ನವದೆಹಲಿ: ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯ ಮತ್ತು ಹಿಂಸಾಚಾರದ ಬಗ್ಗೆ ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರ ಪ್ರತಿಕ್ರಿಯೆ ಕೂಡ ಬೆಳಕಿಗೆ ಬಂದಿದೆ. ಅವರು ಇತ್ತೀಚೆಗೆ ಈ ಬಗ್ಗೆ ಪ್ರೀತಿ ಜಿಂಟಾ (Preity Zinta) ಟ್ವೀಟ್‌ನಲ್ಲಿ ಬರೆದಿದ್ದು ಇತ್ತೀಚೆಗೆ ಅನಂತ್‌ನಾಗ್‌ನಲ್ಲಿ ಏಕಾಂಗಿ ಸರ್ಪಂಚ್‌ನನ್ನು ನಿರ್ದಯವಾಗಿ ಹತ್ಯೆಗೈದ ಬಗ್ಗೆ ನನಗೆ ತುಂಬಾ ಬೇಸರವಾಗಿದೆ. ಅವರ ದುಃಖದ ಸಮಯದಲ್ಲಿ ಕುಟುಂಬಕ್ಕೆ ನನ್ನ ಸಂತಾಪ. ಅವರ ಕುಟುಂಬಕ್ಕೆ ನ್ಯಾಯ ಸಿಗುತ್ತದೆ ಮತ್ತು ಅಪರಾಧಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
Deeply saddened & Upset at the merciless killing of the lone sarpanch in Anantnag recently. My condolence to the family in their time of grief. I hope that his family gets JUSTICE & appropriate action is taken against the guilty🙏 #RIP #JusticeForAjayPandita #KashmiriPandit
— Preity G Zinta (@realpreityzinta) June 10, 2020
ಇದಕ್ಕೂ ಮೊದಲು ಝೀ ನ್ಯೂಸ್ ಜೊತೆಗಿನ ಸಂಭಾಷಣೆಯಲ್ಲಿ ಕಂಗನಾ ರನೌತ್ (Kangna Ranaut) ಬಾಲಿವುಡ್ ಜನರು ಕೈಯಲ್ಲಿ ಮೇಣದ ಬತ್ತಿಗಳು, ಕಾರ್ಡ್‌ಗಳನ್ನು ಹೊತ್ತುಕೊಂಡು ಬೀದಿಗಿಳಿಯುತ್ತಾರೆ, ಆದರೆ ಅವರ ಕಾರ್ಯಸೂಚಿ ಜಿಹಾದಿಯಾಗಿದೆ. ಅಂದಹಾಗೆ ಅವರು ಯಾವುದೇ ಅಜೆಂಡಾ ಇಲ್ಲದೆ ಯಾರಿಗೂ ಸಹಾಯ ಮಾಡಲು ಮುಂದೆ ಬರುವುದಿಲ್ಲ ಎಂದು ಮತ್ತೆ ಬಾಲಿವುಡ್ ಜನರನ್ನು ಗುರಿಯಾಗಿಸಿಕೊಂಡಿದ್ದರು.
ಸರ್ಪಂಚ್ ಅಜಯ್ ಪಂಡಿತ್ ಅವರನ್ನು ನಿರ್ದಯವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಮತ್ತು ಸಂತ್ರಸ್ತರಿಗೆ ನ್ಯಾಯ ದೊರಕಿಸಬೇಕೆಂದು ಕಂಗ್ನಾ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಮನವಿ ಮಾಡಿದ್ದರು.
ಸೋಮವಾರ, ಜಮ್ಮು ಮತ್ತು ಕಾಶ್ಮೀರದ (Jammu and Kashmir) ಅನಂತ್ನಾಗ್ ಜಿಲ್ಲೆಯಲ್ಲಿ ಉಗ್ರರು ಸರ್ಪಂಚ್ ಅಜಯ್ ಪಂಡಿತ್ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಅನಂತ್‌ನಾಗ್ (Anantnag) ಜಿಲ್ಲೆಯ ಲುಕಾಭವನ್ ಲಾರ್ಕಿಪೊರಾ ನಿವಾಸಿಯಾಗಿದ್ದ 40 ವರ್ಷದ ಸರ್ಪಂಚ್ ಅವರ ಮನೆಯ ಬಳಿ 50 ಮೀಟರ್ ದೂರದಿಂದ ಅಪರಿಚಿತ ಹಲ್ಲೆಕೋರರು ಗುಂಡು ಹಾರಿಸಿದ್ದಾರೆ.