ಬಿಗ್‌ ಬಾಸ್‌ ಮನೆಯಲ್ಲಿ ಕಳೆದ ವಾರ ಏನೇನಾಯ್ತು?

Bigg Boss Kannada Season 10 : ಬಿಗ್‌ ಬಾಸ್‌ ಕನ್ನಡ ರಿಯಾಲಿಟಿ ಶೋ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಹಲವು ಬಗೆಯಲ್ಲಿ ರೋಚಕಗೊಳ್ಳುತ್ತಿದೆ. ಈ ವಾರದ ವೀಕೆಂಡ್ ಎಪಿಸೋಡ್‌ಗಳಲ್ಲಿ ಸುದೀಪ್‌ ಸ್ಪರ್ಧಿಗಳಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದೂ ಆಗಿದೆ.

Written by - Chetana Devarmani | Last Updated : Oct 23, 2023, 02:02 PM IST
  • ಬಿಗ್‌ ಬಾಸ್‌ ಕನ್ನಡ ರಿಯಾಲಿಟಿ ಶೋ
  • ಹಲವು ಬಗೆಯಲ್ಲಿ ರೋಚಕಗೊಳ್ಳುತ್ತಿದೆ
  • ಮನೆಯಲ್ಲಿ ಕಳೆದ ವಾರ ಏನೇನಾಯ್ತು?
ಬಿಗ್‌ ಬಾಸ್‌ ಮನೆಯಲ್ಲಿ ಕಳೆದ ವಾರ ಏನೇನಾಯ್ತು? title=

Bigg Boss Kannada Season 10 : ಬಿಗ್‌ ಬಾಸ್‌ ಕನ್ನಡ ರಿಯಾಲಿಟಿ ಶೋ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಹಲವು ಬಗೆಯಲ್ಲಿ ರೋಚಕಗೊಳ್ಳುತ್ತಿದೆ. ಈ ವಾರದ ವೀಕೆಂಡ್ ಎಪಿಸೋಡ್‌ಗಳಲ್ಲಿ ಸುದೀಪ್‌ ಸ್ಪರ್ಧಿಗಳಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದೂ ಆಗಿದೆ. ಹಾಗಾದರೆ ಕಳೆದ ವಾರ ಬಿಗ್‌ಬಾಸ್‌ ಮನಯೊಳಗೆ ಏನೇನು ನಡೆಯಿತು? ಯಾವ ಸ್ಪರ್ಧಿಗಳು ಹೇಗೆ ನಡೆದುಕೊಂಡರು? ಮನರಂಜನೆಯ, ಭಾವುಕ ಕ್ಷಣಗಳು ಹೇಗಿದ್ದವು? ಈ ಎಲ್ಲವನ್ನೂ ರಿಕ್ಯಾಪ್ ಮಾಡಿ ನೋಡುವ ಅವಕಾಶ ಇದೀಗ JioCinemaದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಕನ್ನಡದ ‘ಬಿಗ್‌ ನ್ಯೂಸ್‌’ ಸೆಗ್ಮೆಂಟ್‌ನಲ್ಲಿ ಲಭ್ಯವಿದೆ. 

ಎರಡನೇ ವಾರ, ಮನೆ ಬಿಸಿ ಏರ್ತಾ ಇದೆ. ಒಬ್ಬರನ್ನೊಬ್ಬರು ಅರ್ಥ ಮಾಡ್ಕೊತಿದಾರೋ ಹತ್ರ ಮಾಡ್ಕೊತಿದಾರೋ ಗೊತ್ತಾಗ್ತಿಲ್ಲ. ಆದ್ರೆ ಒಬ್ರ ಮೇಲೊಬ್ರ ಸಗಣಿ ಅಲ್ಲಲ್ಲ ಕೆಸರು ಎರಚೋ ಆಟ ಅಂತೂ ಶುರುವಾದಂತಿದೆ. ಎಲ್ರೂ ಸೇರಿ ಸಂಗೀತಾ ಮೇಲೆ ಸೆಗಣಿ ಎರಚಿದ್ದೂ ಆಯ್ತು. ಬಿಗ್‌ಬಾಸ್‌ ಮೇಲೆ ಗೆಲುವು ಬೇಕು ಅಂದ್ರೆ, ಒಂದೋ ಬಲವಿರಬೇಕು, ಇಲ್ಲಾ ನಿಲುವಿರಬೇಕು. ಇಲ್ಲಾ ಒಲವಿರಬೇಕು. ಈ ವಾರ ಯಾವ ಸ್ಫರ್ಧಿಗಳಿಗೆ ಏನಿತ್ತು ಅಂತ ಪ್ರೇಕ್ಷಕರೇ ನಿರ್ಧಾರ ಮಾಡ್ಬೇಕು. ಇಶಾನಿ ಮತ್ತು ಮೈಕಲ್ ಜೋಡಿ, ಸಂಗೀತಾ ಕಾರ್ತೀಕ್ ಜೋಡಿಯಂತೂ ಸಾಕಷ್ಟು ಗಮನಸೆಳೆದಿದ್ದಂತೂ ನಿಜ.

