BBK10 Vinay : ಆನೆ ಅಂದಿದ್ದೇ ತಪ್ಪಾಯ್ತಾ? ಈ ದುರಹಂಕಾರಿಯನ್ನು Boycott ಮಾಡಿ.. ವಿನಯ್‌ ವರ್ತನೆಗೆ ನೆಟ್ಟಿಗರ ಆಕ್ರೋಶ!

Vinay Behaviour in Kannada Bigg Boss : ತಮ್ಮನ್ನು ಯಾರು ಪ್ರಶ್ನೆ ಮಾಡಬಾರದು ಎಂಬ ರೀತಿಯಲ್ಲಿ ವಿನಯ್‌ ವರ್ತಿಸುತ್ತಿದ್ದಾರೆ ಎಂದು ಬಿಗ್‌ ಬಾಸ್‌ ವೀಕ್ಷಕರು ಅಸಮಾಧಾನಗೊಂಡಿದ್ದಾರೆ.

Written by - Chetana Devarmani | Last Updated : Nov 1, 2023, 08:56 AM IST
  • ಬಿಗ್‌ ಬಾಸ್‌ ಕನ್ನಡ ಸೀಸನ್‌ 10
  • ಬಿಗ್‌ ಬಾಸ್‌ ಸ್ಪರ್ಧಿ ವಿನಯ್‌
  • ವಿನಯ್‌ ವರ್ತನೆಗೆ ನೆಟ್ಟಿಗರ ಆಕ್ರೋಶ!
BBK10 Vinay : ಆನೆ ಅಂದಿದ್ದೇ ತಪ್ಪಾಯ್ತಾ? ಈ ದುರಹಂಕಾರಿಯನ್ನು Boycott ಮಾಡಿ.. ವಿನಯ್‌ ವರ್ತನೆಗೆ ನೆಟ್ಟಿಗರ ಆಕ್ರೋಶ!  title=

Bigg Boss Kannada 10 : ಬಿಗ್‌ ಬಾಸ್‌ನಲ್ಲಿ ವಿನಯ್‌ ಅವರ ವರ್ತನೆ ಇದೀಗ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಮೂರು ವಾರಗಳಿಂದ ಸೂಪರ್‌ ಆಗಿ ಆಡವಾಡಿದ್ದ ವಿನಯ್‌ ಅವರಿಗೆ ಕಿಚ್ಚನ ಪಂಚಾಯ್ತಿ ವೇಳೆ ಆನೆಯ ಗಿಫ್ಟ್‌ ಸಿಕ್ಕಿತ್ತು. ಇದರಲ್ಲಿ ವಿನಯ್‌ ಅವರಿಗೆ ಯಾರೂ ಸರಿ ಸಮಾನರಲ್ಲ ಎಂದು ಬರೆದಿತ್ತು. ಇದಾದ ಬಳಿಕ ವಿನಯ್‌ ಆಟದ ವರಸೆಯೇ ಚೇಂಜ್‌ ಆಗಿದೆ.

ಮನೆ ಮಂದಿ ಮೇಲೆ ವಿನಯ್‌ ದರ್ಪ ತೋರುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ತಮ್ಮನ್ನು ಯಾರು ಪ್ರಶ್ನೆ ಮಾಡಬಾರದು ಎಂಬ ರೀತಿಯಲ್ಲಿ ವಿನಯ್‌ ವರ್ತಿಸುತ್ತಿದ್ದಾರೆ ಎಂದು ಬಿಗ್‌ ಬಾಸ್‌ ವೀಕ್ಷಕರು ಅಸಮಾಧಾನಗೊಂಡಿದ್ದಾರೆ. ಮಾತು ಮಾತಿಗೂ ಜಗಳ, ಬೇರೆಯರ ಬಗ್ಗೆ ಕೊಂಕು ಮಾತು, ಚುಚ್ಚು ಮಾತನಾಡಿ ಮತ್ತೊಬ್ಬರಿಗೆ ಹರ್ಟ್‌ ಮಾಡುತ್ತಿದ್ದಾರೆ ಎಂದು ನೆಟ್ಟಿಜನ್‌ ಆಕ್ರೋಶಗೊಂಡಿದ್ದಾರೆ. 

 

 

ಇದನ್ನೂ ಓದಿ: ಬಿಗ್‌ ಬಾಸ್‌ನಲ್ಲಿ ಅಶ್ಲೀಲವಾಗಿ ವರ್ತಿಸಿದ ಮೈಕೆಲ್, ಸಿಡಿದೆದ್ದ ನಮ್ರತಾ ಗೌಡ 

ಇನ್ನೊಂದೆಡೆ ಬಿಗ್‌ ಬಾಸ್‌ ವೀಕ್ಷಕರೆಲ್ಲರೂ ಈ ದುರಹಂಕಾರಿ ವಿನಯ್‌ ಅವರನ್ನು BoyCott ಮಾಡಬೇಕು ಎಂಬ ಪೋಸ್ಟ್‌ಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ. ಡ್ರೋನ್‌ ಪ್ರತಾಪ್‌ ಬಗ್ಗೆ ಆಡಿದ ಮಾತು, ಭಾಗ್ಯಲಕ್ಷ್ಮೀ ಅವರನ್ನು ಹೀಯಾಳಿಸಿದ ರೀತಿ ನೋಡುಗರಿಗೆ ಇಷ್ಟವಾದಂತಿಲ್ಲ. ಇದು ವಿನಯ್‌ ಅವರ ಮೇಲಿನ ಅಭಿಮಾನಕ್ಕೆ ಮುಳ್ಳಾಗುತ್ತಿದೆ.

 

 

ಇಷ್ಟು ದಿನ ಅದ್ಭುತವಾಗಿ ಆಡಿ ಮೆಚ್ಚುಗೆ ಗಳಿಸಿದ್ದ ವಿನಯ್‌, ಈ ವಾರ ಓವರ್‌ ಕಾನ್ಫಡೆನ್ಸ್‌ ಅಲ್ಲಿ ಆಡುತ್ತಿರುವಂತಿದೆ. ಅವರ ವರ್ತನೆ ದುರಹಂಕಾರದಿಂದ ಕೂಡಿದೆ ಎಂಬುದು ನೆಟ್ಟಿಗರ ಮಾತು. ವಿನಯ್‌ ಅವರ ಈ ಬದಲಾದ ವರ್ತನೆಯೇ ಅವರಿಗೆ ಮುಳುವಾಗುತ್ತಾ ಎಂಬ ಆತಂಕ ಅವರ ಅಭಿಮಾನಿಗಳನ್ನು ಕಾಡುತ್ತಿದೆ. 

ಒಟ್ಟಾರೆ ಕಳೆದ ವಾರಕ್ಕೂ ಈ ವಾರಕ್ಕೂ ವಿನಯ್‌ ಅವರ ಮೇಲಿನ ಬಿಗ್‌ ಬಾಸ್‌ ವೀಕ್ಷಕರ  ಅಭಿಪ್ರಾಯ ಬದಲಾದಂತಿದೆ ಎನ್ನಲಾಗಿದೆ. 

ಇದನ್ನೂ ಓದಿ: BBK 10: ಹಳ್ಳಿಕಾರ್ ರೀ ಎಂಟ್ರಿಯಿಂದ ಕ್ರಿಯೆಟಾಯ್ತು ಹೊಸ ಜಗತ್ತು..! ಬಿಗ್‌ಬಾಸ್ ಮನೆಯೀಗ ಹಳ್ಳಿ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News