ಅಂದು ಗ್ಯಾರೇಜ್’ನಲ್ಲಿ ವಾಸಿಸುತ್ತಿದ್ದ ಅನಿಲ್ ಕಪೂರ್ ಇಂದು ಬಾಲಿವುಡ್’ನ ಅತ್ಯಂತ ಶ್ರೀಮಂತ ನಟ: ಇವರ ಒಟ್ಟು ಆಸ್ತಿ ಎಷ್ಟು ಕೋಟಿ ಗೊತ್ತಾ?

Anil Kapoor Net Worth: ಅನಿಲ್ ಕಪೂರ್ ಕಳೆದ ನಾಲ್ಕು ದಶಕಗಳಿಂದ ತಮ್ಮ ನಟನೆಯ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಆದರೆ ಈ ಹಂತವನ್ನು ತಲುಪಲು ಅವರ ಪಟ್ಟ ಪಾಡು ಅಂತಿಂಥದಲ್ಲ. ಕಳೆದ ದಿನವಷ್ಟೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

Written by - Bhavishya Shetty | Last Updated : Dec 25, 2023, 04:03 PM IST
    • ಬಾಲಿವುಡ್’ನ ಅತ್ಯಂತ ಶ್ರೀಮಂತ ನಟ ಅನಿಲ್ ಕಪೂರ್
    • ಪ್ರತಿ ವರ್ಷ 12 ಕೋಟಿಗೂ ಹೆಚ್ಚು ಸಂಪಾದನೆ ಮಾಡುತ್ತಾರಂತೆ
    • ಕಳೆದ ನಾಲ್ಕು ದಶಕಗಳಿಂದ ತಮ್ಮ ನಟನೆಯ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ
ಅಂದು ಗ್ಯಾರೇಜ್’ನಲ್ಲಿ ವಾಸಿಸುತ್ತಿದ್ದ ಅನಿಲ್ ಕಪೂರ್ ಇಂದು ಬಾಲಿವುಡ್’ನ ಅತ್ಯಂತ ಶ್ರೀಮಂತ ನಟ: ಇವರ ಒಟ್ಟು ಆಸ್ತಿ ಎಷ್ಟು ಕೋಟಿ ಗೊತ್ತಾ? title=
Anil Kapoor

Anil Kapoor Net Worth: ಬಾಲಿವುಡ್’ನ ಅತ್ಯಂತ ಶ್ರೀಮಂತ ನಟರಲ್ಲಿ ಅನಿಲ್ ಕಪೂರ್ ಕೂಡ ಒಬ್ಬರು. ಇವರ ಆಸ್ತಿ 134 ಕೋಟಿ ರೂ. ಪ್ರತಿ ವರ್ಷ 12 ಕೋಟಿಗೂ ಹೆಚ್ಚು ಸಂಪಾದನೆ ಮಾಡುತ್ತಾರಂತೆ. ಒಂದು ಚಲನಚಿತ್ರಕ್ಕೆ 2-4 ಕೋಟಿ ರೂಪಾಯಿಗಳವರೆಗೆ ಶುಲ್ಕವನ್ನು ವಿಧಿಸುವ ಅನಿಲ್, ಬ್ರಾಂಡ್ ಎಂಡಾರ್ಸ್‌ಮೆಂಟ್‌’ಗೆ 55 ಲಕ್ಷ ರೂ. ಪಡೆಯುತ್ತಾರೆ. ಇನ್ನು ಮುಂಬೈನ ಜುಹುದಲ್ಲಿ ಐಷಾರಾಮಿ ಬಂಗಲೆ ಹೊಂದಿದ್ದಾರೆ. ಇದರ ಬೆಲೆ 30 ಕೋಟಿ ರೂ.

ಇದನ್ನೂ ಓದಿ: ಬಾಕ್ಸ್ ಆಫೀಸ್ ಧೂಳಿಪಟ: ಮೂರೇ ದಿನಕ್ಕೆ 400 ಕೋಟಿ ರೂ. ಬಾಚಿದ ‘ಸಲಾರ್’!

