Anand Gandhi Tweet about Kantara : ಕಾಂತಾರ ಸೆಪ್ಟೆಂಬರ್ 30 ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿತು ಮತ್ತು ಕನ್ನಡದಲ್ಲಿ ಬ್ಲಾಕ್‌ಬಾಸ್ಟರ್ ಹಿಟ್ ಆಗಿ ಹೊರಹೊಮ್ಮಿತು. ಆ ಬಳಿಕ ಹಿಂದಿ, ತೆಲುಗು ಮತ್ತು ಮಲಯಾಳಂನಲ್ಲಿ ತನ್ನ ಮ್ಯಾಜಿಕ್ ತೋರಿಸಿತು. ಪ್ಯಾನ್-ಇಂಡಿಯಾ ಸಿನಿಮಾವಾಗಿ ಪ್ರೇಕ್ಷಕರ ಮನಗೆದ್ದಿತು. ಆದರೆ ಈ ಸಿನಿಮಾ ನೋಡಿದ ಬಳಿಕ ಅನೇಕ ಜನರು ‘ಕಾಂತಾರ’ ಸಿನಿಮಾವನ್ನು ‘ತುಂಬಾಡ್’ ಚಿತ್ರಕ್ಕೆ ಹೋಲಿಸಿದ್ದರು. ‘ತುಂಬಾಡ್’ನ ಚಿತ್ರಕಥೆ ಬರಹಗಾರ ಹಾಗೂ ನಿರ್ಮಾಪಕರಲ್ಲಿ ಒಬ್ಬರಾದ ಆನಂದ್ ಇದೀಗ ಕಾಂತಾರ ಸಿನಿಮಾ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ : ಡಿಸೆಂಬರ್ 9ಕ್ಕೆ ಮಾನ್ಸೂನ್ ರಾಗ ಜೀ಼ 5 ನಲ್ಲಿ ʻವರ್ಲ್ಡ್ ಡಿಜಿಟಲ್ ಪ್ರಿಮಿಯರ್ʼ..!
ಎರಡೂ ಚಿತ್ರಗಳು ಜಾನಪದದ ಹಿನ್ನೆಲೆಯಲ್ಲಿಯೇ ತಯಾರಾಗಿವೆ. ತುಂಬಾಡ್ ಕ್ರಿಯೇಟಿವ್ ಡೈರೆಕ್ಟರ್ ಆನಂದ್ ಗಾಂಧಿ ಇದೀಗ ಈ ಹೋಲಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕಾಂತಾರ ಬಗ್ಗೆ ಅವರ ಟೀಕೆಗಳು ಟ್ವಿಟರ್‌ನಲ್ಲಿ ಕೋಲಾಹಲಕ್ಕೆ ಕಾರಣವಾಗಿವೆ. ಕಾಂತಾರ ಚಿತ್ರದಲ್ಲಿ ವಿಷಕಾರಿ ಪುರುಷತ್ವವನ್ನು ಆಚರಿಸುತ್ತಾರೆ ಎಂದು ಆನಂದ್ ಗಾಂಧಿ ಹೇಳಿದ್ದಾರೆ.
Kantara is nothing like Tumbbad. My idea behind Tumbbad was to use the horror as an allegory of toxic masculinity and parochialism.
Kantara is a celebration of these.— Anand Gandhi (@Memewala) December 3, 2022
ಡಿಸೆಂಬರ್ 3 ಶನಿವಾರದಂದು ಆನಂದ್ ಗಾಂಧಿ ಪ್ರತಿಕ್ರಿಯಿಸಿದರು. "ಕಾಂತಾರ ಚಿತ್ರ ತುಂಬಾಡ್ ಸಿನಿಮಾದ ಹಾಗಲ್ಲ. ಸಂಕುಚಿತತೆ ಹಾಗೂ ಪುರಷತ್ವ ಸಂಕೇತವನ್ನು ಖಂಡಿಸುವ ರೀತಿಯಲ್ಲಿ ತುಂಬಾಡ್ ಸಿನಿಮಾ ಕತೆಯನ್ನು ಹೆಣೆಯಲಾಗಿದೆ. ಆದರೆ ಕಾಂತಾರ ಸಿನಿಮಾದಲ್ಲಿ ಭಯಾನಕತೆಯನ್ನು ವಿಷಕಾರಿ ಪುರುಷತ್ವ ಮತ್ತು ಸಂಕುಚಿತತೆಯ ಆಚರಣೆಯಾಗಿದೆ"
ಅವರ ಕಾಮೆಂಟ್ ಕಾಂತಾರ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಅನೇಕರು ಆನಂದ್ ಅವರ ಈ ಟ್ವೀಟ್ ಅನ್ನು ಟೀಕಿಸಿದ್ದಾರೆ. ಅಲ್ಲದೇ ಆಕ್ರೋಶ ಹೊರ ಹಾಕುವ ಮೂಲಕ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ : ಕ್ಯೂಟ್ ಆಗಿ ಲವ್ ಮ್ಯಾಟರ್ ರಿವೀಲ್ ಮಾಡಿದ ವಸಿಷ್ಠ ಸಿಂಹ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.