Ira Khan: ಲವರ್ ಜೊತೆ ಹೊಸ ಹಾಟ್ ವಿಡಿಯೋ ಹಂಚಿಕೊಂಡ ಅಮಿರ್ ಖಾನ್ ಪುತ್ರಿ!

ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಪುತ್ರಿ ಐರಾ ಖಾನ್ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಆಯ್ರಾ ತಮ್ಮ ವೈಯಕ್ತಿಕ ಜೀವನದ ಕಾರಣ ಹೆಚ್ಚು ಸುದ್ದಿಯಾಗುತ್ತಾರೆ. ಆಯ್ರಾ ಆಗಾಗ ತಮ್ಮ ಜೀವನಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಾರೆ.

Written by - Puttaraj K Alur | Last Updated : Jan 4, 2023, 11:34 AM IST
  • ತನ್ನ ಲವರ್ ನೂಪುರ್ ಜೊತೆಗಿನ ಹಾಟ್ ವಿಡಿಯೋ ಹಂಚಿಕೊಂಡ ಅಮಿರ್ ಖಾನ್ ಪುತ್ರಿ
  • ನವೆಂಬರ್ 2022ರ ನವೆಂಬರ್‍ನಲ್ಲಿ ನೂಪುರ್ ಶಿಖರೆ ಜೊತೆಗೆ ಐರಾ ನಿಶ್ಚಿತಾರ್ಥ ಮಾಡಿಕೊಂಡಿದ್ದರು
  • ತನ್ನ ಫಿಟ್ನೇಸ್ ಟ್ರೈನರ್ ಜೊತೆಗೆ 2 ವರ್ಷಗಳ ಡೇಟಿಂಗ್ ಮಾಡುತ್ತಿದ್ದ ಬಾಲಿವುಡ್ ಸೂಪರ್ ಸ್ಟಾರ್ ಪುತ್ರಿ
Ira Khan: ಲವರ್ ಜೊತೆ ಹೊಸ ಹಾಟ್ ವಿಡಿಯೋ ಹಂಚಿಕೊಂಡ ಅಮಿರ್ ಖಾನ್ ಪುತ್ರಿ! title=
ಹಾಟ್ ವಿಡಿಯೋ ಹಂಚಿಕೊಂಡ ಅಮಿರ್ ಖಾನ್ ಪುತ್ರಿ

ನವದೆಹಲಿ: ಬಾಲಿವುಡ್ ಸೂಪರ್‌ಸ್ಟಾರ್ ಅಮೀರ್ ಖಾನ್ ಪುತ್ರಿ ಇರಾ ಖಾನ್ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಆಯ್ರಾ ತಮ್ಮ ವೈಯಕ್ತಿಕ ಜೀವನದ ಕಾರಣದಿಂದಲೇ ಹೆಚ್ಚಾಗಿ ಸುದ್ದಿಯಾಗುತ್ತಾರೆ. ಆಯ್ರಾ ಆಗಾಗ ತಮ್ಮ ಜೀವನಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಐರಾ ಹಾಟ್ ಡ್ರೆಸ್‍ನಲ್ಲಿ ತಮ್ಮ ಭಾವಿ ಪತಿ ನೂಪುರ್ ಶಿಖರೆ ಜೊತೆಗೆ ಮೋಜು-ಮಸ್ತಿ ಮಾಡಿರುವ ಹಾಟ್ ವಿಡಿಯೋ ಹಂಚಿಕೊಂಡಿದ್ದಾರೆ. ಆಯ್ರಾ ಡೀಪ್ ನೆಕ್ ಬ್ಲೂ ಬಿಕಿನಿ ಟಾಪ್ ಧರಿಸಿದ್ದಾರೆ.

ಇದನ್ನೂ ಓದಿ: Earn Money: ನೌಕರಿಯನ್ನು ತೊರೆದು ಇಂದೇ ಈ ಬಿಸ್ನೆಸ್ ಆರಂಭಿಸಿ, ಒಂದು ತಿಂಗಳಿಗೆ 10 ಲಕ್ಷ ಆದಾಯ!

