BBK 10: "ಬಿಕ್ಷೆ ತಗೊಂಡ್‌ ಕ್ಯಾಪ್ಟನ್‌ ಆಗಿದ್ದೀಯಾ.." ಎಂದ ಸಂಗೀತಾ: ರೊಚ್ಚಿಗೆದ್ದು ಏಕವಚನದಲ್ಲಿ ಮಾತನಾಡಿದ ಸ್ನೇಹಿತ್!

Bigg Boss Kannada 10: ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಕಾರ್ಯಕ್ರಮದಲ್ಲಿ ನಿನ್ನೆ ಸ್ನೇಹಿತ್‌ ಕ್ಯಾಪ್ಟನ್ ಆದ ಬಳಿಕ ಈತ ತೆಗೊಂಡ ನಿರ್ಧಾರಗಳು ಬಯಾಸ್ಡ್‌ ಆಗಿದ್ದು, ಅದರ ವಿರುದ್ಧ ಟಾಸ್ಕ್ ವೇಳೆ ಸಂಗೀತಾ ಕೆರಳಿದರು. ಅದೇ ವೇಳೆ ಸ್ನೇಹಿತ್‌ ಹಾಗೂ ಸಂಗೀತಾ ಮಧ್ಯೆ ಏಕವಚನದಲ್ಲಿ ಜಗಳ ನಡೆಯುತ್ತಿರುವಾ ಸಂಗೀತಾ "ಭಿಕ್ಷೆ ತಗೊಂಡ್ ಕ್ಯಾಪ್ಟನ್ ಆಗಿದ್ದೀಯಾ" ಎಂದು ಸ್ನೇಹಿತ್‌ಗೆ ಚುಚ್ಚಿದರು. ಇಲ್ಲಿದೆ ಕಂಪ್ಲೀಟ್‌ ಸ್ಟೋರಿ.

Written by - Zee Kannada News Desk | Last Updated : Dec 6, 2023, 09:51 AM IST
  • ‘ಬಿಗ್‌ಬಾಸ್ ಲೋಕ’ ಎಂದೇ ಬಿಗ್‌ಬಾಸ್‌ ಘೋಷಿಸಿದ್ದು, ಈ ಕಾಲ್ಪನಿಕ ಲೋಕದಲ್ಲಿ ಸಂಗೀತಾ ತಂಡ ರಾಕ್ಷಸರಾಗಿದ್ದರೆ, ವರ್ತೂರು ಸಂತೋಷ್ ತಂಡ ಗಂಧರ್ವರಾದರು.
  • ಬಿಗ್‌ಬಾಸ್‌ ಮನೆಯಲ್ಲಿ ಕ್ಯಾಪ್ಟನ್ ಆದ್ಮೇಲಿನಿಂದ ಸ್ನೇಹಿತ್‌ ತಗೊಂಡ ನಿರ್ಧಾರಗಳು ಬಯಾಸ್ಡ್‌ ಆಗಿದ್ದು, ಅದರ ವಿರುದ್ಧ ಟಾಸ್ಕ್ ವೇಳೆ ಸಂಗೀತಾ ಸಿಡಿದೆದ್ದರು.
  • ಸ್ನೇಹಿತ್‌ ಹಾಗೂ ಸಂಗೀತಾ, ಇಬ್ಬರ ಜಗಳ ಕಂಡು ಸಿರಿ ಆ ರೀತಿ ಮಾತನಾಡಬಾರದು ಅಂತ ಇಬ್ಬರಿಗೂ ಹೇಳಿದರು.
BBK 10: "ಬಿಕ್ಷೆ ತಗೊಂಡ್‌ ಕ್ಯಾಪ್ಟನ್‌ ಆಗಿದ್ದೀಯಾ.." ಎಂದ ಸಂಗೀತಾ: ರೊಚ್ಚಿಗೆದ್ದು ಏಕವಚನದಲ್ಲಿ ಮಾತನಾಡಿದ ಸ್ನೇಹಿತ್! title=