ಇದನ್ನೂ ಓದಿ: ಬಿಗ್‌ ಬಾಸ್ 10 ರಲ್ಲಿ ಕಿಚ್ಚನ ಚಪ್ಪಾಳೆ ಮಿಸ್ಸಿಂಗ್‌.. ಕಾರಣ ತಿಳಿಸಿದ್ರು ಸುದೀಪ್ 

ಕ್ಯಾಪ್ಟನ್ ಆಗುವ ಕನಸು ಕಂಡಿದ್ದ ರಣಶಕ್ತಿ ತಂಡಕ್ಕೆ ಕ್ಯಾಪ್ಟನ್ ಆಗುವ ಅವಕಾಶ ಸಿಗಲೇ ಇಲ್ಲ. ಬದಲಾಗಿ ಸ್ವಿಮ್ಮಿಂಗ್‌ ಫೂಲ್‌ನಲ್ಲಿ ಮುಳುಗೇಳಬೇಕಾಯ್ತಷ್ಟೆ. ರಣಶಕ್ತಿ ತಂಡಕ್ಕೆ ಕ್ಯಾಪ್ಟನ್ ಆಗುವ ಭಾಗ್ಯ ಇರ್ಲಿಲ್ಲ. ಆದ್ರೆ ಭಾಗ್ಯಶ್ರೀ ಇದ್ರಲ್ಲ… ಅವರು ಜಗಳ ಆಡ್ತಿದ್ದೋರನ್ನು ಸಂಧಾನ ಮಾಡಲು ಹೋಗಿ ಸಮಾಧಾನ ಕಳ್ಕೊಂಡು ರಾತ್ರಿಯಿಡೀ ಚಳಿಯಲ್ಲಿ ನಡುಗಬೇಕಾಯ್ತು. ವಿನಯ್ ಜೊತೆಗೆ ಹೀಟ್‌ ಮಾತುಕತೆಯಾಗಿ ಕಣ್ಣೀರಲ್ಲಿ ಕೊನೆಗೊಂಡಿತು.

ಗೌರೀಶ ಅಕ್ಕಿ ಅವರು ಮೌನ ಬಂಗಾರ ಅನ್ನೋ ಹಾಗೆಯೇ ಇದ್ದರು. ವರ್ತೂರ್ ಸಂತೋಷ್ ಅವರ ಮೈಮೇಲಿನ ಬಂಗಾರ ಮಾತ್ರ ಫಳಫಳ ಹೊಳೆಯಿತು. ತುಕಾಲಿ ಸಂತೋಷ್‌ ಅವರು ವೇಟರ್ ಆದಾಗ ಸ್ಪರ್ಧಿಗಳು ಮಾಡಿದ ಆರ್ಡರ್‍‌ಗಳಂತೂ ಸಖತ್ ನಗು ತರಿಸುವಂತಿತ್ತು. ಸಂತೋಷ್‌ ಅವರ ಜೊತೆ ಜಿದ್ದಾಜಿದ್ದಿ ಜಗಳವಾಡಿದ ಇಶಾನಿ ಜೈಲು ಸೇರಬೇಕಾಯ್ತು. ಈ ನಡುವೆ ಬಂದಾವನ ತಂಡ ಬಿಗ್‌ಬಾಸ್‌ ಮನೆಯೊಳಗೆ ಬಂದಿದ್ದೊಂದು ವಿಶೇಷ ಗಳಿಗೆ. ಬಿಗ್‌ಬಾಸ್‌ ಮನೆಯೊಳಗೆ ಐವತ್ತಕ್ಕೂ ಹೆಚ್ಚು ಜನ ಸೇರಿದ್ದು ಒಂದು ದಾಖಲೆಯೇ ಆಗಿತ್ತು. ಅಲ್ಲಿ ಎಲ್ರೂ ಮಾಡಿದ ಸೆಲೆಬ್ರೇಷನ್‌ ಅಂತು ಕಣ್ಣು ಕೊರೈಸುವಂತಿತ್ತು.

