BBK 10: ʼಈ ಸೀರಿಯಲ್ ಡೈಲಾಗ್‌ ನನ್ ಹತ್ರ ಬೇಡ ́ ಎಂದು ವಿನಯ್‌ ಅವಾಜ್‌ : ಕಣ್ಣೀರಟ್ಟ ಭಾಗ್ಯಶ್ರೀ

Bigg Boss Kannada 10: ಬಿಗ್‌ಬಾಸ್‌ ಮನೆಯಲ್ಲಿ ವಿನಯ್‌ ಗೌಡ ವಾಯ್ಸ್‌ ಜೋರಾಗಿದ್ದು, ತಮ್ಮ ಎದುರಾಗಳಿಗಳನ್ನು ಬರೀ ಮಾತಿನಿಂದಲೇ ಕಟ್ಟಿಹಾಕುವುದಕ್ಕೆ  ಪ್ರಯತ್ನ ಮಾಡುತ್ತಿದ್ದಾರೆ. ಸದ್ಯ ವಿನಯ್ ಈ ವಾರ ನಾಮಿನೇಟ್ ಆಗಿದ್ದು, ಭಾಗ್ಯಶ್ರೀ ಕೂಡ ವಿನಯವರನ್ನೇ ನಾಮಿನೇಟ್ ಮಾಡಿದ್ದರಿಂದ ಇಬ್ಬರ ಮಧ್ಯೆ ಜಗಳವಾಗಿದೆ.

Written by - Zee Kannada News Desk | Last Updated : Nov 1, 2023, 10:56 AM IST
  • ಭಾಗ್ಯಶ್ರೀಈ ವಾರ ವಿನಯ್‌ ಗೌಡ ನಾಮಿನೇಟ್ ಮಾಡಿದ್ದರಿಂದ ಇಬ್ಬರ ಮಧ್ಯೆ ಜಗಳವಾಗಿದೆ
  • ಜಗಳದಲ್ಲಿ ವಿನಯ್‌ ಭಾಗ್ಯಶ್ರೀಗೆ ʼನಿಮ್ ಡ್ರಾಮಾ ನಿಲ್ಸಿʼ ಎಂದು ಅವಾಜ್‌ ಹಾಕಿದರು
  • ವಿನಯ್ ಮಾತುಗಳಿಂದ ಬೇಸರಗೊಂಡ ಭಾಗ್ಯಶ್ರೀ ಕಣ್ಣೀರು ಹಾಕಿದರು
BBK 10: ʼಈ ಸೀರಿಯಲ್ ಡೈಲಾಗ್‌ ನನ್ ಹತ್ರ ಬೇಡ ́ ಎಂದು ವಿನಯ್‌ ಅವಾಜ್‌ : ಕಣ್ಣೀರಟ್ಟ ಭಾಗ್ಯಶ್ರೀ title=

Bigg Boss Kannada Season 10: ಬಿಗ್‌ಬಾಸ್ ಮನೆಯಲ್ಲಿ ಆನೆ ಎಂದು ಬಿಂಬಿತವಾಗಿರುವ ವಿನಯ್ ಗೌಡ ಈ ವಾರ ನಾಮಿನೇಟ್ ಆಗಿದ್ದು, ಅವರಿಗೆ ಒಟ್ಟು ಆರು ಮಂದಿ ನಾಮಿನೇಟ್ ಮಾಡಿದ್ದಾರೆ. ಅದರಲ್ಲಿ ಭಾಗ್ಯಶ್ರೀ ಸಹ ವಿನಯ್‌ನ್ನು ನಾಮಿನೇಟ್‌ ಮಾಡಿದ್ದು, ವಿನಯ್‌ ಗೌಡಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಈ ವಿಷಯದ ಬಗ್ಗೆ ಭಾಗ್ಯಶ್ರೀಗೆ ಪದೇ ಪದೇ ಪ್ರಶ್ನೆ ಮಾಡಿತ್ತಿದ್ದು, ಕೊನೆಗೆ ಭಾಗ್ಯಶ್ರೀ ದುಃಖ ತಡೆಯಲಾರದೇ ಕಣ್ಣೀರು ಹಾಕಿದರು. ಅದಕ್ಕೆ ವಿನಯ್‌ ಭಾಗ್ಯಶ್ರೀಗೆ 'ನಿಮ್ ಡ್ರಾಮಾ ನಿಲ್ಸಿ..' ಅಂತ ಆವಾಜ್‌ ಕೂಡ ಹಾಕಿದ್ದಾರೆ. 

