ಅಪರ್ಣಾ ಧ್ವನಿಯನ್ನು ಬದಲಾಯಿಸುತ್ತಾ ‘ನಮ್ಮ ಮೆಟ್ರೋ’? ಅಚ್ಚ ಕನ್ನಡತಿ ಅಗಲಿಕೆ ಬೆನ್ನಲ್ಲೇ ಮಹತ್ವದ ನಿರ್ಧಾರ

Namma Metro on Aparna Voice: ಕನ್ನಡ ನಿರೂಪಣೆ ಎಂದಾಗ ಮೊದಲು ನೆನೆಪಿಗೆ ಬರುವುದೇ ಅಪರ್ಣಾ ಹೆಸರು. ಸ್ಪಷ್ಟತೆಯ ಜೊತೆಗೆ ಅರ್ಥಪೂರ್ಣ ಕನ್ನಡದ ಕಂಪನ್ನು ಪಸರಿಸಿದ್ದವರಲ್ಲಿ ಅಪರ್ಣಾ ಕೂಡ ಒಬ್ಬರು.

Written by - Bhavishya Shetty | Last Updated : Jul 12, 2024, 06:16 PM IST
    • ಶ್ವಾಸಕೋಶದ ಕ್ಯಾನ್ಸರ್’ನಿಂದ ನಿರೂಪಕಿ ಅಪರ್ಣಾ ನಿಧನ
    • ಕನ್ನಡ ನಿರೂಪಣೆ ಎಂದಾಗ ಮೊದಲು ನೆನೆಪಿಗೆ ಬರುವುದೇ ಅಪರ್ಣಾ ಹೆಸರು
    • ನಿರೂಪಕಿ ಅಪರ್ಣಾ ಅಗಲಿಕೆಗೆ ಬಿಎಂಆರ್‌’ಸಿಎಲ್‌ ಸಂಸ್ಥೆ ಭಾವಪೂರ್ಣ ಶ್ರದ್ಧಾಂಜಲಿ ತಿಳಿಸಿದೆ
ಅಪರ್ಣಾ ಧ್ವನಿಯನ್ನು ಬದಲಾಯಿಸುತ್ತಾ ‘ನಮ್ಮ ಮೆಟ್ರೋ’? ಅಚ್ಚ ಕನ್ನಡತಿ ಅಗಲಿಕೆ ಬೆನ್ನಲ್ಲೇ ಮಹತ್ವದ ನಿರ್ಧಾರ  title=
Namma Metro Clarification About Aparna Voice

Namma Metro on Aparna Voice: ಸ್ಪಷ್ಟ ಕನ್ನಡದ ಸೊಗಡಿನಿಂದಲೇ ಜನಮಾನಸದಲ್ಲಿ ವಿಶೇಷ ಸ್ಥಾನ ಪಡೆದಿದ್ದ ನಿರೂಪಕಿ ಅಪರ್ಣಾ ಕೊನೆಯುಸಿರೆಳೆದಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್’ನಿಂದ ಅಪರ್ಣಾ ಅಸುನೀಗಿದ್ದು, ಅವರ ಅಗಲಿಕೆ ಕನ್ನಡ ಸಿನಿರಂಗ ಮಾತ್ರವಲ್ಲದೆ, ಇಡೀ ಕರುನಾಡಿಗೆ ಸಹಿಸಲಾರದ ನೋವನ್ನುಂಟು ಮಾಡಿದೆ.

ಕನ್ನಡ ನಿರೂಪಣೆ ಎಂದಾಗ ಮೊದಲು ನೆನೆಪಿಗೆ ಬರುವುದೇ ಅಪರ್ಣಾ ಹೆಸರು. ಸ್ಪಷ್ಟತೆಯ ಜೊತೆಗೆ ಅರ್ಥಪೂರ್ಣ ಕನ್ನಡದ ಕಂಪನ್ನು ಪಸರಿಸಿದ್ದವರಲ್ಲಿ ಅಪರ್ಣಾ ಕೂಡ ಒಬ್ಬರು.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್-ಪ್ರಜ್ವಲ್ ರೇವಣ್ಣ ಭೇಟಿ! ಮುಖಾಮುಖಿ ವೇಳೆ ಆಗಿದ್ದೇನು?

ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಹಿರಿಮೆ ಅಪರ್ಣಾ ಅವರದ್ದು. ಅದರಲ್ಲೂ ಅಪರ್ಣಾ ಧ್ವನಿ ‘ನಮ್ಮ ಮೆಟ್ರೋ’ದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಚಿರಪರಿಚಿತ. ಆದರೆ ಇನ್ಮುಂದೆ ಮೆಟ್ರೋ ಸಂಸ್ಥೆ ಅವರ ಧ್ವನಿಯನ್ನು ಮುಂದುವರೆಸುತ್ತಾ? ಬದಲಾಯಿಸುತ್ತಾ? ಎಂಬ ಗೊಂದಲ ಅನೇಕರಲ್ಲಿ ಮೂಡಿದೆ.

ನಿರೂಪಕಿ ಅಪರ್ಣಾ ಅಗಲಿಕೆಗೆ ಬಿಎಂಆರ್‌’ಸಿಎಲ್‌ ಸಂಸ್ಥೆ ಭಾವಪೂರ್ಣ ಶ್ರದ್ಧಾಂಜಲಿ ತಿಳಿಸಿದೆ. ಜೊತೆಗೆ ನಮ್ಮ ಮೆಟ್ರೋ ರೈಲುಗಳಲ್ಲಿ ಅವರ ಧ್ವನಿ ಜೀವಂತ ಆಗಿರಲಿದೆ ಎಂದು ತಿಳಿಸಿದೆ.

“ಅದೆಷ್ಟೋ ಮೆಟ್ರೋ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಹೆಗ್ಗಳಿಕೆ ಇವರದ್ದು. ಇವರಿಗೆ ಭಾಷೆಯ ಮೇಲಿನ ಹಿಡಿತ ಮತ್ತು ಉಚ್ಛಾರಣೆ ಎರಡೂ ಕರಗತವಾಗಿತ್ತು. ಇವರ ಧ್ವನಿ ನಮ್ಮ ಮೆಟ್ರೋದಲ್ಲಿ ಎಂದೆಂದಿಗೂ ಜೀವಂತ. ಮುಂದಿನ ಬಾರಿ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವಾಗ ಕಣ್ಣು ಮುಚ್ಚಿ ಅವರ ಸ್ಪಷ್ಟ ಕನ್ನಡದ ಸವಿ ಸವಿಯಿರಿ” ಎಂದು ಎಕ್ಸ್ ಮೂಲಕ ನಮ್ಮ ಮೆಟ್ರೋ ಸಂಸ್ಥೆ ಬರೆದುಕೊಂಡಿದೆ.

 

ಇದನ್ನೂ ಓದಿ:  ತಮಿಳುನಾಡಿಗೆ ನೀರು ಬಿಡಲು ಆದೇಶದ ವಿರುದ್ಧ CWMAಗೆ ಮೇಲ್ಮನವಿ ಸಲ್ಲಿಸಲು ಸರ್ಕಾರದ ನಿರ್ಧಾರ

“ಅವರಿಗೆ ದೇವರ ವರದಾನದ ಧ್ವನಿ ಇತ್ತು. ನಮ್ಮ ಮೆಟ್ರೋ ಹಾಗೂ ತಮ್ಮ ಮಾಸದ ದನಿಗೂ ಇರುವ ನಂಟು ಎಂದಿಗೂ ಕಳಚದು. ದೇವರು ಅಪರ್ಣಾ ಆತ್ಮಕ್ಕೆ ಶಾಂತಿ ಮತ್ತು ಕುಟುಂಬಕ್ಕೆ ಅವರ ಅಗಲಿಕೆಯನ್ನು ಭರಿಸುವ ಶಕ್ತಿ ನೀಡಲಿ” ಎಂದು BMRCL ಶ್ರದ್ಧಾಂಜಲಿ ಅರ್ಪಿಸಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News