Snehith Vs Sangeetha In BBK: ಬಿಗ್‌ಬಾಸ್‌ ಮನೆಯಲ್ಲಿ ಈ ವಾರದ ಟಾಸ್ಕ್‌  ಹೆಸರು ‘ಬಿಗ್‌ಬಾಸ್ ಲೋಕ’ ಎಂದೇ ಬಿಗ್‌ಬಾಸ್‌ ಘೋಷಿಸಿದ್ದು, ಈ ಕಾಲ್ಪನಿಕ ಲೋಕದಲ್ಲಿ ಸಂಗೀತಾ ತಂಡ ರಾಕ್ಷಸರಾಗಿದ್ದರೆ, ವರ್ತೂರು ಸಂತೋಷ್ ತಂಡ ಗಂಧರ್ವರಾದರು. ದೊಡ್ಮನೆಯ ಕ್ಯಾಪ್ಟನ್ ಸ್ನೇಹಿತ್ ಈ ಲೋಕದ ಒಡೆಯನಾಗಿದ್ದು, ಎಲ್ಲರೂ ಅವರವರ ಗುಂಪಿಗೆ ಇರುವ ನಿಯಮಗಳನ್ನು ಪಾಲಿಸುತ್ತಾ, ಅವರವರ ಪಾತ್ರಗಳಲ್ಲಿಯೇ ಇರುವಂತೆ ನೋಡಿಕೊಳ್ಳುವುದು ಈತನ ಜವಾಬ್ದಾರಿ ಆಗಿತ್ತು. ಟಾಸ್ಕ್ ಮುಗಿಯುವವರೆಗೂ, ತಮ್ಮ ತಮ್ಮ ಪಾತ್ರಗಳಲ್ಲಿಯೇ ಇದ್ದು, ತಮ್ಮ ಗುಂಪಿನ ನಿಯಮ ಪಾಲಿಸುವ ತಂಡ ಗೆದ್ದ ಹಾಗೆ ಎಂದು ಬಿಗ್‌ಬಾಸ್‌ ಆದೇಶಿಸಿದರು.

ಬಿಗ್‌ಬಾಸ್‌ ಮನೆಯಲ್ಲಿ ಕ್ಯಾಪ್ಟನ್ ಆದ್ಮೇಲಿನಿಂದ ಸ್ನೇಹಿತ್‌ ತಗೊಂಡ ನಿರ್ಧಾರಗಳು ಬಯಾಸ್ಡ್‌ ಆಗಿದ್ದು, ಅದರ ವಿರುದ್ಧ ಟಾಸ್ಕ್ ವೇಳೆ ಸಂಗೀತಾ ಸಿಡಿದೆದ್ದರು. ಟಾಸ್ಕ್‌ ವೇಳೆ ಸ್ನೇಹಿತ್  ರೂಲ್ಸ್ ಹೇಳೋದು ನನ್ನ ಕೆಲಸ ಎಂದಾಗ ಸಂಗೀತಾ , ಮತ್ತೆ ಮತ್ತೆ ಹೇಳ್ತಾ ಇದ್ದರೆ ನಾವು ಆಡೋದು ಹೆಂಗೆ? ಎಂದು ಕೇಳಿದರು. ಆಗ ಸ್ನೇಹಿತ್ ನಾನು ಹೇಳ್ತೀನಿ ಎಂದಿದಕ್ಕೆ ಸಂಗೀತಾ ಅದಕ್ಕೆ ಬಯಾಸ್ಡ್ ಕ್ಯಾಪ್ಟನ್ ಅಂತ ಹೇಳೋದು. ಇವರಿಗೂ ಕ್ಯಾಪ್ಟನ್ ಅಂತ ಯಾರಾದರೂ ಹೇಳ್ತಾರಾ? ಅಂತ ಅಂದಿದಕ್ಕೆ ಸ್ನೇಹಿತ್ ನನ್ನ ಶಕ್ತಿ ಮೇಲೆ ನಾನು ಕ್ಯಾಪ್ಟನ್ ಆಗಿರೋದು. ನೀವಲ್ಲ ನನ್ನನ್ನ ಕ್ಯಾಪ್ಟನ್ ಮಾಡಿರೋದು ಎಂದು ಉತ್ತರಿಸಿದರು. 

ಇದನ್ನೂ ಓದಿ: ಬಿಗ್‌ಬಾಸ್‌ ಮನೆಯೊಳಗೆ ಗಂಧರ್ವರು-ರಕ್ಕಸರು!

