಗೆ ಯಾವಾಗ್ಲೂ ಒಳ್ಳೆಯದನ್ನೇ ಮಾತನಾಡುತ್ತಾ ಬಂದಿದ್ದಾರೆ. ಕಾರ್ತೀಕ್‌ ಬಗ್ಗೆ ಹೆಚ್ಚು ಹೇಳ್ತಾರೆ ಇಲ್ಲವೋ ಗೊತ್ತಿಲ್ಲ, ಆದ್ರೆ ಪ್ರತಾಪ್‌ ಹಾಗೂ ಅವನ ಮನಸ್ಸಿನ ಬಗ್ಗೆ ತುಂಬಾ ತಿಳಿದುಕೊಂಡಿದ್ದಾರೆ. ಅಲ್ಲದೆ ಮೊನ್ನೆಯಷ್ಟೇ ಸಂಗೀತಾ ಡ್ರೋನ್‌ಗೆ ಪ್ರಪೋಸ್‌ ಮಾಡಿ ಅಚ್ಚರಿ ಮೂಡಿಸಿದ್ದರು.

ಸಂಗೀತಾ ಲವ್‌ಗೆ ಪ್ರತಾಪ್‌ ಒಪ್ಪದಿದ್ದಾಗ, ಏಕೆ ನಾನು ನಿನಗೆ ಇಷ್ಟ ಇಲ್ವಾ..? ನನ್ನ ಪ್ಯೂಚರ್ ಪತಿಯನ್ನ ನಿಮ್ಮಲ್ಲಿ ಕಾಣುತ್ತಿದ್ದೇನೆ ಎಂದು ಸಂಗೀತಾ ಹೇಳಿದ್ರು. ಆದ್ರೆ, ಪ್ರತಾಪ್‌ ಮಾತ್ರ, ನೀವು ನನ್ನ ಅಕ್ಕ ಅಂತ ಹೇಳಿಬಿಟ್ಟ. ನಿಮ್ಮನ್ನ ನೋಡಿದ ಮೇಲೆ ಕ್ರಶ್ ಆಗಿದೆ ಅಂತ ಸಂಗೀತಾ ಡ್ರೋನ್‌ ಮನ ಒಲಿಸಲು ಪ್ರಯತ್ನ ಮಾಡಿದ್ರು.  ಒಟ್ಟಾರೆಯಾಗಿ ಇದು ತಮಾಷೆಯಾಗಿರುಬಹುದು. ಆದ್ರೆ ನೆಟ್ಟಿಗರು ಎಲ್ಲೋ ಒಂದು ಕಡೆ ಇಬ್ಬರ ನಡುವೆ ಲವ್‌ ಶುರುವಾಗಬಹುದು ಅಂತ ಮಾತನಾಡಿಕೊಳ್ಳುತ್ತಿದ್ದಾರೆ. ಮುಂದೆ ಏನಾಗುತ್ತೆ ಅಂತ ಕಾಯ್ದು ನೋಡೋಣ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News