2 ವರ್ಷ ಡೇಟಿಂಗ್ ಮಾಡಿದ್ದ ಜೋಡಿ

ವಿಡಿಯೋದಲ್ಲಿ ಇಬ್ಬರೂ ವಿಚಿತ್ರ ಪ್ರಶ್ನೆಗಳಿಗೆ ಕಣ್ಣು ಮುಚ್ಚಿಕೊಂಡು ಸನ್ನೆಗಳ ಮೂಲಕ ಉತ್ತರ ನೀಡುತ್ತಿರುವುದು ಕಂಡು ಬಂದಿದೆ. ಮೊದಲು ಪ್ರಪೋಸ್ ಮಾಡಿದವರಂತೆ ಇಬ್ಬರಿಗೂ ಕೆಲವು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಯಾರು ಮೊದಲು ಯಾವುದನ್ನು ಪ್ರಾರಂಭಿಸಿದರು? ಇಬ್ಬರಲ್ಲಿ ಯಾರು ಸೋಮಾರಿ? ಇವೆರಡರಲ್ಲಿ ಯಾವುದು ಅಸಭ್ಯ? ಇಬ್ಬರಿಗೂ ಅವರ ಪ್ರೇಮ ಜೀವನ ಮತ್ತು ಪರಸ್ಪರರ ಬಗ್ಗೆ ಒಂದೇ ರೀತಿಯ ಪ್ರಶ್ನೆಗಳನ್ನು ಕೇಳಲಾಗಿತ್ತು. ಅದಕ್ಕೆ ಇಬ್ಬರೂ ಕೈ ಸನ್ನೆಗಳ ಮೂಲಕವೇ ಉತ್ತರಿಸಿದರು. ನವೆಂಬರ್ 2022ರಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ನೂಪುರ್ ಮೊದಲು Vacation ಸಮಯದಲ್ಲಿ ಐರಾಳಿಗೆ ಲವ್ ಪ್ರಪೋಸ್ ಮಾಡಿದ್ದನಂತೆ. ನಂತರ ಮುಂಬೈಗೆ ಬಂದ ಬಳಿಕ ಈ ಜೋಡಿ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ಬಹಳ ಸಂಭ್ರಮದಿಂದ ನಿಶ್ಚಿತಾರ್ಥ ಮಾಡಿಕೊಂಡಿತು. ಇಬ್ಬರೂ ಸುಮಾರು 2 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು.

ಇದನ್ನೂ ಓದಿ: PAN Card ಹೊಂದಿರುವವರಿಗೆ ಕಟ್ಟ ಕಡೆಯ ಎಚ್ಚರಿಕೆ ನೀಡಿದ ಆದಾಯ ತೆರಿಗೆ ಇಲಾಖೆ!

ಖಿನ್ನತೆಗೆ ಒಳಗಾಗಿದ್ದ ಐರಾ

ಲಾಕ್‌ಡೌನ್ ಸಮಯದಲ್ಲಿ ಈ ಜೋಡಿ ಪರಸ್ಪರ ಹತ್ತಿರವಾಗಿತ್ತು. ನೂಪುರ್ ಅವರು ಐರಾ ಫಿಟ್‌ನೆಸ್ ತರಬೇತುದಾರರಾಗಿದ್ದು, ಆಕೆಗೆ ಫಿಟ್‌ನೆಸ್ ತರಬೇತಿ ನೀಡುತ್ತಿದ್ದರು. ಇದಾದ ನಂತರ ಇಬ್ಬರೂ ಪರಸ್ಪರ ಹತ್ತಿರವಾಗ ಪ್ರೀತಿಸಲು ಶುರು ಮಾಡಿದರು. ಆಯ್ರಾ ವೃತ್ತಿಯಲ್ಲಿ ನಿರ್ದೇಶಕಿ, ಆಕೆ ಇತರ ಸ್ಟಾರ್‌ಕಿಡ್‌ಗಳಂತೆ ಜನಮನದಲ್ಲಿಲ್ಲ, ನಾಯಕಿಯಾಗಿ ಚಲನಚಿತ್ರಗಳಲ್ಲಿಯೂ ಕೆಲಸ ಮಾಡಲು ಬಯಸಿಲ್ಲವಂತೆ. ಕೆಲ ಸಮಯದ ಹಿಂದೆ ಐರಾ ತಾನು ಖಿನ್ನತೆಗೆ ಒಳಗಾಗಿರುವ ಬಗ್ಗೆ ಬಹಿರಂಗಪಡಿಸಿದ್ದಳು. ಈ ವೇಳೆ ಈ ವಿಷಯ ದೊಡ್ಡ ಸುದ್ದಿಯಾಗಿತ್ತು. ಖಿನ್ನತೆಗೆ ಸಂಬಂಧಿಸಿದ ಹಲವು ವಿಡಿಯೋಗಳನ್ನೂ ಆಯ್ರಾ ಹಂಚಿಕೊಂಡಿದ್ದರು. ಕೆಲವೊಮ್ಮೆ ಆಕೆ ಇಡೀ ದಿನ ಹಾಸಿಗೆಯ ಮೇಲೆಯೇ ಮಲಗಿ ಅಳುತ್ತಿದ್ದಳಂತೆ. ಮಾನಸಿಕ ಖಿನ್ನತೆಯಿಂದ ತನ್ನ ಆರೋಗ್ಯ ಹದಗೆಟ್ಟಿತ್ತು ಅಂತಾ ಐರಾ ಹೇಳಿಕೊಂಡಿದ್ದಳು. ಆದರೆ ಈಗ ಆಕೆಯ ಸ್ಥಿತಿ ಸಾಕಷ್ಟು ಸುಧಾರಿಸಿದೆ. ಏಕೆಂದರೆ ನೂಪುರ್ ಜೊತೆಗೆ ಐರಾಳ ಹೊಸ ಜೀವನ ಪ್ರಾರಂಭವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G

Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News