ಮತ್ತೆ ಇಬ್ರ ಮಧ್ಯೆ ಮಾತು ಮುಂದುವರೆಯುತ್ತಿರುವಾಗ, ಸಂಗೀತಾ - ನಾನು ಮಾಡೋದೂ ಇಲ್ಲ ಎಂದಿದಕ್ಕೆ ಸ್ನೇಹಿತ್ ನೀನೇ ಕ್ಯಾಪ್ಟನ್ ಆಗಿಲ್ಲ. ನನ್ನ ಏನು ಕ್ಯಾಪ್ಟನ್ ಮಾಡ್ತೀಯಾ? ಹೋಗೇಲೇ.. ಎಂದು ಏಕವಚನದಲ್ಲಿ ಮಾತನಾಡಿದಕ್ಕೆ, ಸಂಗೀತಾ  ಸಹ ಹೋಗೋಲೋ ಎಂದರು. ಅದಕ್ಕೆ ಸ್ನೇಹಿತ್ ಒಂದು ವಾರ ಆದರೂ ಕ್ಯಾಪ್ಟನ್ ಆಗಿದ್ಯಾ ನೀನು? ಎಂದು ಕೇಳಿದಕ್ಕೆ, ಸಂಗೀತಾ ನೀನು ಹೇಗೆ ಕ್ಯಾಪ್ಟನ್ ಆಗಿದ್ಯಾ ಅಂತಲೂ ಎಲ್ಲರಿಗೂ ಗೊತ್ತು. ಭಿಕ್ಷೆ… ಎಂದಿದಕ್ಕೆ ಸ್ನೇಹಿತ್ ಯಾರು ಭಿಕ್ಷೆ ಹಾಕಿರೋದು? ನಾನು ನನ್ನ ಸಾಮರ್ಥ್ಯದ ಮೇಲೆ ಕ್ಯಾಪ್ಟನ್ ಆಗಿರೋದು ಅಂತ ಹೇಳಿದಕ್ಕೆ, ಸಂಗೀತಾ ನೀನು ಯಾರಿಗೆ ಚೇಲಾ ಅಂತ ಎಲ್ಲರಿಗೂ ಗೊತ್ತು ಇಲ್ಲಿ ಅಂತ ಮಾತನಾಡಿದಕ್ಕೆ ಸ್ನೇಹಿತ್ - ನೀನು ಏನಾದರೂ ಅಂದುಕೋ ಎಂದರು

ಹೀಗೆ ಇಬ್ಬರ ಜಗಲ ಮುಂದುವರೆಯುತ್ತಾ ಇರುವಾಗ ಸ್ನೇಹಿತ್ ನೀನು ನಿನ್ನ ಶಕ್ತಿಯಿಂದ ಏನು ಗೆದ್ದಿದ್ದೀಯಾ? ಏನೂ ಗೆದ್ದಿಲ್ಲ! ಅಂತ ಹೇಳಿದಕ್ಕೆ ಸಂಗೀತಾ ಹಿಂದಿನ ವಾರ ಹೋಗಬೇಕಾದವನು ಜಾಸ್ತಿ ಮಾತಾಡಬಾರದು ಎಂದರು. ಆಗ ಸ್ನೇಹಿತ್ ಹಿಂದಿನ ವಾರ ನಾನು ಹೋಗಬೇಕಿತ್ತು ಅಂತ ಡಿಸೈಡ್ ಮಾಡೋಕೆ ನೀನು ಯಾರು? ಅಂತ ಪ್ರಶ್ನಿಸಿದಕ್ಕೆ ಸಂಗೀತಾ ಭಿಕ್ಷೆ ತಗೊಂಡು ಸೇವ್ ಆಗಿರೋದು. ಈಗ ಇಲ್ಲೂ ಚೀಟಿಂಗ್ ಮಾಡೋಕೆ ಬಂದಿರೋದು. ಯಾವಾಗ ನೋಡಿದರೂ ಒಂದ್ಸಲಿ ಅಲ್ಲಿ ಬಕೆಟ್, ಇನ್ನೊಂದ್ಸಲಿ ಇಲ್ಲಿ ಬಕೆಟ್‌ ಅಂತ ಹೇಳಿದರು. ಆಗ ಸ್ನೇಹಿತ್ - ಏಯ್.. ಹೋಗೇಲೇ.. ಎಂದಿದಕ್ಕೆ ಸಂಗೀತಾ ಕೂಡ  ಹೋಗೋಲೋ… ಎಂದು ಏಕವಚನದಲ್ಲಿ ಒಬ್ಬರನೊಬ್ಬರನ್ನು ಕರೆಯುವಾಗ, ಇಬ್ಬರ ಜಗಳ ಕಂಡು ಸಿರಿ ಆ ರೀತಿ ಮಾತನಾಡಬಾರದು ಅಂತ ಇಬ್ಬರಿಗೂ  ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News