ಅನಿಲ್ ಕಪೂರ್ ಕಳೆದ ನಾಲ್ಕು ದಶಕಗಳಿಂದ ತಮ್ಮ ನಟನೆಯ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಆದರೆ ಈ ಹಂತವನ್ನು ತಲುಪಲು ಅವರ ಪಟ್ಟ ಪಾಡು ಅಂತಿಂಥದಲ್ಲ. ಕಳೆದ ದಿನವಷ್ಟೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಒಂದು ಕಾಲದಲ್ಲಿ ಅನಿಲ್ ಕಪೂರ್ ಮತ್ತು ಅವರ ಕುಟುಂಬಕ್ಕೆ ವಾಸಿಸಲು ಸ್ವಂತ ಮನೆ ಕೂಡ ಇರಲಿಲ್ಲ. ಇ ಟೈಮ್ಸ್‌’ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಮುಂಬೈನ ಪೃಥ್ವಿರಾಜ್ ಕಪೂರ್ ಅವರ ಗ್ಯಾರೇಜ್‌’ನಲ್ಲಿ ಅನಿಲ್ ಕಪೂರ್ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದರು.

ತನ್ನ ವೃತ್ತಿಜೀವನದ ಆರಂಭದಲ್ಲಿ ಮನೆಯ ಖರ್ಚುಗಳನ್ನು ನಿಭಾಯಿಸಲೆಂದು ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಅನಿಲ್, 1979 ರಲ್ಲಿ 'ಹಮಾರೆ ತುಮ್ಹಾರೆ' ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆ ನಂತರ, 1980 ರಲ್ಲಿ ತೆಲುಗು ಚಿತ್ರ 'ವಂಶ ವೃಕ್ಷಂ' ನಲ್ಲಿ ಕೆಲಸ ಮಾಡಿದರು.

1983 ರಲ್ಲಿ ಅನಿಲ್ ಕಪೂರ್ ಅವರ 'ವೋ ಸಾತ್ ದಿನ್' ಚಿತ್ರ ಬಿಡುಗಡೆಯಾಯಿತು. ಇದರಲ್ಲಿ ಅವರು ಮೊದಲ ಬಾರಿಗೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದಾದ ನಂತರ ಅನಿಲ್ ಕಪೂರ್ ಹಿಂತಿರುಗಿ ನೋಡಲೇ ಇಲ್ಲ. 'ಬೇಟಾ', 'ಮಿಸ್ಟರ್ ಇಂಡಿಯಾ', 'ಮೇರಿ ಜಂಗ್', 'ಕರ್ಮ', 'ತೇಜಾಬ್', 'ಕಸಂ', 'ರಾಮ್ ಲಖನ್', 'ಹಮಾರಾ ದಿಲ್ ಆಪ್ಕೆ ಪಾಸ್ ಹೈ', 'ಲಾಡ್ಲಾ' ಮತ್ತು 'ನಾಯಕ್' ಮುಂತಾದ ಹಲವು ಉತ್ತಮ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಅನಿಲ್ ಕಪೂರ್ ಹಾಲಿವುಡ್ ಚಿತ್ರಗಳಲ್ಲೂ ತಮ್ಮ ನಟನಾ ಕೌಶಲ್ಯವನ್ನು ಪಸರಿಸಿದ್ದಾರೆ. ಈ ಪಟ್ಟಿಯಲ್ಲಿ ಸ್ಲಮ್‌ ಡಾಗ್ ಮಿಲಿಯನೇರ್ ಮತ್ತು ಮಿಷನ್ ಇಂಪಾಸಿಬಲ್: ಘೋಸ್ಟ್ ಪ್ರೋಟೋಕಾಲ್ ಸೇರಿವೆ. ಈ ಸಿನಿಮಾಗಳ ಮೂಲಕ ಅನಿಲ್ ಕಪೂರ್ ತಮ್ಮ ಕೌಶಲ್ಯವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.

ಇದನ್ನೂ ಓದಿ: ಭಾರತ ಅಥವಾ ಪಾಕಿಸ್ತಾನ ಅಲ್ಲ… ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆದ್ದ ಏಷ್ಯಾದ ಏಕೈಕ ತಂಡ ಇದು

ಅನಿಲ್ ಕಪೂರ್ ದುಬೈನಲ್ಲಿ 2 ಬೆಡ್ ರೂಂ ಅಪಾರ್ಟ್ ಮೆಂಟ್ ಹೊಂದಿದ್ದಾರೆ. ಲಂಡನ್‌’ನಲ್ಲಿಯೂ ಒಂದು ಮನೆಯನ್ನು ಹೊಂದಿರುವ ಅನಿಲ್ ಕಪೂರ್, BMW, Mercedes Benz S Class, Bentley, Jaguar ಮತ್ತು Audi ನಂತಹ ದುಬಾರಿ ಮತ್ತು ಐಷಾರಾಮಿ ಕಾರುಗಳ ಸಂಗ್ರಹವನ್ನು ಹೊಂದಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News