ಮೊದಲು ವಿನಯ್‌ ಸ್ನೇಹಿತ್‌ ಬಳಿ, ʼದಸರಾ ಹಬ್ಬದ ಕಾರಣಕ್ಕೆ ಎಲಿಮಿನೇಷನ್ ಮಾಡಿಲ್ಲ. ಇಲ್ಲದಿದ್ದರೆ, ಭಾಗ್ಯಶ್ರೀ ಈ ಮನೆಯಿಂದ ಹೊರಗೆ ಹೋಗ್ತಿದ್ರುʼ ಎಂಬ ಅರ್ಥದಲ್ಲಿ ಮಾತನಾಡಿದರು. ಬಳಿಕ ವಿನಯ್‌  ನೇರವಾಗಿ ಭಾಗ್ಯಶ್ರೀ ಬಳಿ ಹಲವು ಬಾರಿ ಮಾತಿನ ಚಕಮಕಿ ನಡೆಸಿದ್ದು, 'ನಿಮ್ಮ ಕಣ್ಣಿಗೆ ರೂಲ್ಸ್ ಬ್ರೇಕ್ ಮಾಡಿದ್ದ ಕಾರ್ತಿಕ್ ಕಾಣಲಿಲ್ವಾ? ನಾನು ವಿನಯ್‌ ಕೋಪಗೊಂಡು ಮಾತನಾಡಿದರು.

ಇದನ್ನು ಓದಿ: ಬಿಗ್‌ ಬಾಸ್‌ನಲ್ಲಿ ಅಶ್ಲೀಲವಾಗಿ ವರ್ತಿಸಿದ ಮೈಕೆಲ್, ಸಿಡಿದೆದ್ದ ನಮ್ರತಾ ಗೌಡ

ವಿನಯ್‌ ಮಾತನ್ನು ಮುಂದುವರೆಸುತ್ತಾ 'ದಸರಾ ಬಗ್ಗೆ ನಾನು ಹೇಳಿದ್ದು ನಿಮಗೆ ಬೇಜಾರಾಗಿರಬಹುದು. ಅಷ್ಟೇ ಬೇಜಾರು ನನಗೂ ಆಗಿದೆ. ನಿಮ್ಮ ಕಣ್ಣಮುಂದೆ ಕಾರ್ತಿಕ್ ಇದ್ದ. ಅವನು ರೂಲ್ಸ್ ಬ್ರೇಕ್ ಮಾಡಿರಲಿಲ್ವಾ? ನಿಮ್ಮ ಮೇಲೆ ನನಗೆ ತುಂಬ ಗೌರವ ಇತ್ತು. ಆದರೆ ನೀವು ಮಾಡಿದ್ದು ನನಗೆ ಅಸಹ್ಯ ಅನ್ನಿಸ್ತು ನನಗೆ' ಎಂದು ಭಾಗ್ಯಶ್ರೀಗೆ  ಹೇಳಿದರು.

ವಿನಯ್ ಮಾತುಗಳಿಂದ ಬೇಸರಗೊಂಡ ಭಾಗ್ಯಶ್ರೀ ಕಣ್ಣೀರು ಹಾಕುತ್ತಾ 'ನನಗೆ ಇಲ್ಲಿ ಇರುವುದಕ್ಕೆ ಇಷ್ಟವಿಲ್ಲ, ನಾನು ಹೊರಗೆ ಹೋಗುತ್ತೇನೆ. ನಾನು ಮನೆಗೆ ಹೋಗಬೇಕು' ಎಂದು ದುಖಃ ಹೊರಹಾಕಿದರು. ಆ ವೇಳೆ ಮತ್ತೆ ಬಂದ ವಿನಯ್ ಗೌಡ, 'ಯಾಕೆ ಎಲ್ಲರ ಹತ್ರ ಮಾತಾಡ್ತಾ ಇದ್ದೀರಾ? ಯಾಕಿಷ್ಟು ಡ್ರಾಮಾ? ನೀವು ಮಾಡಿದ್ದು ಸರಿನಾ ಇಲ್ವಾ ಅಂತ ನಿಮಗೆ ಕೇಳಿದ್ದೇನೆ. ದಸರಾ ಹಬ್ಬದ ದಿನ ನೀವು ಹೋಗಬೇಕಿತ್ತು. ಆದರೆ ನೀವು ಹೋಗಿಲ್ಲ. ಇಲ್ಲೇ ಉಳಿದುಕೊಂಡ್ರಿ ಅಂತ ನಾನೇ ಹೇಳಿದ್ದು' ಎಂದು  ಮತ್ತೆ ಮತ್ತೆ ಹೇಳಿದರು. ನಂತರ ಮನೆಯವರು ಅಳುತ್ತಿದ್ದ ಭಾಗ್ಯಶ್ರೀ ಅವರನ್ನು ಸಮಾಧಾನ ಮಾಡಿದರು. ಕೆಲವರು ಭಾಗ್ಯಶ್ರೀ ಪರವಾಗಿ ಇದ್ದರೆ, ಇನ್ನೂ ಕೆಲವರು ವಿನಯ್ ಮಾತಿಗೆ ಸರಿ ಎನ್ನುವಂತೆ ತೋರುತ್ತಿತ್ತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News