ಜಿಯೊ ಸಿನಿಮಾದಿಂದ ನಡೆಸಿದ ಫನ್‌ ಫ್ರೈಡೆ ಎಂಬ ಮೋಜಿನ ಆಟದಲ್ಲಿ ಎಲ್ಲರೂ ಉತ್ಸಾಹದಿಂದಲೇ ಭಾಗವಹಿಸಿದರು. ಆದರೆ ಗೆದ್ದೋರು ಯಾರು?  ಇದಕ್ಕೆ ಉತ್ತರ ಇನ್ನೂ ಸಿಕ್ಕಿಲ್ಲ. ಈ ಆಟದ ತೀರ್ಪನ್ನು ನೀಡುವ ಅಧಿಕಾರವನ್ನು ಬಿಗ್‌ಬಾಸ್‌ ಪ್ರೇಕ್ಷಕರಿಗೇ ನೀಡಿದ್ದಾರೆ. ಇಂದು ಅಂದರೆ ಅಕ್ಟೋಬರ್ 23ರ ರಾತ್ರಿ 9 ಗಂಟೆಯವರೆಗೂ ಜನರು JioCinemaದಲ್ಲಿ ‘ನೀವೀಗ ಬಾಸ್‌’ ಸೆಗ್ಮೆಂಟ್‌ನಲ್ಲಿ ವೋಟ್ ಹಾಕಿ ನಿಮ್ಮಿಷ್ಟದ ಸ್ಪರ್ಧಿಯನ್ನು ಫನ್‌ ಫ್ರೈಡೆ ಟಾಸ್ಕ್‌ನಲ್ಲಿ ಗೆದ್ದ ಸ್ಪರ್ಧಿಯನ್ನಾಗಿಸುವ ಅವಕಾಶ ವೀಕ್ಷಕರಿಗೆ ಇದೆ. 

ಇದನ್ನೂ ಓದಿ: ವರ್ತೂರು ಸಂತೋಷ್‌ ಬಿಗ್‌ ಬಾಸ್‌ ಮನೆಯಿಂದಲೇ ಅರೆಸ್ಟ್‌.! 

ವಾರದ ಕೊನೆಯ ವೀಕೆಂಡ್ ಎಪಿಸೋಡ್‌ಗಳು ನಗು-ನಲಿವು ಮತ್ತು ಕಿಚ್ಚನ ಖಡಕ್ ಕ್ಲಾಸ್‌ನ ಮಿಶ್ರಣವಾಗಿದ್ದವು. ಕೊನೆಗೂ ಈ ವಾರ ಗೌರೀಶ ಅಕ್ಕಿ ಮನೆಯಿಂದ ಹೊರಬಿದ್ದಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ಹೊಸದೊಂದು ವಾರ ಕಣ್ಬಿಟ್ಟಿದೆ. ಈ ವಾರದಲ್ಲಿ ಏನೇನು ಆಗಲಿವೆ? ಯಾವ್ಯಾವ ಸರ್ಪೈಸ್‌ಗಳು ಕಾದಿವೆ. ಎಂಬುದನ್ನು ತಿಳಿದುಕೊಳ್ಳುದಕ್ಕಾಗಿ JioCinemaದಲ್ಲಿ ಬಿಗ್‌ಬಾಸ್‌ ಕನ್ನಡ ಉಚಿತ ನೇರಪ್ರಸಾರ ವೀಕ್ಷಿಸುತ್ತಿರಿ.

ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ದೈನಂದಿನ ಎಪಿಸೋಡ್‌ಗಳನ್ನು Colors Kannada ದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ವೀಕ್ಷಿಸಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News